ವಿವಿಧ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ ಅರ್ಜಿ ಆಹ್ವಾನ

0
20
loading...

ಬೆಳಗಾವಿ 17: ಪ್ರಸಕ್ತ 2016-17ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ವಸತಿ ರಹಿತ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೈಯಕ್ತಿಕ ವಸತಿ ಕಾರ್ಯಾಗಾರಗಳನ್ನು ಪಡೆಯಲು ಫಲಾನುಭವಿಗಳು ವಸತಿ ಕಾರ್ಯಾಗಾರಕ್ಕೆ ನಿಗದಿಪಡಿಸಿದ ಅರ್ಜಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವೃತ್ತಿ ನಿರತ ಕುಶಲಕರ್ಮಿ ಪರಿಪತ್ರ, ಸ್ವಂತ ನಿವೇಶನದ ದಾಖಲೆಗಳು, ಈಗಿರುವ ಖಾಲಿ ಜಾಗೆ /ಗುಡಿಸಲು/ಶಿಥಿಲಗೊಂಡ ಮನೆಯ ಫೋಟೋಗಳು. ಈ ಎಲ್ಲ ದಾಖಲಾತಿಗಳನ್ನು ಹೊಂದಿರಬೇಕು.
ಅರ್ಹ ಕುಶಲಕರ್ಮಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಅಥವಾ ಬೆಳಗಾವಿ ಜಿಲ್ಲೆಯ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಂದ ಪಡೆದು ಎಲ್ಲ ಅವಶ್ಯಕ ದಾಖಲಾತಿಗಳೊಂದಿಗೆ ಮೇ 30 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2440430 ಸಂಪರ್ಕಿಸಬೇಕೆಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here