ಶಾಮ್ ಭಟ್, ಒಬ್ಬ ಕಪ್ಪು ಚುಕ್ಕೆ ಅಂಟಿಸಿಕೊಂಡ ಅಧಿಕಾರಿ: ಜೋಶಿ

0
19
loading...

ಹುಬ್ಬಳ್ಳಿ : ಶಾಂಭಟ್ ಅವರನ್ನು ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಜನವಿರೋಧಿ ಮುಖ ಈಗ ಪೂರ್ತಿ ಗೋಚರಿಸಿದಂತಾಗಿದೆ. ,ಅರ್ಕಾವತಿ ಡಿನೋಟಿಫಿಕೇಶನ್ ಅವ್ಯವಹಾರಗಳ ಮೂಲ ಪುರಷರೆಂದೇ ಪ್ರಸಿದ್ಧರಾಗಿರುವ ಭಟ್ ಅವರ ಇನ್ನೂ ಹಲವಾರು ವಿವಾದಾತ್ಮಕ ನಿರ್ಧಾರಗಳು ಹಾಗು ಬಿಡಿಎ ಅಧ್ಯಕ್ಷರಾಗಿ ಅವರು ತೆಗೆದುಕೊಂಡ ಅನೇಕ ಕಾನೂನು ವಿರೋಧಿ ಕ್ರಮಗಳು ಒಂದರಮೇಲೊಂದರಂತೆ ಅನಾವರಣಗೊಳ್ಳುತ್ತಲೇ ಇವೆ. ಈ ಎಲ್ಲಾ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸುತ್ತಿರುವ ಕೆಂಪಣ್ಣ ಆಯೋಗಕ್ಕೆ ಸಂಭಂದಿಸಿದ ಹಲವಾರು ಮಹತ್ವದ ಕಡತಗಳೇ ಮಾಯವಾಗಿರುವದರ ಹಿಂದೆ ಯಾರ ಕೈವಾಡ ವಿದೆಯೆಂಬುದನ್ನು ಯಾರಾದರೂ ಊಹಿಸಬಹುದು., ಅರ್ಕಾವತಿ ಡಿನೋಟಿಫಿಕೇಶನ್ ಅವ್ಯವಹಾರಗಳಲ್ಲದೇ ಭಟ್ ಅವರ ವಿರುದ್ಧ ಇನ್ನೂ ಹಲವಾರು ಅಪಾದನೆಗಳು ಕೇಳಿಬರುತ್ತಿದ್ದು ಒಟ್ಟಾರೆ ಇವರು ಒಬ್ಬ ಕಪ್ಪು ಚುಕ್ಕೆ ಅಂಟಿಸಿಕೊಂಡ ಅಧಿಕಾರಿ. ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

loading...

LEAVE A REPLY

Please enter your comment!
Please enter your name here