ಶ್ರೀ ದುರ್ಗಾದೇವಿಗೆ ಅಭಿಷೇಕ, ಕುಂಕುಮಾರ್ಚನೆ ನಡೆಯಿತು

0
49
loading...

ಮುಂಡರಗಿ : ಇಲ್ಲಿಯ ಕೋಟೆಭಾಗದ ಶ್ರೀ ದುರ್ಗಾದೇವಿ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ದೇವಿಗೆ ನೂರಾರು ಭಕ್ತರಿಂದ ಊಡಿ ತುಂಬುವ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ 5 ಗಂಟೆಗೆ ಶ್ರೀ ದುರ್ಗಾದೇವಿಗೆ ಅಭಿಷೇಕ, ಕುಂಕುಮಾರ್ಚನೆ ನಡೆಯಿತು. ನಂತರ ಪಟ್ಟಣದ ಸಾರ್ವಜನಿಕರಿಂದ ಹಾಗೂ ಸುಮಂಗಳೆಯರು ಸಂಜೆವರೆಗೆ ದೇವಿಗೆ ಊಡಿ ತುಂಬುವುದರ ಮೂಲಕ ನೂರಾರು ಭಕ್ತರು ಭಕ್ತಿಭಾವ ಮೆರೆದರು.
ದುರ್ಗಾದೇವಿ ದೇವಸ್ಥಾನ ಜಾತ್ರಾ ಕಮೀಟಿ ಅಧ್ಯಕ್ಷ ವಾಸಣ್ಣ ದಂಡಿನ, ಉಪಾಧ್ಯಕ್ಷ ಲಕ್ಷ್ಮಪ್ಪ ಕುರಿ, ಕಾರ್ಯದರ್ಶಿ ಅಂದಪ್ಪ ಶಿ ಹಂದ್ರಾಳ, ಪುರಸಭೆ ಉಪಾಧ್ಯಕ್ಷ ಮುದುಕಪ್ಪ ಕುಂಬಾರ, ದೇವಸ್ಥಾನ ಅರ್ಚಕ ಅಂದಪ್ಪ ಪೂಜಾರ, ದೇವಪ್ಪ ಡೋಣ್ಣಿ, ಮರಿಯಪ್ಪ ಡೋಣ್ಣಿ, ದುರಗಪ್ಪ ರಾಮೇನಹಳ್ಳಿ, ಶೇಖಪ್ಪ ಹಂದ್ರಾಳ, ಈರಪ್ಪ ಅಳವಂಡಿ, ನೀಲಪ್ಪ ಚಿಕ್ಕಣ್ಣವರ, ಯಲ್ಲಪ್ಪ ಡೋಣ್ಣಿ, ಶಂಕ್ರಪ್ಪ ರಾಮೇನಹಳ್ಳಿ, ಸೇರಿದಂತೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here