ಸಮುದಾಯ ಭವನ ನಿರ್ಮಾಣಕ್ಕೆ 1.70 ಕೋಟಿ ರೂ. ಮಂಜೂರು

0
20
loading...

ನಿಪ್ಪಾಣಿ 03: ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 1.70 ಕೋಟಿ ರೂ., ಮತ್ತು ಡಾ.ಬಾಬು ಜಗಜೀವನರಾಮ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳು ಹೀಗೆ ಒಟ್ಟು 2.20 ಕೋಟಿ ರೂ.ಗಳು ಮಂಜೂರಾಗಿವೆ ಎಂದು ಕರ್ನಾಟಕ ರಾಜ್ಯ ದಲಿತ ಮಹಾಸಂಘ(ಅಂಬೇಡ್ಕರ್‍ವಾದ)ದ ಅಶೋಕ ಲಾಖೆ ಹೇಳಿದರು.
ಮಂಗಳವಾರದಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ)ಯ ಪ್ರಯತ್ನದಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ನಿಧಿ ಮಂಜೂರಾಗಿದೆ ಎಂದರು.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಸರ್ವೆ ನಂ.26ರಲ್ಲಿ 10 ಸಾವಿರ ಚ.ಅಡಿ ಜಾಗವನ್ನು ಮಂಜೂರು ಮಾಡಲಾಗಿದೆ.ಮೊದಲನೇ ಹಂತವಾಗಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು,ಒಂದು ವಾರದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು.
ಅದೇ ರೀತಿ ಭೀಮನಗರದಲ್ಲಿ ಡಾ.ಬಾಬು ಜಗಜೀವನರಾಮ ಭವನ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು.ಡಾ.ಅಂಬೇಡ್ಕರರು ಸ್ವತಃ ನಿಪ್ಪಾಣಿಯಲ್ಲಿ ನೆಲೆಸಿರುವುದರ ಸವಿನೆನಪಿಗಾಗಿ ಒಂದು ಭವ್ಯ ಭವನ ನಿರ್ಮಾಣವಾಗಬೇಕು ಎಂಬ ಕ್ಷೇತ್ರದ ಸಮಸ್ತ ದಲಿತರ ಆಸೆ ನನಸಾಗುವತ್ತ ದಾಪುಗಾಲು ಇಟ್ಟಿದೆ.
ವಿಶೇಷತೆ ಎಂದರೆ ಈ ಭವನ ನಿರ್ಮಾಣಕ್ಕೆ ಯಾವೊಬ್ಬ ಸ್ಥಳೀಯ ರಾಜಕೀಯ ಮುಖಂಡರ ಶಿಫಾರಸ್ಸು ಅಥವಾ ಸಹಾಯ ಲಭಿಸಿಲ್ಲ.ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಅವರ ಪ್ರಯತ್ನದಿಂದ ಸಚಿವ ಎಚ್.ಆಂಜನೇಯ ಅವರು ಈ ನಿಧಿ ಮಂಜೂರು ಮಾಡಿದ್ದಾರೆ ಎಂದರು.ಡಿಎಸ್‍ಎಸ್ ರಾಜ್ಯ ಸಂಚಾಲಕ ಕೆಂಪಣ್ಣ ಕಾಂಬಳೆ,ಚಿಕ್ಕೋಡಿ ದಲಿತ ಮುಖಂಡ ಶೇಖರ್ ಪ್ರಭಾತ್,ಜಿಲ್ಲಾ ಸಂಚಾಲಕ ಬಸವರಾಜ ಢಾಕೆ,ಅಂಬೇಡ್ಕರ್ ವಿಚಾರ್ ಮಂಚ ಅಧ್ಯಕ್ಷ ಪ್ರೊ.ಸುರೇಶ ಕಾಂಬಳೆ,ಪ್ರತಾಪ್ ಮೇತ್ರಾಣಿ,ವಿಕ್ರಂ ಶಿಂಘಾಡೆ,ಅವಿನಾಶ ಮಾನೆ,ಬಸವರಾಜ ತಳವಾರ,ರೇಖಾ ಕಾಂಬಳೆ,ಸುಶೀಲ ಕಾಂಬಳೆ,ವಿಜಯಕುಮಾರ ಶಾಸ್ತ್ರೀ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here