ಹಿಂದೂ ಧರ್ಮ ಭಾರತ ಮೂಲ ಧರ್ಮ ಉಳಿದವುಗಳೆಲ್ಲ ವಲಸೆ ಧರ್ಮ: ಜಗದೀಶ ಕಾರಂತ

0
37
loading...

ಭಟ್ಕಳ : ಹಿಂದೂ ಧರ್ಮ ಭಾರತದ ಮೂಲ ಧರ್ಮವಾಗಿದ್ದು ಉಳಿದವುಗಳೆಲ್ಲವೂ ಭಾರತಕ್ಕೆ ವಲಸೆ ಬಂದವುಗಳು. ಇಸ್ಲಾಂ ಸೌದಿ ಅರೇಬಿಯಾದಲ್ಲಿ ಹುಟ್ಟಿದ್ದರೆ, ಕ್ರೈಸ್ತ ಮತ ಹುಟ್ಟಿದ್ದು ವ್ಯಾಟಿಕನ್‍ನಲ್ಲಿ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತೀಯ ಪ್ರಮುಖ ಜಗದೀಶ ಕಾರಂತ್ ಹೇಳಿದರು.
ಅವರು ಶಿರಾಲಿಯಲ್ಲಿ ನಡೆದ ಬೃಹತ್ ಯುವ ಹಿಂದೂ ಸಮಾವೇಶವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ನಾವೆಂದೂ ಇಸ್ಲಾಂ ಹಾಗೂ ಕ್ರೈಸ್ತ ಮತಗಳ ವಿರೋಧಿಗಳಲ್ಲ. ಹಿಂದೂ ಸಂಸ್ಕøತಿಯು ಸಮಸ್ತ ಮಾನವ ಕುಲವನ್ನೇ ಒಂದು ಎಂತಾ ಎಲ್ಲಾ ಜನರು ಸುಖವಾಗಿರಲಿ ಎಂದು ಹಾರೈಸುವ ಧರ್ಮವಾಗಿದೆ. ನಾವು ಯಾವುದೇ ಕೆಲಸ ಮಾಡಿದರೂ ಸಹ ಅದನ್ನು ಲೋಕ ಕಲ್ಯಾಣಾರ್ಥವಾಗಿ ಮಾಡುತ್ತೇವೆ. ಮತೀಯ ನೆಲೆಯಲ್ಲಿ ನಾವು ಯಾರನ್ನೂ ಕೂಡಾ ಇಲ್ಲಿಯ ತನಕವೂ ದೂರ ಮಾಡಿಲ್ಲ, ಅಂದು ದೇಶ ವಿಭಜನೇ ಮಾಡುವಾಗಲೆ ಹುಟ್ಟಿದ ಕೂಸು ಹಿಂದೂ – ಮುಸ್ಲಿಂ ಬೇಧಭಾವ. ನಮ್ಮಲ್ಲಿ ನೆಲೆ ನಿಲ್ಲುವುದಕ್ಕೆ ಬಂದವರಿಗೆ ನಾವು ಆಶ್ರಯ ನೀಡಿದ್ದೇವೆ. ಆದರೆ ನೆಲೆ ನಿಲ್ಲಲು ಬಂದವರು ಭಾರತ್ ಮಾತಾಕಿ ಜೈ ಎಂದರೆ ಎನು ತಪ್ಪಿದೆ ಎಂದು ಕೇಳಿದ ಕಾರಂತ್ ಇದು ಇವರ ತಪ್ಪಲ್ಲ, ಅಂದು ಭಾರತ ವಿಭಜನೆಯನ್ನು ಮಾಡಿದ್ದ ಮಹಮ್ಮದ್ ಅಲಿ ಜಿನ್ನಾನೆ ಹೇಳಿದ್ದ, ನಾವು ಭಾರತ್ ಮಾತಾಕಿ ಜೈ ಎನ್ನುವುದಿಲ್ಲ ಎಂದು. ಇಂದು ಅದನ್ನೇ ಓವೈಸಿ ಹೇಳುತ್ತಿದ್ದಾನೆ ಎಂದರು.
1947ರಲ್ಲಿ ಪಾಕಿಸ್ಥಾನದಲ್ಲಿ ಶೇ.40 ರಷ್ಟು ಹಿಂದೂಗಳಿದ್ದರೆ ಇಂದು ಕೇವಲ ಶೇ.1ರಷ್ಟಿದ್ದಾರೆ. ಅಲ್ಲಿ ಹಿಂದೂಗಳನ್ನು ಮೃಗೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಅಂದು ಶೇ.4ರಷ್ಟಿದ್ದ ಮುಸ್ಲಿಂ ಸಂಖ್ಯೆ ಇಂದು ಶೇ.14 ಆಗಿದೆ. ಅಮಾಯಕರನ್ನು ಕೊಲ್ಲುವುದು ಯಾವ ಭಯ ಉತ್ಪಾದನೆ? ಎಂದು ಖಾರವಾಗಿ ಪ್ರಶ್ನಿಸಿದ ಜಗದೀಶ ಕಾರಂತ್ ಭಾರತದಲ್ಲಿ ಇಸ್ಲಾಮಿಕ್ ರಾಷ್ಟ್ರವನ್ನು ಕಟ್ಟುವುದು ಈ ಭಯೋತ್ಪಾದನೆಯ ಹಿಂದಿರುವ ಉದ್ದೇಶವಾಗಿದೆ. ಭಾರತದಲ್ಲಿ ಭಯೋತ್ಪಾದನೆ ಮಾಡುವವರನ್ನು ಅಮಾಯಕರು ಎಂದು ಬಿಂಬಿಸುವ ಸೆಕ್ಯುಲರ್ ವಾದಿಗಳು ನಿವಾದ ದೇಶದ್ರೋಹಿಗಳು ಎಂದು ಹೇಳಿದ ಅವರು ಭಟ್ಕಳ ಸಹೋದರರು ಹುಟ್ಟು ಹಾಕಿದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್, ಇಕ್ಬಾಲ್, ಅರ್ಮಾರ್ ಸೇರಿದಂತೆ ಅನೇಕರು ಇಂದು ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸುವದೇ ಇವರ ಮುಖ್ಯ ಉದ್ದೇಶವಾಗಿದೆ. ಇಂದು ಹೊಸದಾಗಿ ಹುಟ್ಟಿಕೊಂಡಿರುವ ಐಸಿಸ್ ಉಗ್ರ ಸಂಘಟನೆ ಉದ್ದೇಶ ಜಗತ್ತನ್ನೇ ಇಸ್ಲಾಮೀಕರಣಗೊಳಿಸುವುದಾಗಿದೆ. ಐಸಿಸ್ ಸ್ವತಹ ಇಸ್ಲಾಂ ವಿರೋಧಿಯಾಗಿದ್ದು ಇದಕ್ಕೆ ಹಣ ಹರಿದು ಬಂದಿದ್ದೇ ಯಾಜೀದಿ ಹೆಣ್ಣು ಮಕ್ಕಳ ಮಾರಾಟದಿಂದಾಗಿದಾಗಿದೆ. ಆ ಹೆಣ್ಣು ಮಕ್ಕಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡ ಸಂಘಟನೆಯದು ಎಂದರು. ಭಯೋತ್ಪಾದನೆಯನ್ನು ವಿರೋಧಿಸುವುದೇ ಆದಲ್ಲಿ ಭಟ್ಕಳದ ಭಯೋತ್ಪಾದಕರ ವಿರುದ್ಧ ಇನ್ನೂ ತನಕ ಇಲ್ಲಿನ ಸಂಘಟನೆಗಳು ಫತ್ವಾ ಯಾಕೆ ಹೊರಡಿಸಿಲ್ಲ ಎಂದು ಕೇಳುವ ಕಾರಂತರು ಭಟ್ಕಳದಲ್ಲಿ ಯಾರದ್ದೇ ಬಂಧನವಾದರೂ ಅವನು ಅಮಾಯಕ ಎಂದು ಬೆಂಬಲಿಸುವ ಸಂಘಟನೆ ಸಾಕ್ಷಾಧಾರಗಳ ಸಹಿತ ಬಂಧನವಾದವರ ಕುರಿತು ಯಾಕೆ ಚಕಾರ ಎತ್ತುತ್ತಿಲ್ಲ ಎಂದೂ ಪ್ರಶ್ನಿಸಿದರು.
1993ರ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಭಟ್ಕಳ ಒಂದು ದೇಶದ್ರೋಹಿಗಳ ತಾಣ ಎಂದು ಹೇಳಲಾಗಿದೆ. ಭಟ್ಕಳದ ಯಾರ್ಯಾರು ಭಯೋತ್ಪಾದನಾ ಕೃತ್ಯದಲ್ಲಿ ಹೆಸರು ಕೇಳಿ ಬಂದಿದೆ ಅವರನ್ನೆಲ್ಲ ಇಸ್ಲಾಂ ವಿರೋಧಿಗಳೆಂಬು ಭಟ್ಕಳದ ಮುಸ್ಲೀಮ್ ಸಂಘಟನೆ ಸಾರಲಿ ಎಂದು ಕೋರಿದ ಅವರು ಸಮಾಜದ ಸುರಕ್ಷತೆ ಮುಖ್ಯವಾಗಿದೆ. ಇಂದು ಸಮಾಜದ ಸುರಕ್ಷತೆಗೇ ಬೆಂಕಿ ಬಿದ್ದಿದೆ ಎಂದಾದರೆ ನಾವು ಹೇಗೆ ಸುರಕ್ಷಿತವಾಗಿಲು ಸಾಧ್ಯ. ನಮ್ಮ ಅಕ್ಕ ತಂಗಿಯರು ಇಂದು ದೇವಸ್ಥಾನಕ್ಕೆ ಹೋದವರು ವಾಪಾಸು ಬರುತ್ತಾರೆನ್ನವ ನಂಬಿಕೆಯೇ ಇಲ್ಲವಾಗಿದೆ. ಎಲ್ಲಿ ಯಾವಾಗ ಬೇಕಾದರೂ ಬಾಂಬ್ ಸಿಡಿಸಬಹುದೆಂದಾದರೆ ನವiಗೆ ಭದ್ರತೆ ಎಲ್ಲಿದೆ ಎಂದೂ ಪ್ರಶ್ನಿಸಿದರು.
ಕೇರಳದ ಕಡಲ ತೀರ ಇಂದು ಸಂಪೂರ್ಣ ಇಸ್ಲಾಮೀಕರಣಗೊಂಡಿದ್ದರೆ, ತಮಿಳುನಾಡು ಕಡಲ ತೀರವೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕದ ಹಲವು ಕಡಲ ತೀರಗಳು ಈಗಾಗಲೇ ಅವರ ವಶವಾಗಿದ್ದು, ಅಲ್ಲಲ್ಲಿ ಬೇನಾಮಿ ಹೆಸರಿನಲ್ಲಿ ಖರೀಧಿ ಆರಂಭವಾಗಿದೆ ಎಂದು ಜಾಗೃತಿ ಮೂಡಿಸಿದರು.
ಭಟ್ಕಳದಲ್ಲಿ ಮುಸ್ಲೀಂ ಮೂಲಭೂತವಾದಿಗಳು ಹಿಂದೂಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನ ಹಿಂದೂಗಳಲ್ಲಿ ಜಾತಿಯ ಬೀಜವನ್ನು ಬಿತ್ತಿ ಸಮಾಜವನ್ನು ಜಾತಿಯ ನೆಲೆಯಲ್ಲಿ ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸರಕಾರವೂ ಕೂಡಾ ಹಿಂದೂಗಳ ದಮನ ಮಾಡಲು ಹೊರಟಿದೆ. ಸರಕಾರದ ಮೌಢ್ಯ ಕಾನೂನು ಹಿಂದೂಗಳ ಮೇಲೆ ಮಾತ್ರ ಅಸ್ತ್ರ ಪ್ರಯೋಗಿಸ ಬಲ್ಲದು. ಮುಸ್ಲೀಂ ಆಚರಣೆಯಲ್ಲಿ, ಕ್ರೈಸ್ತರ ಆಚರಣೆಯಲ್ಲಿ ಮೌಢ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು ಹಿಂದೂಗಳ ಆಚರಣೆಗಳ ಮೇಲೆ ನಿಷೇಧ ಹೇರುವುದೇ ಮೌಢ್ಯದ ಉದ್ದೇಶ ಎಂದರು. ಹಿಂದೂಗಳು ಧಾರ್ಮಿಕ ಹಬ್ಬಕ್ಕಾಗಿ ಕುರಿ, ಕೋಳಿ ಬಲಿಕೊಡುವುದನ್ನು ತಡೆಯುವ ಜಿಲ್ಲಾ ಆಡಳಿತ, ಬಕ್ರೀದ್ ಹೆಸರಿನಲ್ಲಿ ಸಾವಿರಾರು ದನ, ಎಮ್ಮೆ, ಕೋಣಗಳನ್ನು ಬಲಿ ಕೊಡಲಾಗುತಿತರುವದಕ್ಕೆ ಯಾವುದೇ ಅಡ್ಡಿ ಆತಂಕಗಳನ್ನು ಮಾಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು ಮಸೀದಿಯ ಮುಂದೆ ಮದುವೆ ದಿಬ್ಬಣ ಹೋದರೆ ತೊಂದರೆಯಾಗುತ್ತದೆಂದು ಕಲ್ಲು ಹೊಡೆಯುವ ಇವರು ದಿನಾಲು ಐದು ಬಾರಿ ಕೂಗುವುದಕ್ಕೆ ಮೈಕ್ ಪರವಾನಿಗೆ ಪಡೆದುಕೊಂಡಿದ್ದಾರೆಯೇ ಎಂದೂ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಆನಂದ ನಾಯ್ಕ, ನ್ಯಾಯವಾದಿ ರಾಜೇಶ ನಾಯ್ಕ, ಪ್ರಮುಖರಾದ ವೆಂಕಟೇಶ ಪ್ರಭು, ನಾರಾಯಣ ಹೊನ್ನಿಮನೆ, ನಾರಾಯಣ ದೇವಡಿಗ, ಕೃಷ್ಣಾ ಎಸಳೆ, ಸತೀಶ ಭಟ್ಟ ಮುಂತಾದವರಿದ್ದರು.
ದತ್ತಾ ನಾಯ್ಕ ಸ್ವಾಗತಿಸಿದರು. ತುಳಸೀದಾಸ ಹೆಬಳೆ ವಯಕ್ತಿಕ ಗೀತೆ ಹಾಡಿದರು. ಅಣ್ಣಪ್ಪ ನಾಯ್ಕ ನಿರೂಪಿಸಿದರು.
ಇದಕ್ಕೂ ಪೂರ್ವ ಸಾವಿರಾರು ಜನರು ಹಳೇಕೋಟೆ ಹನುಮಂತ ದೇವಸ್ಥಾನದಿಂದ ಶೋಭಾಯಾತ್ರೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.

loading...

LEAVE A REPLY

Please enter your comment!
Please enter your name here