ಅಂತರಾಷ್ಟ್ರಿಯ ಯೋಗ ದಿನ ಆಚರಣೆ

0
49
loading...

ಮುಂಡರಗಿ : ಸ್ಥಳೀಯ ಶ್ರೀ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಅಂತರಾಷ್ಟ್ರಿಯ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಚೇರಮನ್ನರಾದಡಾ.ಅನ್ನದಾನಿ ಮೇಟಿ ಮಾತನಾಡಿ, ವಿದ್ಯಾರ್ಥಿಗಳು ನಿತ್ಯಯೋಗಾಭ್ಯಾಸ ಮಾಡುವದರಿಂದಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದ್ದು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದುಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಎಸ್.ಎಂ.ಹೊಸಮಠ ಮಾತನಾಡಿ, ವಿದ್ಯಾರ್ಥಿಜಿವನದಿಂದಲೇಯೋಗಕಲಿತರೆಜೀವನಪರ್ಯಂತಆರೋಗ್ಯವಾಗಿರಬಹುದಾಗಿದೆ. ಯೋಗ ಹಾಗೂ ಧ್ಯಾನ ಮಾಡುವದರಿಂದ ಮನಸ್ಸಿನಲ್ಲಿನ ಆತಂಕ ಮತ್ತು ಭಯದೂರವಾಗಿಆತ್ಮಸ್ಥೈರ್ಯ ಮೂಡಿ ಸವಾಲಗಳನ್ನು ಎದುರಿಸಲು ಸಾಧ್ಯವಾಗುತ್ತದೆಎಂದು ತಿಳಿಸಿದರು.
ಯೋಗತರಬೇತುದಾರ ಮಂಜುನಾಥ ಅಳವಂಡಿ ಯೋಗಾಭ್ಯಾಸ ನೀಡುವದರೊಂದಿಗೆಯೋಗದ ಮಹತ್ವವನ್ನು ತಿಳಿಸಿಕೊಟ್ಟರು.
ಈ ವೇಳೆ ಶಾಲಾ ಸುಧಾರಣಾ ಸಮಿತಿಯ ಸರ್ವ ಸದಸ್ಯರು,ಪ್ರ.ಶಿ. ಜೆ.ಎಸ್. ನಾರ್ಶಿ ಮತ್ತುಎಸ್.ಪಿ ಸಾವಕಾರಸೇರಿದಂತೆ ಶಾಲಾ ಸಿಬ್ಬಂದಿ ಹಾಜರಿದ್ದರು. ಸಹನಾ ಹಿರೇಮಠ ಪ್ರಾರ್ಥಿಸಿದರು.ಐ.ಎಸ್. ಹಿರೇಮಠ ನಿರೂಪಿಸಿ ಆರ್. ವ್ಹಿ.ಕಡಿವಾಲರವಂದಿಸಿದರು.

loading...

LEAVE A REPLY

Please enter your comment!
Please enter your name here