ಅರಣ್ಯದ ಜೊತೆ ಮಾನವ ಅಹಂಕಾರಿಯಾಗಿದ್ದಾನೆ: ಡಾ. ಬೋರಲಿಂಗಯ್ಯ

0
22
loading...

ದಾಂಡೇಲಿ : ವೇಗವಾಗಿ ಬೆಳೆಯುತ್ತಿರುವ ವೈಜ್ಞಾನಿಕ ಯುಗದಲ್ಲಿ ಸಮೃದ್ದ ಪರಿಸರ ವಿನಾಶಗೊಳ್ಳುತ್ತಿದೆ. ಅರಣ್ಯದ ಜೊತೆ ಮಾನವ ಅಹಂಕಾರಿಯಾಗುತ್ತಿರುವುದರಿಂದ ಪರಿಸರ ನಾಶವಾಗುತ್ತಿದ್ದು, ಪರಿಣಾಮವಾಗಿ ಹವಾಮಾನದಲ್ಲಿ ಏರಿಳಿತವನ್ನು ಕಾಣುತ್ತಿದ್ದೇವೆ. ಅರಣ್ಯದ ಜೊತೆ ಹೊಂದಿಕೊಂಡು ಬದುಕು ನಡೆಸಿದಾಗÀ ಮಾತ್ರ ಹಚ್ಚ ಹಸಿರಿನ ಅರಣ್ಯವನ್ನು ಮುಂದಿನ ಪೀಳಿಗೆಗೆ ಒಯ್ಯಬಹುದಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಉಪ ಕುಲಪತಿ ಡಾ: ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಅವರು ಶನಿವಾರ ನಗರದ ಜನತಾ ವಿದ್ಯಾಲಯದ ಸಭಾಭವನದಲ್ಲಿ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಗ್ರೀನ್ ಇಂಡಿಯಾ ಟ್ರಸ್ಟ್ ದಾಂಡೇಲಿ ಮತ್ತು ಜನತಾ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಮತ್ತು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವೈಶಿಷ್ಟ್ಯಪೂರ್ಣ ಮತ್ತು ಜಗತ್ತಿನ ಗಮನ ಸೆಳೆದ ಅರಣ್ಯ ಸಂಪತ್ತನ್ನು ಹೊಂದಿದ ಉತ್ತರಕನ್ನಡ ಜಿಲ್ಲೆಗೆ ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಎಲ್ಲ ಯೋಜನೆಗಳು ಬಂದವು. ರಾಜ್ಯಕ್ಕಾಗಿ ಎಲ್ಲವನ್ನು ತೆತ್ತ ಈ ಜಿಲ್ಲೆಗೆ ಸತತ ಅನ್ಯಾಯವಾಗುತ್ತಿದೆ. ಈ ಜಿಲ್ಲೆಯ ಸುಂದರ ಪರಿಸರವನ್ನು ಅನೇಕ ಕನ್ನಡ ಸಾಹಿತ್ಯಗಳು ಕಟ್ಟಿಕೊಟ್ಟಿರುವುದನ್ನು ಸ್ಮರಿಸಿಕೊಂಡ ಅವರು ಪರಿಸರವೆ ಸಾಹಿತ್ಯ ರಚನೆಗೆ ಪ್ರೇರಕ ಶಕ್ತಿ. ಪರಿಸರದಿಂದ ಸಾಹಿತ್ಯವನ್ನು ಕಟ್ಟಬಹುದು, ಸಾಹಿತ್ಯದಿಂದ ಪರಿಸರವನ್ನು ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಸಾಹಿತ್ಯಕ್ಕೆ ಮಹತ್ವದ ಸಂಬಂಧವಿದೆ ಎಂದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ: ರಮೇಶ ಅವರು ಅರಣ್ಯವಿದ್ದರೆ ಬದುಕು, ಜನ ಜೀವನ. ಪರಿಸರವನ್ನೆ ಅವಲಂಭಿಸಿ ಬದುಕು ಸವೆಸುವ ನಾವು ನಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಗೊಳಿಸದೆ ಪರಿಸರ ಸಂರಕ್ಷಣೆ ಮಾಡುವ ಪಣತೊಡಬೇಕು. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಸೇನಾನಿಗಳಾದಾಗ ಹಸಿರ ನಾಡು ನಿರ್ಮಾಣವಾಗಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಶ್ರೀನಿವಾಸುಲು, ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ, ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ಕೆ.ಜಿ.ಗಿರಿರಾಜ ಅವರುಗಳು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಧ್ವನಿಯಾಗಬೇಕು. ವಿದ್ಯಾರ್ಥಿ ಶಕ್ತಿ ಜಾಗೃತವಾದರೆ ಇಡೀ ಸಮಾಜ ಜಾಗೃತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಕರಾಗಬೇಕೆಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಜನತಾ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಪಿ.ಮಹೇಂದ್ರಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಎನ್.ಜಯಚಂದ್ರನ್, ತಾಲೂಕು ಕಸಾಪ ಅಧ್ಯಕ್ಷ ಉಪೇಂದ್ರ ಘೋರ್ಪಡೆ ಉಪಸ್ಥಿತರಿದ್ದರು. ಜೆವಿಡಿ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯ ಮೂಲಕ ಆರಂಭಗೊಂಡ ಕಾರ್ಯಕ್ರಮಕ್ಕೆ ಉಪೇಂದ್ರ ಘೋರ್ಪಡೆ ಸ್ವಾಗತಿಸಿದರು. ಬಿ.ಪಿ.ಮಹೇಂದ್ರಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ತಾಲೂಕು ಕಾರ್ಯದರ್ಶಿ ಎಸ್.ಎಸ್.ಪೂಜಾರ ವಂದಿಸಿದರು. ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಎನ್.ಆರ್.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here