ಎಡೆಬೀಡದೇ ಸುರಿದ ಬಾರಿ ಮಳೆ : ಹಲವು ಮನೆಗಳು ಜಲಾವೃತ್ತ

0
32
loading...

ಭಟ್ಕಳ : ಭಟ್ಕಳದಲ್ಲಿ ಶನಿವಾರ ಸುರಿದ ಮಳೆ ಗಾಳಿ ಬಾರಿ ಅವಾಂತರವನ್ನೇ ಸೃಷ್ಠಿ ಮಾಡಿ ಹೋಗಿದೆ. ಶುಕ್ರವಾರದ ರಾತ್ರಿಯಿಂದ ಎಡೆಬೀಡದೇ ಸುರಿದ ಮಳೆ ಮತ್ತು ಗಾಳಿಗೆ ತಾಲೂಕಿನ ಅನೇಕ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾದರೇ ಇನ್ನೂ ಕೆಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ.
ಸಿದ್ದಿಕ್ ಸ್ಟ್ರೀಟ್‍ನ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಫಕ್ಕಿ ಇಸ್ಮಾಯಿಲ್ ಹಾಗೂ ಅವರ ಪತ್ನಿ ನಸೀಮಾರವರಿಗೆ ಪೆಟ್ಟಾಗಿರುತ್ತದೆ. ಇನ್ನೂ ನಿನ್ನೆ ಬಿಸೀದ ಬಾರಿ ಗಾಳಿಗೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಮುಂಡಳ್ಳಿಯಲ್ಲಿ ಮೂರು ಮನೆಗೆ ಬೆಳ್ನಿಯಲ್ಲಿ ಎರಡು ಮನೆಗೆ ಹಾಗು ಸೋನಾರಕೇರಿಯಲ್ಲಿ ಒಂದು ಮನೆಗೆ ಹಾಗೂ ಮಾವಳ್ಳಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿರುತ್ತದೆ. ಸೋನಾರಕೇರಿ ಲಕ್ಷೀ ನಾರಾಯಣ ದೇವಸ್ಥಾನದ ಎದುರು ಬೃಹತ್ ಗಾತ್ರದ ಆಲದ ಮರ ಹಾಗು ಹಲಸಿನ ಮರ ಬುಡ ಸಮೇತ ಮುರಿದು ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಯಿತು. ನಿನ್ನೆ ಸುರೀದ ಬಾರಿ ಮಳೆಗೆ ಆಜಾದ ನಗರ, ಮುಂಢಳ್ಳಿ, ಮಣ್ಕುಳಿ ಹಾಗು ಮೂಢಭಟ್ಕಳನಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ಐ.ಆರ್.ಬಿ ಕಂಪನಿಯವರು ಹೈವೆ ಕಾವiಗಾರಿ ನಡೆಸುವ ವೇಳೆ ನೀರು ಹೋಗಲು ಸರಿಯಾದ ಮಾಗ ನಿರ್ಮಿಸಿದ ಕಾರಣ ಮಣ್ಕುಳಿ ಹಾಗೂ ಮೂಡಭಟ್ಕಳ ಹೈವೆ ಬದಿಯಲ್ಲಿರುವ ಪ್ರತಿ ಮನೆಗೂ ನೀರು ನುಗ್ಗಿ ಬಾರಿ ಆವಾಂತರ ಸೃಷ್ಥಿ ಮಾಡಿದೆ. ಆಜಾದ ನಗರ ಹಾಗೂ ಕಾರ್ಗದ್ದೆಯಲ್ಲಿ ಮಳೆ ನೀರಿಗೆ ರಸ್ತೆಗಳು ಸಂಪೂರ್ಣ ಕೊಚ್ಚಿ ಹೋಗಿವೆ.
ಹವಮಾನ ಇಲಾಖೆ ಪ್ರಕಾರ ಭಟ್ಕಳದಲ್ಲಿ ನಿನ್ನೆ 20 ಸೆಂ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ ಮಹೇಂದ್ರ ಬಾಡಕರ್, ಪ್ರಭಾರ ಮುಖ್ಯಾಧಿಕಾರಿ ವೆಂಕಟೇಶ ನಾವಡ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿದ್ದು ಸುಮಾರು 7.30 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

loading...

LEAVE A REPLY

Please enter your comment!
Please enter your name here