ಕಾಂಗ್ರೆಸ್ ಸಂಸದರ ಬಲ 244 ರಿಂದ 40 ಕ್ಕೆ ಶ್ರೇಯಸ್ಸು ರಾಹುಲ ಗಾಂಧಿಗೆ ಸಲ್ಲುತ್ತದೆ : ಬಿರೇಂದ್ರ ಸಿಂಗ್

0
18
loading...

ಹುಬ್ಬಳ್ಳಿ : ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಮತ್ತು ಕುಡಿಯುವ ನೀರು ಪೂರೈಕೆ ಸಚಿವರಾದ ಬೀರೇಂದ್ರ ಸಿಂಗ್ ಅವರು ನಿನ್ನೆ ಸಂಜೆ 5 ಗಂಟೆಗೆ ಹುಬ್ಬಳ್ಳಿ ಗೋಕುಲ ಗಾರ್ಡನದÀಲ್ಲಿ ಕೇಂದ್ರ ಸರ್ಕಾರದ ಎರಡು ವರ್ಷದ ಸಾಧನೆಯ ವಿಕಾಸ ಪರ್ವದ ಕುರಿತು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು ಸಚಿವರು ವಿಕಾಸ ಪರ್ವ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಣ ಮಾಡಿ ಕೇಂದ್ರದ ಗ್ರಾಮೀಣ ವಿಕಾಸ ಮತ್ತು ಪಂಚಾಯತ ರಾಜ್ ಸಚಿವರಾದ ಚೌದರಿ ಭಿರೇಂದ್ರ ಸಿಂಗ್ ಮತ್ತು ಉತ್ತಾರಖಂಡದ ಮಾಜಿ ಮುಖ್ಯಮಂತ್ರಿ ರಮೇಶ ಪೂಕ್ರೀಯಾಲ್ ನೂತನ ಅಧ್ಯಕ್ಷರನ್ನು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಅಭಿನಂದಿಸಿ ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರದ ಎರಡು ವರ್ಷದ ಸಾಧನೆ ಬಗ್ಗೆ ನೆರೆದ ಜನರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಪ್ರಧಾನಿಗಳು ಹೊಗೆ ಇಲ್ಲದ ಅಡಗೆ ಮನೆಗಳನ್ನು ರಾಷ್ಟ್ರದ ಕಟ್ಟಕಡೆಯ ಅತ್ಯಂತ ಬಡವರ ಮನೆ ವರೆಗು ಕೂಂಡೋಯ್ದು ದೇಶ 70 ವರ್ಷಗಳಿಂದ ಸಾಧಿಸಲಾಗದ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು. ಮುದ್ರಾ ಯೋಜನೆ, ಡಿಜಿಟಲ್ ಇಂಡಿಯಾ, ಬೇಟಿ ಬಚಾವ್ ಬೇಟಿ ಪಡಾವ, ಸ್ವಚ್ಛ ಭಾರತ, ವಿದ್ಯುತ್ ಶಕ್ತಿಯಲ್ಲಿ ಸ್ವಾವಲಂಬನೆ ಹಾಗೂ ರೈತರಿಗೆ ಕಿಸಾನ ಬಿಮಾ ಯೋಜನೆ ಈ ರೀತಿ ಹತ್ತು ಹಲವಾರು ಯೋಜನೆಗಳ ಬಗ್ಗೆ ತಿಳಿಸಿದರು. ಜನರಿಂದ ಮುದ್ರಾ ಯೋಜನೆಯಲ್ಲಿ ಇದುವರಿಗೂ 37 ಸಾವಿರ ಕೋಟಿ ಹಣ ಬ್ಯಾಂಕ್‍ಗಳಲ್ಲಿ ಜಮಾ ಆಗಿದ್ದು 44 ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಈ ಯೋಜನೆಗಾಗಿ ಬಿಡುಗಡೆ ಮಾಡಿದೆ, ಕರ್ನಾಟಕದಲ್ಲಿ 2.5 ಕೋಟಿ ಜನ ಮುದ್ರಾ ಯೋಜನೆ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರವನ್ನು ಆರ್ಥಿಕ ಸಬಲತೆಯತ್ತ ಒಯ್ಯುವದರಲ್ಲಿ ತನ್ನ ಸಫಲತೆಯನ್ನು ತೋರಿದೆ, ಅಲ್ಲದೆ ರಾಜ್ಯದ ಕಾಂಗ್ರೆಸ್ ಸರ್ಕಾರ 4 ಜನ ಭ್ರಷ್ಟ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಲು ನಮ್ಮ ಉಗ್ರ ಹೋರಾಟವೇ ಕಾರಣ ಆದರು ಇನ್ನೂ ಕೆಲವು ಭ್ರಷ್ಟ ಮಂತ್ರಿಗಳು ಅವರ ಮಂತ್ರಿ ಮಂಡಳದಲ್ಲಿದ್ದು ಅವರೆಲ್ಲಾ ಎರಡು ವರ್ಷದೊಳಗೆ ಕಾಂಗ್ರೆಸ್ ಸರ್ಕಾರ ಪತನವಾಗಲು ಕಾರಣರಾಗುತ್ತಾರೆ ಎಂದು ತಿಳಿಸಿದರು. ಉತ್ತಾರಖಂಡ ಮಾಜಿ ಮುಖ್ಯಮಂತ್ರಿ ರಮೇಶ ಪೋಖ್ರಿಯಾಲ್ ಮಾತನಾಡಿ, ಪ್ರಹ್ಲಾದ ಜೋಶಿ ಒಬ್ಬ ಸಶಕ್ತ ಸಂಸದರಾಗಿದ್ದು ಉತ್ಸಾಹ ಮತ್ತು ಉಲ್ಲಾಸದಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ಇತಿಹಾಸದ ಪುಟಗಳಲ್ಲಿ ಬಂಗಾರದ ಪಕ್ಷಿಯಾಗಿದ್ದ ನಮ್ಮ ದೇಶವನ್ನು ಕಾಂಗ್ರೆಸ್ ಸರ್ಕಾರ ಸೋನಿಯಾಳ ಪಕ್ಷಿಯನ್ನಾಗಿ ಮಾಡಿರುವುದೆ ಕಾಂಗ್ರೆಸ್ ಪಕ್ಷದ ಸಾಧನೆ ಎಂದರು. ದೇಶದ ಜಿಡಿಪಿ ದರವನ್ನು ಶೇ.4 ರಿಂದ 7.9 ಪ್ರತಿಶತಕ್ಕ್ಕೆ ಏರಿಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಕೇಂದ್ರದಲ್ಲಿ ಕಾಂಗ್ರೆಸ್ ಸಂಸದರ ಸಂಖ್ಯೆ 244 ರಿಂದ 40 ಕ್ಕೆ ತೆಗೆದುಕೂಂಡ ಬಂದ ಶ್ರೇಯಸ್ಸು ರಾಹುಲ ಗಾಂಧಿಗೆ ಸಲ್ಲುತ್ತದೆ, ನನ್ನ 47 ವರ್ಷದ ರಾಜಕೀಯದಲ್ಲಿ ಬಹಳ ಸಮೀಪದಿಂದ ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ, ಅಂತಹವರಲ್ಲಿ ನರೇಂದ್ರ ಮೋದಿಯಂತಹ ಮಹತ್ವಾಂಕಾಕ್ಷೆಯ ಪ್ರಧಾನ ಮಂತ್ರಿಯನ್ನು ಈಗ ನೋಡುತ್ತಿದ್ದೇನೆ, ನಮ್ಮ ದೇಶದಲ್ಲಿದ್ದ 562 ಸಂಸ್ಥಾನಗಳನ್ನು ಒಂದುಗೂಡಿಸಿ ರಾಷ್ಟ್ರ ಕಟ್ಟಿದ ಹಿರಿಮೆ ಸರ್ದಾರ ವಲ್ಲಭಾಯಿ ಪಟೇಲರಿಗೆ ಸಲ್ಲುತ್ತದೆ. ಹಾಗೆಯೇ ಪುರಾತನ ಕಾಲದಲ್ಲಿ ರಾರಾಜಿಸುತ್ತಿದ್ದ ಸಂಸ್ಕ್ರತಿಯನ್ನು ಸ್ವಸ್ಥಾನಕ್ಕೆ ಮರಳಿಸಿದ ಕೀರ್ತಿಯೂ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ, ಹಾಗೆ ಆರ್ಥಿಕವಾಗಿ ದೇಶವನ್ನು ಸಧೃಡ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಪ್ರಪಂಚದ ಎಲ್ಲಡೆ ಪ್ರಧಾನಿಯವರ ಗುಣಗಾನ ಎಲ್ಲ ರಾಷ್ಟ್ರಗಳಲ್ಲಿಯೂ ಮಾಡುತ್ತಿವೆÉ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಪಕ್ಷದ ಹಲವಾರು ಕಾರ್ಯಕರ್ತರು ಹಾಗೂ ಮುಖಂಡರೂ ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here