ಕಿತ್ತೂರ ಚೆನ್ನಮ್ಮ ಸರ್ಕಲ್‍ನಲ್ಲಿ ದೊಡ್ಮನೆ ಹುಡುಗ

0
66
loading...

ಹುಬ್ಬಳ್ಳಿ : ನಿನ್ನೆ ನಗರದ ಕಿತ್ತೂರ ಚೆನ್ನಮ್ಮಾ ವೃತ್ತದಲ್ಲಿ ದೊಡ್ಮನೆ ಹುಡುಗ ಚಲನ ಚಿತ್ರದ ಹಾಡೊಂದರ ಚಿತ್ರಕರಣ ಜರುಗಿತು ಈ ಸಂದರ್ಭದಲ್ಲಿ ನಾಯಕ ನಟ ‘ಪವರ್ ಸ್ಟಾರ್ ಪುನಿತ ರಾಜಕುಮಾರ’ ಅವರನ್ನು ವಿಕ್ಷೀಸಲು ಸಾವಿರಾರು ಅಭಿಮಾನಿಗಳು ಕಷ್ಟ ಪಡುತ್ತಿದ್ದರು. ಪುನಿತ ಅವರು ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನೆಚ್ಚಿನ ನಟನೊಂದಿಗೆ ಪೋಟೋ ತೆಗೆಸಿಕೊಳ್ಳಲು ಕೈ ಕುಲಕಲು ಅಭಿಮಾನಿಗಳು ಮುಗಿಬಿದ್ದ ಕಾರಣ ಸ್ಥಳದಲ್ಲಿದ್ದ ಪೊಲೀಸರು ಜನದಟ್ಟನೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. 1993 ರಲ್ಲಿ ತೆರೆ ಕಂಡ ಡಾ. ರಾಜಕುಮಾರ ಅವರ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಹಾಡು ಎಲ್ಲರು ಬಾಯಿಲ್ಲಿ ಗುಣಗುವ ಹಾಡು ಇರುವಾಗಲೆ ಅದೆ ರೀತಿ ಮತ್ತೊಂದು ದೃಶ್ಯೆ ನಿನ್ನೆ ಜನ ಸಾಗರ ನೆರೆದಿತ್ತು. ಒಂದು ಮುಕ್ಕಾಲು ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ಹಾಡು ಬೆಂಗಳೂರಿನ ಗಾಂಧಿನಗರದಲ್ಲಿ ಬಿರುಗಾಳಿ ಎಬ್ಬಿಸಿದ ದೊಡ್ಮನೆ ಹುಡುಗ ಚಿತ್ರದ ಹಾಡಿನ ಚಿತ್ರೀಕರಣ ಇತ್ತೀಚಿಗೆ ಬಳ್ಳಾರಿಯಲ್ಲಿ ಮಾಡಲಾಗಿದೆ. ಅದೆ ರೀತಿ ಹುಬ್ಬಳ್ಳಿಯಲ್ಲಿ ನಿನ್ನೆ ಚಿತ್ರಿಕರಣ ಜರುಗಿತು. ಕಿತ್ತೂರ ಚೆನ್ನಮ್ಮ ಸರ್ಕಲ್‍ನಲ್ಲಿ ಹಾಕಿದ್ದ ವೇದಿಕೆ ಮೇಲೆ ಪವರ್ ಸ್ಟಾರ್ ಪುನೀತ ರಾಜಕುಮಾರ ‘ಅಭಿಮಾನಿಗಳೇ ನನ್ನ ದೇವರು’ ಅನ್ನುವ ಹಾಡಿಗೆ ಡಾ. ರಾಜ್ ಚಿತ್ರದ ಮಾತಿನ ಸಾಲಿನಿಂದಲೇ ಪ್ರಾರಂಭಗೊಂಡ ಹಾಡಿಗೆ ಹೆಜ್ಜೆ ಹಾಕಿರು. ಪುನೀತಗೆ ರಾಧಿಕ ಪಚಿಡಿತ ಜೊತೆಯಾಗಿ ಅಭಿನಯಿಸಿದ್ದಾರೆ. 2 ಡ್ರೋಣ, ಕ್ರೇನ್,ಜಿಮ್ಮೀ ಸೇರಿದಂತೆ ಬೇರೆ ಬೇರೆ ಒಟ್ಟು 19 ಕ್ಯಾಮರಾಗಳಿಂದ ನೃತ್ಯದ ಚಿತ್ರೀಕರಣ ಮಾಡಲಾಗಿದ್ದು 180 ತಂತ್ರಜ್ಞರು ಹಾಗೂ 200 ನ್ಲತ್ಯಗಾರರು ಭಾಗವಹಿಸಿದ್ದರು. ಜೂನ್ 28 ರವರೆಗೆ ಚಿತ್ರದುರ್ಗ, ಹೊಸಪೇಟೆ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರಂ ಮೈದಾನದಲ್ಲಿ ಹಾಡಿನ ಚಿತ್ರೀಕರಣ ಜರುಗಲಿದೆ. ಈ ಚಿತ್ರದ ಹಾಡುಗಳನ್ನು ನಿರ್ದೇಶಕ ಯೋಗರಾಜ್ ಭಟ್ ರಚಿಸಿದ್ದು ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಮುಂಜಾನೆ 6 ರಿಂದ ಸಣಜೆ 6 ವರೆಗೆ ಚಿತ್ರೀಕರಣಕ್ಕೆ ಪರವಾನಿಗೆ ಪಡೆಯಲಾಗಿದ್ದು ಮಧ್ಯಾಹ್ನ 12.15 ರರ ಹೊತ್ತಿಗೆ ಚಿತ್ರೀಕರಣ ಮುಕ್ತಾಯಗೊಂಡಿತು. ಚಿತ್ರೀಕರಣ ಆರಂಭಗೊಳ್ಳುವು ಮುನ್ನ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

loading...

LEAVE A REPLY

Please enter your comment!
Please enter your name here