ಕೃಷಿ ಚಟುವಟಿಕೆಗಳು ಚುರುಕು: ಬೀಜ ಬಿತ್ತನೆ ಆರಂಭ

0
43
loading...

ಮೂಂಡಗೋಡ : ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿದ್ದು. 2016 ನೇ ಸಾಲಿಗೆ ಸಂಬಂಧ ಪಟ್ಟಂತೆ ರೈತರು ಈಗಾಗಲೇ ಭೂಮಿಯನ್ನು ಹದಗೊಳಿಸಿ ಬೀಜ ಬಿತ್ತನೆ ಮಾಡಿದ್ದಾರೆ. ಅದರಂತೆ ಬಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆದು ಸಾಲುಗಳು ಸಹ ಕಾಣತೋಡಗಿವೆ.
ಹದವಾದ ರೀತಿಯಲ್ಲಿ ಮಳೆರಾಯ ಸುರಿಯುತ್ತಿದ್ದು. ಬಿಸಿಲಿನ ವಾತಾವರಣವು ಸಹ ಬಿಳ್ಳುತ್ತಿರುವುದರಿಂದ ತಾಲೂಕಿನ ರೈತರು ಬಿತ್ತನೆ ಮಾಡಿದ ಬೆಳೆಗಳ ಮಧ್ಯ ಬೆಳೆದಿರುವ ಕಸ(ಕಳೆ) ತೆಗೆಯಲು ಬರುವು ಕುಂಟೆ ಹೊಡೆಯುವುದರಲ್ಲಿ ಮಗ್ನರಾಗಿದ್ದಾರೆ. ಮತ್ತು ಈಗಾಗಲೇ ಗೋವಿನಜೋಳದ ಬೆಳೆಗೆ ರಾಸಾಯನಿಕ ಗೋಬ್ಬರವನ್ನು ರೈತರು ಹಾಕುತ್ತಿರುವುದರಿಂದ ಗೋವಿನಜೋಳದ ಬೆಳವಣಿಗೆ ಜೋರಾಗಿದೆ.
ಆದರೆ ಪ್ರತಿ ವರ್ಷದಂತೆ ಈ ವರ್ಷ ತಾಲೂಕಿನಲ್ಲಿ ಹತ್ತಿ ಮತ್ತು ಗೋವಿನಜೋಳದ ಬೆಳೆಗಳು ಬೆಳೆಯುವುದಕ್ಕೆ ಅನೂಗುಣವಾಗಿ ಮಳೆ ಸುರಿಯುತ್ತಿರುವುದರಿಂದ ಹತ್ತಿ ಗೋವಿನಜೋಳದ ಬೆಳೆಗಳು ದಿನದಿಂದ ದಿನಕ್ಕೆ ಉತ್ತಮವಾಗಿ ಬೆಳೆಯತೋಡಗಿವೆ. ಆದರೆ ಭತ್ತವು ಸಹ ಇಲ್ಲಿಯವರೆಗೂ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯ ಅವಶ್ಯಕತೆ ಭತ್ತದ ಬೆಳೆಗೆ ಇದೆ. ಆದರೆ ಮಳೆಯು ಇವತ್ತಿನ ಪರಿಸ್ಥೀತಿಯಲ್ಲಿ ಆಗುತ್ತಿರುವ ದೃಶ್ಯವನ್ನು ಗಮನಿಸಿದರೆ, ಈ ವರ್ಷದಲ್ಲಿ ಗೋವಿನಜೋಳದ ಬೆಳೆಯೇ ಉತ್ತಮವಾಗಿ ಬರುವ ಸಾದ್ಯತ್ಯೆಗಳು ಇವೆ. ಹಾಗಾಗಿ ಭತ್ತ ಬಿತ್ತನೆ ಮಾಡಿದ ಪ್ರದೇಶವನ್ನು ಸಹ ಗೋವಿನಜೋಳ ಬಿತ್ತನೆ ಮಾಡಿದರೆ ಒಳ್ಳೆಯದಾಗುತ್ತಿತ್ತು ಎಂಬ ಮಾತುಗಳು ರೈತರಿಂದ ಕೇಳಿಬರಲಾರಂಬಿಸಿವೆ.
ಒಂದು ಕಾಲದಲ್ಲಿ ಮೃಗಶೀರ ಮಳೆ ಎಂದರೆ ಜನರು ಮನೆಯನ್ನು ಬಿಟ್ಟು ಹೊರಗಡೆಗೆ ಹೋಗುವುದಕ್ಕೆ ಭಯಪಡುತ್ತಿದ್ದರು. ಮತ್ತು ಯಾವ ಮಳೆ ಆಗುತ್ತದೆ ಯಾವ ಮಳೆ ಆಗುವುದಿಲ್ಲವೆಂದು ಶತಶತಮಾನಗಳಿಂದ ಮಳೆರಾಯನ ಮೇಲೆ ನಂಬಿಕೆಯನ್ನಿಟ್ಟುಕೊಂಡು ರೈತರು ಬರುತ್ತಿದ್ದರು. ಆದರೆ ಇವತ್ತಿನ ಬದಲಾವಣೆಯ ಕಾಲಮಾನದÀಲ್ಲಿ ಮಳೆರಾಯನ ಬಗ್ಗೆ ರೈತರಿಗೆ ನಂಬಿಕೆಯೇ ಹೊರಟುಹೋಗಿದೆ ಎಂಬುವುದು ಇವತ್ತಿನ ಸನ್ನಿವೇಶಗಳೇ ತಿಳಿಸುವಂತಾಗಿದೆ.
ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಭತ್ತದ ಕಣಜವೆಂದು ಕರೆಯಲಾಗುತ್ತಿತ್ತು ಆದರೆ ಇತ್ತಿಚೀನ ಕೆಲ ವರ್ಷಗಳಲ್ಲಿ ಮಳೆರಾಯನ ಅಭಾವದಿಂದ ತಾಲೂಕಿನಲ್ಲಿ ಭತ್ತದ ಬೆಳೆಯ ಪ್ರಮಾಣ ಕಡಿಮೆ ಆಗತೋಡಗಿದ್ದು. ರೈತರು ಬಯಲು ಸೀಮೆಯ ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ಮೊರೆಹೋಗುತ್ತಿದ್ದಾರೆ. ಇದೆ ರೀತಿ ಮುಂದಿನ ದಿನಗಳಲ್ಲಿ ಮಳೆರಾಯನ ಕೊರತೆ ಮುಂದುವರೆದರೆ ಭತ್ತದ ಬೆಳೆ ತಾಲೂಕಿನಲ್ಲಿ ನಸಿಸುತ್ತಾ ಹೋಗುವುದು ಕಂಡಿತ್ತಾ ಎಂಬುವುದು ತಾಲೂಕಿನ ಅನೇಕ ರೈತರುಗಳ ಮಾತುಗಳಾಗಿವೆ.
ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮಳೆರಾಯನ ಕೊರತೆ ಆದರು ಸಹ ಭತ್ತದ ಬೆಳೆ ಜೀವಂತವಾಗಿರಬೇಕೆಂದರೆ. ತಾಲೂಕಿನಲ್ಲಿರುವ ಜಲಾಶಯಗಳ ಹೂಳೇತ್ತುವ ಕಾರ್ಯವಾಗಬೇಕು ಮತ್ತು ಮಳೆಯ ನೀರು ಹೆಚ್ಚಿನ ಮಟ್ಟದಲ್ಲಿ ಸಂಗ್ರಹವಾಗುವ ಪ್ರದೇಶದಲ್ಲಿ ಹೊಸದಾಗಿ ಜಲಾಶಯಗಳನ್ನು ನಿರ್ಮೀಸಬೇಕು ಹಾಗೂ ಪಕ್ಕದ ಜಿಲ್ಲೆಯಲ್ಲಿ ಹರಿದಿರುವ ನದಿ ಹೊಳೆಗಳಿಂದ ತಾಲೂಕಿನ ಜಮೀನುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತಹ ವ್ಯವಸ್ಥೆಗಳನ್ನು ಈ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉತ್ಸುವಾರಿ ಮಂತ್ರಿಗಳು ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಅನೇಕ ತಾಲೂಕಿನ ಪ್ರಜ್ಞಾವಂತ ನಾಗರಿಕರಿಂದ ಮಾತುಗಳು ಕೇಳುಬರುತ್ತಿವೆ.

loading...

LEAVE A REPLY

Please enter your comment!
Please enter your name here