ಗಾಣಿಗ ಸಮಾಜಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

0
32
loading...

ಕುಮಟಾ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಕುಮಟಾದ ನೆಲ್ಲಿಕೇರಿಯ ಉದ್ಯಮಿ ರತ್ನಾಕರ ಸುಬ್ರಾಯ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಜೂ.12 ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಸದಸ್ಯರ ಸಹಮತದೊಂದಿಗೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೇಶವ ರಾಮ ಶೆಟ್ಟಿ ಬೆಕ್ಕಿನಕೇರಿ ಹೊನ್ನಾವರ, ಕಾರ್ಯದರ್ಶಿಯಾಗಿ ಗಣಪತಿ ಸುಬ್ರಾಯ ಶೆಟ್ಟಿ ಶಿರಸಿ, ಸಹಕಾರ್ಯದರ್ಶಿಯಾಗಿ ಆರ್ ಬಿ ಶೆಟ್ಟಿ ಕಡಗೇರಿ, ಹೊನ್ನಾವರ ಅವರನ್ನು ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿಯ ಸದಸ್ಯರಾಗಿ ಮಾಧವ ನಾರಾಯಣ ಶೆಟ್ಟಿ ಹೊನ್ನಾವರ, ಸುರೇಶ ಗಣಪತಿ ಶೆಟ್ಟಿ ಗಜನಕೇರಿ ಹೊನ್ನಾವರ, ನಾರಾಯಣ ಮಂಜುನಾಥ ಶೆಟ್ಟಿ ಕುಮಟಾ, ನಾರಾಯಣ ರಾಮ ಕಲ್ಮನೆ ಕುಮಟಾ, ಉಮೇಶ ದೇವರಾಯ ಶೆಟ್ಟಿ ಕುಮಟಾ, ಚಂದ್ರಶೇಖರ ಗಣಪತಿ ಶೆಟ್ಟಿ ಶಿರಸಿ, ರತ್ನಾಕರ ಪದ್ಮನಾಭ ಶೆಟ್ಟಿ ಶಿರಸಿ, ಶ್ರೀಧರ ಮಂಜುನಾಥ ಶೆಟ್ಟಿ ಭಟ್ಕಳ, ವೆಂಕಟೇಶ ವಾಮನ ಶೆಟ್ಟಿ ಭಟ್ಕಳ, ರಾಮದಾಸ ನರಸಿಂಹ ಶೆಟ್ಟಿ ಭಟ್ಕಳ, ನಾಗೇಶ ವೆಂಕಟ್ರಮಣ ಶೆಟ್ಟಿ ಭಟ್ಕಳ, ಆಯ್ಕೆಯಾಗಿದ್ದಾರೆ.
ಕುಮಟಾ ತಾಲೂಕು ಪ್ರತಿನಿಧಿಗಳಾಗಿ ವಸಂತ ಗೋವಿಂದ ಶೆಟ್ಟಿ, ವಿನಾಯಕ ಆನಂದ ಶೆಟ್ಟಿ, ಶಿರಸಿ ತಾಲೂಕು ಪ್ರತಿನಿಧಿಗಳಾಗಿ ಸುಧಾ ರಾಮದಾಸ ಶೆಟ್ಟಿ, ಗೋಪಾಲಕೃಷ್ಣ ನಾರಾಯಣ ಶೆಟ್ಟಿ, ಹೊನ್ನಾವರ ತಾಲೂಕು ಪ್ರತಿನಿಧಿಗಳಾಗಿ ಗಜಾನನ ಗಣಪತಿ ಶೆಟ್ಟಿ, ರಾಮಕೃಷ್ಣ ಗಣಪತಿ ಶೆಟ್ಟಿ, ಭಟ್ಕಳ ತಾಲೂಕು ಪ್ರತಿನಿಧಿಗಳಾಗಿ ನಾರಾಯಣ ಮಂಜುನಾಥ ಶೆಟ್ಟಿ, ಗಣೇಶ ಮಂಜುನಾಥ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here