ಧ್ವಿದಳ ಧಾನ್ಯ ಬೆಳೆಯಲೂ ಸೋಮಣ್ಣವರ ರೈತರಿಗೆ ಕರೆ

0
27
loading...

ಬೆಳಗಾವಿ 29: ರೈತರು ಪ್ರತಿ ವರ್ಷ ಕಬ್ಬು ಬೆಳೆಯುವದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು ಅದಕ್ಕೆ ಪರ್ಯಾಯವಾಗಿ ಧ್ವಿದಳಬೆಳೆ, ಎಣ್ಣೆಕಾಳು, ತರಕಾರಿಗಳನ್ನು ಬೆಳೆಗಳನ್ನು ಬೆಳೆಯಿರಿ ಎಂದು ಪ್ರೋ. ಎಸ್.ಬಿ.ಸೋಮಣ್ಣವರ ಸಲಹೆ ನೀಡಿದರು.
ಅವರು ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಮಹಾನ್ ಸಾಂಖ್ಯಿಕ ತಜ್ಞ ಪ್ರೋ.ಪ್ರಶಾಂತ ಚಂದ್ರ ಮಹಾಲನೋಬಿಸ್‍ವರ ಜನ್ಮದಿನಾಚಾರಣೆ ಅಂಗವಾಗಿ ಏರ್ಪಡಿಸಿದ ‘ಕೃಷಿ ಮತ್ತು ರೈತರ ಕಲ್ಯಾಣ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಕೃಷಿ ಪ್ರಧಾನವಾದ ರಾಷ್ಟ್ರ, ಇಲ್ಲಿಯ ಕೃಷಿ ಮಳೆಯನೇ ಅವಲಂಭಿಸಿದೆ. ಶೇ. 90ರಷ್ಟು ಹೆಚ್ಚಿನ ಜನಸಂಖ್ಯೆ ಆಹಾರ ಒದಗಿಸಲು ಕೃಷಿವಲಯ ಅವಲಂಬನೆಯಾಗಿದ್ದಾರೆ. ರೈತ ಸಮುದಾಯ ಕಳೆದ 2 ವರ್ಷದಿಂದಲು ಬರಗಾಲ ಎದುರಿಸುತ್ತಿದ್ದು ಇದರಿಂದ ರೈತರು ಆತ್ಮವಿಸ್ವಾಸ ಕಳೆದುಕೊಂಡಿದ್ದಾರೆ. ಮೊದಲು ರೈತರೆ ಕೆರೆಗಳ ಹುಳೂ ಎತ್ತುಕೊಂಡು ತಮ್ಮ ಹೊಲಗಳಿಗೆ ಹಾಕುತ್ತಿದ್ದರು ಆದರೆ ಈಗ ಈ ವಿಧಾನ ಇಲ್ಲ ಎಂದು ವಿಷಾದಿಸಿದ್ದರು.
ಕೃಷಿ ಉಪಕರಣಗಳಾದ ಫಂಪಸೇಟ್, ಟ್ಯಾಕಟ್‍ರ, ನೆಗಿಲು, ರುಟರ್ ತಿಳುವಳಿಕೆ ಉಳ್ಳವರ ಫಾಲಾಗುತ್ತಿದ್ದು ಇದು ಎಲ್ಲರಿಗೂ ದೊರಕಬೇಕು. ಆ ನಿಟ್ಟಿನಲ್ಲಿ ಸಣ್ಣ ಹಿಡುವಳಿದಾರರಿಗೆ ಸಾಲ ಸೌಲಭ್ಯ ನೀಡಬೇಕು. ಕೃಷಿ ಇಲಾಖೆ ರೈತರಿಗೆ ಹೆಚ್ಚಿನ ಸಬಸ್ಸಿಡಿ ನೀಡಬೇಕು. ಸೂಕ್ತ ಮಾರುಕಟ್ಟೆ ಇಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ಒದಗಿಸಿಬೇಕು. ರೈತರಿಗೆ ಒಣ ಬೇಸಾಯದಿಂದ ಯಾವ ಬೆಳೆಯನ್ನು ಬೆಳೆಯಬಹುದು ಎಂಬುವದನ್ನು ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡಬೇಕು. ಇದರಿಂದ ಮಣ್ಣಿನ ಫಲವತ್ತತೆಯ ಬಗ್ಗೆ ತಿಳಿಸಬೇಕು. ರೈತರು ಕೇವಲ ಕೃಷಿಯನ್ನು ಅವಲಂಬಿಸದೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಆಧಾರಿತ ಉದ್ಯೋಗವನ್ನು ಕೃಷಿ ಕುಟುಂಬದವರು ಅಳವಡಿಸಿಕೊಳಬೇಕು. ಪ್ರತಿ ವರ್ಷ ಕಬ್ಬು ಬೆಳೆಯುವದರಿಂದ ಭೂಮಿಯ ಹಾಳಾಗುತ್ತಿದ್ದು ಪರ್ಯಾಯ ಬೆಳೆಯನ್ನು ಬೆಳೆಯಲು ರೈತರು ಮನಸ್ಸು ಮಾಡಬೇಕು. ಮಣ್ಣಿನ ಸಂರಕ್ಷಣೆಗೆ ಪ್ರತಿಯೋಬ್ಬರು ಶ್ರಮಿಸಬೇಕು ಎಂದರು.
ದೇಶಿಯ ಭೀಜಗಳ ಉಪಯೋಗ ಮಾಡಿಕೊಳ್ಳಲು ಪ್ರತಿ ಗ್ರಾಮೀಣ, ತಾಲೂಕಾ ಮಟ್ಟದಲ್ಲಿ ಕೃಷಿ ಇಲಾಖೆ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೋಂಡು ರೈತರಿಗೆ ತಿಳುವಳಿಕೆ ನೀಡಬೇಕು .ಎಂದು ಪ್ರೋ.ಎಸ್.ಬಿ.ಸೋಮಣ್ಣವರ ತಿಳಿಸಿದರು.
ಸಹಯಕ ಕೃಷಿ ನಿರ್ದೇಶಕ ಕಲ್ಯಾಣಿ ಮಾತನಾಡಿ. ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಜೊತೆಗೆ ಪ್ರಸಕ್ತ ವರ್ಷ ಕೃಷಿ ಟ್ಯಾಕಟರ್ ವಿಮೆ ಯೋೀಜನೆ ಸೇರಿಸಲಾಗಿದೆ. ಕೇಲವೊಂದು ತಾಲೂಕು ಮಟ್ಟದ್ದಲ್ಲಿ ಬಾಡಿಗೆ ಆಧಾರವಾಗಿ ಕೃಷಿ ಯಂತ್ರೋಪಕರಣಗಳನ್ನು ಇಲಾಖೆ ನೀಡಲಾಗುತ್ತಿದೆ. ತುಂತೂರು ನೀರಾವರಿ, ಹನಿನೀರಾವರಿ, ಅರ್ಜಿಗಳನ್ನು ತುಂಬಿಕೊಳುತ್ತಿದ್ದು ಹೋಬಳಿ ಮಟ್ಟದಲ್ಲಿ ಆಯ್ಕೆ ಮಾಡಿ ಅವರ ಪಾಸಬುಕ್‍ಗಳಿಗೆ ಹಣವನ್ನು ನೇರವಾಗಿ ನೀಡುತ್ತಿದ್ದೆವೆ. ಎಂದು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಎ.ಡಿ.ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ರಮೇಶ ತುರಮರಿ, ಪಿ.ಡಿ.ಮುನ್ನವಳ್ಳಿ, ವಿ.ವಿ. ಅಣ್ವೇಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕರುಣಾ ಕುಲಕರ್ಣಿ ಸ್ವಾಗತಿಸಿದರು. ಆರ್.ಎಸ್.ಕಡೇಮನಿ ವಂದಿಸಿದ್ದರು.

loading...

LEAVE A REPLY

Please enter your comment!
Please enter your name here