ನಗರಸಭೆಯ ಬೇಜವಾಬ್ದಾರಿಯಿಂದಾಗಿ ಅಂತ್ಯ ಸಂಸ್ಕಾರಕ್ಕೆ ತೊಂದರೆ

0
21
loading...

ಕಾರವಾರ : ಕಿಡ್ನಿ ವೈಫಲ್ಯದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸುರಿಯುತ್ತಿರುವ ಭಾರಿ ಮಳೆಗೆ ತೀವ್ರ ತೊಂದರೆ ಪಟ್ಟ ಘಟನೆ ನಗರದ ಪದ್ಮನಾಭ ನಗರದಲ್ಲಿ ಬುಧವಾರ ಸಂಭವಿಸಿದೆ.
ನಗರಸಭೆಯವರು ಯಾವುದೇ ರೀತಿಯ ಪರಿಶೀಲನೆಗಳನ್ನು ನಡೆಸದೆ, ಮನೆ ನಿರ್ಮಾಣಕ್ಕೆ ಬೇಕಾಬಿಟ್ಟಿಯಾಗಿ ಪರವಾನಗಿ ನೀಡುತ್ತಿದೆ. ಮಳೆ ನೀರು ಸಾಗಲು ಸೂಕ್ತ ರೀತಿಯ ಗಟಾರದ ವ್ಯವಸ್ಥೆ ಸಹ ಕಲ್ಪಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಪದ್ಮನಾಭ ನಗರದ ಸಂತೋಷ್ ನಾಯ್ಕ್(35) ಎನ್ನುವವರು ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು. ಕಿಡ್ನಿ ವೈಫಲ್ಯದಿಂದ ಮಂಗಳವಾರ ರಾತ್ರಿ ಅವರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ಮನೆಗೆ ತಂದು ವಿಧಿವಿಧಾನದ ಬಳಿಕ ಶವ ಸಂಸ್ಕಾರ ಮಾಡಲು ಶವ ಸಾಗಿಸಬೇಕು ಎಂದರೆ ಸೊಂಟದವರೆಗೆ ಮಳೆ ನೀರು ತುಂಬಿಕೊಂಡಿತ್ತು.
ಬಳಿಕ ಮನೆಯವರು ಸುರಿಯುತ್ತಿದ್ದ ಭಾರಿ ಮಳೆಯಲ್ಲೇ ಶವವನ್ನು ಮಂಚದ ಮೇಲೆ ಹೊತ್ತುತಂದು ಸಂಸ್ಕಾರಕ್ಕೆ ಒಯ್ಯದರು. ಈ ವೇಳೆಯಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಪಡುವಂತಾಯಿತು.

loading...

LEAVE A REPLY

Please enter your comment!
Please enter your name here