ನೆರೆಪೀಡಿತ ಪ್ರದೇಶಕ್ಕೆ ಶಾಸಕ ಮಂಕಾಳ ವೈದ್ಯ ಭೇಟಿ: ಸೂಕ್ತ ಪರಿಹಾರ ಒದಗಿಸುವ ಭರವಸೆ

0
22
loading...

ಭಟ್ಕಳ : ನಿನ್ನೆ ಸುರಿದ ಬಾರಿ ಮಳೆಗೆ ಭಟ್ಕಳದಲ್ಲಿ ಉಂಟಾದ ನೆರೆ ಹಾವಳಿ ಪ್ರದೇಶಕ್ಕೆ ತಕ್ಷಣ ಭೇಟಿ ಕೊಟ್ಟ ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ ಸಂತ್ರಸ್ತರಿಗೆ ಧೈರ್ಯ ತುಂಬಿ ಸರ್ಕಾರದ ಸೀಗಬೇಕಾದ ಪರಿಹಾರ ಕೂಡಲೇ ಒದಗಿಸಿ ಕೋಡುವ ಭರವಸೆ ನೀಡಿದರು.
ಮಳೆ ಹಾನಿ ಪ್ರದೇಶಗಳಾದ ಮುಂಢಳ್ಳಿ, ಸೋನಾರಕೇರಿ, ಸಿದ್ದೀಖ್ ಸ್ಟ್ರಿಟ್, ಆಜಾದ ನಗರ, ಕಾರ್ಗದ್ದೆ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಹಾನಿಯ ಬಗ್ಗೆ ಖುದ್ದು ಅವಲೋಕಿಸಿದರಲ್ಲದೇ ಕೂಡಲೇ ಅಂದಾಜು ಹಾನಿ ವರದಿ ಮಾಡಿ ಪರಿಹಾರ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧ ವೈದ್ಯ ಜಿಪಂ ಸದಸ್ಯೆರಾದ ಸಿಂಧೂ ಭಾಸ್ಕರ ನಾಯ್ಕ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವಿಠ್ಠಲ ನಾಯ್ಕ, ಮಂಜುನಾಥ ನಾಯ್ಕ ಬೆಳ್ಕೆ ಸುರೇಶ ನಾಯ್ಕ ಹೊಸ್ಮನೆ, ತಹಶೀಲ್ದಾರ ವಿ ಎಂ ಬಾಡಕರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here