ಪುರಸಭೆಯಿಂದ ವಿವಿಧ ಯೋಜನೆಗೆ ಅರ್ಜಿ ಆವ್ಹಾನ

0
28
loading...

ಬೈಲಹೊಂಗಲ 30: ಸನ್ 2016-2017 ನೇ ಸಾಲಿನ “ ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನ ಯೋಜನೆ ”ಯಡಿ ಸ್ವಯಂ ಉದ್ಯೋಗಕ್ಕೆ ಶೇ. 7% ರ ಮೇಲ್ಪಟ್ಟ ಬಡ್ಡಿ ಸಹಾಯಧನದೊಂದಿಗೆ ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ರೂ 2.00 ಲಕ್ಷಗಳವರೆಗೆ ಸಾಲ, ಸ್ವ ಸಹಾಯ ಗುಂಪುಗಳ ರಚನೆ ಹಾಗೂ ಈ ಮೊದಲು ರಚಿಸಿದ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ ಲಿಂಕೇಜ ಮುಖಾಂತರ ಸಾಲ ಸೌಲಬ್ಯಗಳನ್ನು ಒದಗಿಸುವದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ನಗರ ವಸತಿ ರಹಿತರಿಗೆ ಸಾಮಾನ್ಯ ವರ್ಗದವರಿಗೆ ರೂ 1.5 ಲಕ್ಷ ಹಾಗೂ ಪ.ಜಾತಿ/ಪ.ಪಂಗಡ ಫಲಾನುಭವಿಗಳಿಗೆ ರೂ1.8 ಲಕ್ಷಗಳನ್ನು ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಪಡೆಯಲು ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಂದ ಅರ್ಜಿಗಳನ್ನು ಆವ್ಹಾನಿಸಲಾಗಿದೆ.
ಪುರಸಭೆಯ ಬಡತನ ನಿವಾರಣಾ ಕೋಶ ವಿಭಾಗದಲ್ಲಿ ಅರ್ಜಿಗಳನ್ನು ಪಡೆದು ನಿಗದಿ ಪಡಿಸಿದ ಸಂಪೂರ್ಣ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಿ ದಿ.30/07/2016 ರಂದು ಸಂಜೆ 5-00 ಘಂಟೆ ಒಳಗಾಗಿ ಕಾರ್ಯಾಲಯದಲ್ಲ್ಲಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ವೆಬ್‍ಸೈಟ್ hಣಣಠಿ://ತಿತಿತಿ.bಚಿiಟhoಟಿgಚಿಟಚಿಣoತಿಟಿ.mಡಿಛಿ.gov.iಟಿ ನಲ್ಲಿ ಸಂಪರ್ಕಿಸ ಬಹ್ಮದಾಗಿದೆ.

loading...

LEAVE A REPLY

Please enter your comment!
Please enter your name here