ಪ್ರವೀಣ ಶಾಲೆಗೆ ದ್ವಿತೀಯ ಸ್ಥಾನ

0
16
loading...

ಬೆಳಗಾವಿ : ಬೈಲಹೊಂಗಲ ತಾಲೂಕಿನ ಬೈಲೂರÀ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ವಿದ್ಯಾರ್ಥಿ ಕು. ಪ್ರವೀಣ ಆರ್. ಕಿಲಾರಿ ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ 92.8 ಪ್ರತಿಶತ ಅಂಕಗಳನ್ನು ಪಡೆದುಕೊಂಡು ಶಾಲೆಗೆ ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾನೆ.
ಅಭಿಷೇಕ ಕಿಲಾರಿ(94.6) ಪ್ರಥಮ ಸ್ಥಾವನ್ನು ಹಾಗೂ ಪ್ರಕಾಶ ಹೆಗ್ಗಣ್ಣಿ (91.6) ತೃತಿಯ ಸ್ಥಾನವನ್ನು ಪಡೆದಿದ್ದಾರೆ. ಗುಂಡೇನಟ್ಟಿ ಗ್ರಾಮದ ಸೌಭಾಗ್ಯ ತೇಗೂರ ಹಾಗೂ ಬೈಲೂರಿನ ಪವಿತ್ರಾ ಬೋಗೂರ ಇವರು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಪೂರ್ಣಾಂಕ ಪಡೆದು ಪಾಸಾಗಿದ್ದಾರೆ.
ಮುಖ್ಯೋಪಾದ್ಯಾಯರಾದ ಎಸ್. ಜಿ ಸಂಕಣ್ಣವರ, ಶಿಕ್ಷಕರಾದ ಎಂ. ಎ. ಕಳಸಣ್ಣವರ, ಶ್ರೀಮತಿ ಎಚ್. ಎ. ಬಿರಾದಾರ ಅಲ್ಲದೇ ಎಲ್ಲ ಶಿಕ್ಷಕ ವರ್ಗ ಹಾಗೂ ಸಿಬ್ಬಂಧಿಯವರು ಹೆಚ್ಚಿನ ಅಂಕಗಳನ್ನು ತೆಗೆದುಕೊಂದು ಪಾಸಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here