ಭದ್ರಕೋಟೆ ಭೇದಿಸಲು ಸಾಧ್ಯವಿಲ್ಲ: ಹೊರಟ್ಟಿ

0
21
loading...

ಧಾರವಾಡ : ಶಿಕ್ಷಕರಿಗೆ ನನ್ನ ಮೇಲೆ ನಂಬಿಕೆ ಇದೆ ಅವರೆಂದೂ ನನ್ನನ್ನು ಕೈ ಬಿಡುವದಿಲ್ಲ ಶಿಕ್ಷಕರ ಕಾಳಜಿಯೇ ನನಗೊಂದು ಶ್ರೀರಕ್ಷೆ ಎಂದು ಪಶ್ಚಿಮ ವಲಯ ಶಿಕ್ಷಕ ಮತ ಕ್ಷೇತ್ರ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಶಾಲೆಗಳಿಗೆ ಭೆಟ್ಟಿ ಕೊಟ್ಟು ಮತಯಾಚನೆ ಮಾಡಿ ಮಾತನಾಡಿ, ಇದುವರೆಗೆ ಶಿಕ್ಷಕರಿಗಾಗಿ ಏನು ಮಾಡಿದ್ದೇನೆಂಬುದನ್ನು ದಾಖಲೆ ಸಮೇತ ಪ್ರಕಟಪಡಿಸಿದ್ದೇನೆ. ಬೇರೆಯವರ ಹಾಗೇ ಬಾಯಿ ಮಾತಿನಲ್ಲಿ ಹೇಳಿ ಹೋಗುವವ ನಾನಲ್ಲ, ಹೇಳಿದ ಕೆಲಸವನ್ನು ಮಾಡಿ ದಾಖಲಿಸಿ ಪ್ರಕಟಿಸುವವ ನಾನು ನಾನು ಮಾಡಿದ ಕೆಲಸಗಳೇ ನನಗೆ ಮತಗಳಾಗಿ ಮಾರ್ಪಡುತ್ತವೆ. ನಾನು ಏನು, ಎಂತು ಎಂಬುದು ಶಿಕ್ಷಕರಿಗೆ ಚನ್ನಾಗಿ ಗೊತ್ತು ಅವರ ನೋವು ಸಂಕಟಗಳು ನನಗೂ ಗೊತ್ತು. ಶಿಕ್ಷಕರಿಗೂ ನನಗೂ 36 ವರ್ಷಗಳ ಸಂಬಂಧ. ಈ ಸಂಬಂಧದ ಭದ್ರಕೋಟೆಯನ್ನು ಭೇದಿಸಲು ವಿರೋಧಿಗಳಿಗೆ ಯಾವ ಕಾಲಕ್ಕೂ ಸಾಧ್ಯವಿಲ್ಲವೆಂದರು.
ಜಿ.ಆರ್ ಭಟ್, ಜಿ.ಎಂ ಹೊಸಮನಿ, ಎಮ್ ಎಫ್ ಹಿರೇಮಠ, ಎನ್ ಆರ್ ಬಾಳಿಕಾಯಿ, ಶ್ರೀಧರ ಸಂಜೀವಕರ, ಕಲಘಟಗಿಯ ಹುದ್ದಾರ ಸುಣಗಾರ, ರೊಟ್ಟಿ, ರಾಚಣ್ಣವರ, ಮುರಕಟ್ಟಿ, ಮುಲ್ಲಾ, ಎಂ ಬಿ. ಮುಲ್ಲಾ, ಎಂ. ಬಿ ನಾಥು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here