ಮಹಿಳೆಯರು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲಿ:ಮಂಗಲಾ

0
17
loading...

ಬೆಳಗಾವಿ 27: ನಶಿಸುತ್ತಿರುವ ಭಾರತೀಯ ಸಂಸ್ಕøತಿಯನ್ನು ಪ್ರಸ್ತುತ ಪ್ರಜ್ಞಾವಂತ ನಾಗರಿಕರು ಕಾಪಾಡಿ ಬೆಳೆಸುವ ಅಗತ್ಯವಿದೆ. ಇಂದಿನ ಮಹಿಳೆಯರು ಸಾಹಿತ್ಯ ಅಭಿರುಚಿ ಬೆಳಸಿಕೊಂಡು ಸಾಹಿತ್ಯಗಳಾಗಬೇಕು ಎಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ ತಿಳಿಸಿದರು.
ಅವರು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಲಿಂಗಾಯತ ಮಹಿಳಾ ಸಮಾಜದ ವಾರ್ಷಿಕೋತ್ಸವ ನಿಮಿತ್ತ ಸಂಜೆ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಿಂಗಾಯತ ಸೇರಿದಂತೆ ಎಲ್ಲ ಸಮಾಜದ ಎಲ್ಲ ಮಹಿಳೆಯರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದು ಸಾಹಿತ್ಯ ರಚನೆ ಮತ್ತು ರಚನಾತ್ಮಕ ಕಾರ್ಯಕಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸೇವೆ ಗೈದ ಹಳೆ ಸಮಿತಿಯ ಆಡಳಿತ ಮಂಡಳಿಯ ಸದಸ್ಯೆಯರನ್ನು ಬಿಳ್ಕೊಟ್ಟು, ಹೊಸ ಸಮಿತಿಯ ಸದಸ್ಯರನ್ನು ಆಹ್ವಾನಿಸಿಕೊಳ್ಳಲಾಯಿತು. ನೂತನ ಅಧ್ಯಕ್ಷರಾಗಿ ಜಯಶ್ರೀ ನಿರಾಕಾರಿ ಅಧಿಕಾರ ಸ್ವೀಕರಿಸಿದರು. ಅನುಭವ ಮಂಟಪ, ಗೀತನಾಟಕ, ಜನಪದ ಗೀತೆ, ಚಲನಚಿತ್ರ ಗೀತೆ, ಮರಾಠಿ ಲಾವಣಿ ನೃತ್ಯ, ಮಲ್ಹಾರ ನೃತ್ಯ, ಕಥಕ ಡ್ಯಾನ್ಸ್ ಹಾಗೂ ಚಂದಿರ ತಂದ ಹುಣ್ಣಿಮೆ ರಾತ್ರಿ ಮನಸೆಳೆಯುವ ಗೀತೆ ಆಕರ್ಷಿಸಿ ಜನರನ್ನು ಭಕ್ತಿ ಭಾವದಲ್ಲಿ ತೇಲಿಸಿದವು. ವಿವಿಧ ಮನರಂಜಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಜ್ಯೋತಿ ಭಾವಿಕಟ್ಟಿ, ಸುಜಾತಾ ಮಾವನೂರೆ, ನಯನ ಗಿರಿಗೌಡರ, ಮೀನಾ ಚನ್ನನ್ನವರ, ಗೀತಾ ಗುಂಡಕಲ್ಲಿ, ಭಾರತಿ ಸಂಕ್ಕನ್ನವರ, ಆಶಾ ಕಡಪಟ್ಟಿ, ಸಂಜೆ ಸಂಭ್ರಮ ಸಂಚಾಲಕಿ ಹಾಗೂ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ ಸಂಯೋಜಿಸಿದರು. ಕೆಎಲ್‍ಇ ವೇಣುಧ್ವನಿ ರೆಡಿಯೋ ಕಾರ್ಯಕ್ರಮ ನಿರ್ವಾಹಕಿ ಸರ್ವಮಂಗಳಾ ಅರಳಿಮಟ್ಟಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here