ಮಾಜಿ ಶಾಸಕ ಖಾದ್ರಿ ಕಾಂಗ್ರೇಸ್ ಅಭ್ಯರ್ಥಿ ಟಿ.ಈಶ್ವರ ಪರವಾಗಿ ಮತಯಾಚನೆ

0
27
loading...

ಶಿಗ್ಗಾವಿ : ಶಿಕ್ಷಕರ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬದಲಾವಣೆ ಅವಷ್ಯಕತೆಯಿದೆ. ಶಿಕ್ಷಕರ ಸಮಸ್ಯಗಳ ಅರಿವು ಕಾಂಗ್ರೇಸ್ ಅಭ್ಯರ್ಥಿ ಟಿ.ಈಶ್ವರ ಅವರಿಗಿದೆ. ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ, ಮಾಜಿ ಶಾಸಕ ಅಜ್ಜೀಂಪೀರ ಖಾದ್ರಿ ಶಿಕ್ಷಕರಲ್ಲಿ ಮತಯಾಚಿಸಿದರು.
ಪಟ್ಟಣದ ಎಸ್.ಬಿ.ಬಿ. ಎಮ್. ಡಿ ಸಂಯುಕ್ತ ಪದವಿ ಪೂರ್ವ ಕಾಲೇಜ, ಶ್ರೀ ರಂಭಾಪುರಿ ಪದವಿ ಕಾಲೇಜ, ಉರ್ದು ಫ್ರೌಡಶಾಲೆ, ಶ್ರೀಮತಿ ರುದ್ರಮ್ಮ ಪಾಟೀಲ ಪ್ರೌಢ ಶಾಲೆ, ಶ್ರೀಮತಿ ಫ.ಫ.ಮಂತ್ರೋಡಿ ಪ್ರೌಢ ಶಾಲೆ. ಸರ್ಕಾರಿ ಪಧವಿ ಕಾಲೇಜ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಟಿ.ಈಶ್ವರ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತವಿದ್ದು ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ನೇರ ಸಂಪರ್ಕ ಹೊಂದಿರುವ ಟಿ.ಈಶ್ವರ, ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಶ್ರಮ ವಹಿಸುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್.ಎನ್.ವೆಂಕೋಜಿ, ಸವಣೂರ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ನಡುವಿನಮನಿ, ಜನತಾ ಭಜಾರ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್, ಜಿ.ಪಂ ಸದಸ್ಯ ಬಸುವರಾಜ ದೇಸಾಯಿ, ಪುರಸಭೆ ಅಧ್ಯಕ್ಷ ಸದಾಶಿವಪ್ಪ ಕಂಕನವಾಡ, ಸದಸ್ಯರಾದ ಶ್ರೀಕಾಂತ ಮಾಡಿಕ್, ಮುಸ್ತಾಕ ಮುಲ್ಲಾ, ಮಂಜುನಾಥ ತಿಮ್ಮಾಪೂರ, ತಾ.ಪಂ ಸದಸ್ಯ ಎಸ್.ಎಸ್.ಪೂಜಾರ, ಮುಖಂಡರಾದ ಎಫ್.ಸಿ.ಪಾಟೀಲ್, ವಿರೇಶ ಆಜೂರ, ಗುಡ್ಡಪ್ಪ ಜಲದಿ, ಆನಂದ ದಾಸಪ್ಪನವರ, ಸೇರಿದಂತೆ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here