ಮುಸ್ಲಿಮರಿಗೆ ರಮಜಾನ್ ಅತೀ ಮಹತ್ವವಾದ ಹಬ್ಬ: ದೊಡ್ಡಮನಿ

0
143
loading...

ಮುಂಡರಗಿ : ಸಮಾಜವನ್ನು ಸುಧಾರಣೆ ಹಾದಿಯಲ್ಲಿ ನಡೆಸುವಂತದ್ದೇ ಧರ್ಮದ ಕೆಲಸ, ಮನಸ್ಸಿನಲ್ಲಿ ಉತ್ತಮ ಆಲೋಚನೆ, ಶಾತಿಯುತ ಭಾವನೆಯನ್ನು ಹೊಂದುವಂತೆ ಮಾಡುವುದೇ ರೋಜಾ. ಮುಸ್ಲಿಮರಿಗೆ ರಮಜಾನ್ ಅತೀ ಮಹತ್ವವಾದ ಹಬ್ಬ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಇಲ್ಲಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಗುರುವಾರ ಸಂಜೆ ಜರುಗಿದ ಶಾಲಾ ಸಂಸತ್ ಉದ್ಘಾಟನೆ ಹಾಗೂ ರಮಜಾನ್ ಹಬ್ಬದ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಅವರು ಮಾತನಾಡಿದರು.
ರಮಜಾನ್ ಹಬ್ಬದಲ್ಲಿ ಧಾನ ಧರ್ಮವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಸಮಾಜದಲ್ಲಿನ ಎಲ್ಲಾ ಸಮುದಾಯದವರ ಜೊತೆ ಸಹಬಾಳ್ವೆಯಿಂದ ಸಹಭಾಗಿತ್ವದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಖರಾನ್‍ನಲ್ಲಿ ಹೇಳಲಾಗಿದೆ. ಹಿಂದು ಹಾಗೂ ಮುಸ್ಲಿಮ್ ಒಂದೇ ಎನ್ನುವಂತೆ ಎಲ್ಲರೂ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಮಾತನಾಡಿ, ಉತ್ತಮ ಜ್ಞಾನದ ಜೊತೆಗೆ ಧರ್ಮವನ್ನು ಅನುಕರಣೆಗೊಳಿಸುವುದೇ ಇಫ್ತಿಯಾರ್ ಕೂಟ. ಉಪವಾಸ ಮಾಡುವುದರಿಂದ ಒಂದು ಕಡೆ ದೇವರ ಜ್ಞಾನದಲ್ಲಿ ನಿರತರಾದರೇ ಮತ್ತೊಂದು ಕಡೆ ಉತ್ತಮ ಆರೋಗ್ಯಕ್ಕೆ ಸಾಕ್ಷಿಯಾಗುತ್ತದೆ. ಎಲ್ಲಾ ಧರ್ಮದವರು ಪ್ರೀತಿ ಸೌಹಾರ್ದತೆಯಿಂದ ಬಾಳುವುದೇ ನಿಜವಾದ ಧರ್ಮ ಎಂದರು.
ಮುಖಂಡ ಕರಬಸಪ್ಪ ಹಂಚಿನಾಳ, ಎ.ಪಿ.ದಂಡಿನ, ಸುರೇಶ ಮಾಗಡಿ, ಎಂ.ಎ.ನದಾಫ್, ಮೋದಿನಸಾಬ ಡಂಬಳ, ಶಾಲಾ ಶಿಕ್ಷಕರಾದ ಎಚ್.ಜಿ.ಗದ್ದಿಗೌಡರ, ಎಸ್.ವಿ.ಹಡಗಲಿ, ಆರ್.ಜಿ.ಕವಲಗೇರಿ, ಕೆ.ಎನ್.ಶಿರಬಡಗಿ, ಹೀನಾಫಾತಿಮಾ ಜಹಾಗಿರದಾರ, ಬಾಷಾ ಖಾನಗೌಡರ, ಸೇರಿದಂತೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here