ರಮಝಾನ್ ಶಾಂತಿಯುತ ಆಚರಣೆಗೆ ಕರೆ

0
29
loading...

ಭಟ್ಕಳ : ಮುಸ್ಲಿಮರ ಪವಿತ್ರ ರಮಝಾನ ಮಾಸದ ನಂತರ ಆಚರಿಸಲ್ಪಡುವ ಈದುಲ್ ಫಿತ್ರ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೆಕೆಂದು ಗುರುವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಜರಗಿದ ಶಾಂತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವರಾಜು ಹಬ್ಬಗಳು ಸಂತೋಷ ಸಡಗರದಿಂದ ಆಚರಿಸಲ್ಪಡುವಂತಾಗಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಹಿಂದು ಮುಸ್ಲಿಮ ಎಲ್ಲರೂ ಶಾಂತಿಯಿಂದ ಇರಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದ ಅವರು ಎಲ್ಲ ಸಮುದಾಯದವರು ಶಾಂತಿ ಸುವೆವಸ್ಥೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಸಭೆಯಲ್ಲಿ ತಂಝೀಮ್ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಲವು ಸಮಸ್ಯೆಗಳ ಕುರಿತಂತೆ ಚರ್ಚಿಸಿದ್ದು ಇದರಲ್ಲಿ ಹೆಸ್ಕಾಂ ಇಲಾಖೆಯ ಸಮಸ್ಯೆಗಳೇ ಹೆಚ್ಚು ಚರ್ಚೆಗೊಳಗಾದವು. ರಮಝಾನ ಸಮಯದಲ್ಲಿ ಮನಸ್ಸಿಗೆ ಬಂದ ಹಾಗೂ ವಿದ್ಯುತ್ ಕಡಿತಗೊಳಿಸಿದ್ದು ಇದರಿಂದ ಉಪವಾಸಿಗರಿಗೆ ತುಂಬಾ ತೊಂದರೆಯಾಗಿದೆ. ಕೊನೆಯ ಐದಾರು ದಿನಗಳಾದರು ವಿದ್ಯುತ್ ಕಡಿತಗೊಳಿಸದೆ ಶಾಂತಿಯಿಂದ ಉಪವಾಸ ಆಚರಿಸಲು ಅವಕಾಶ ಮಾಡಿಕೊಡಿ ಎಂಬ ಆಗ್ರಹ ಸಭೆಯಿಂದ ಕೇಳಿ ಬಂತು. ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಸೂಕ್ತವಾಗಿ ಸ್ಪಂಧಿಸಿದ್ದು ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.

ಅಧಿಕಾರಿಗಳ ಚಾಹ ಸೇವನೆಗೆ ಮಾಜಿ ಪುರಸಭೆ ಸದಸ್ಯ ಅಸಮಧಾನ: ರಮಝಾನ ಮಾಸದಲ್ಲಿ ಮುಸ್ಲಿಮರು ಉಪವಾಸ ಆಚರಿಸುತ್ತಿರಬೇಕಾದರೆ ‘ರಮಝಾ£’À ಹೆಸರಲ್ಲಿ ಶಾಂತಿ ಸಭೆಯನ್ನು ಕರೆದ ಪೊಲೀಸ ಇಲಾಖೆ ಉಪವಾಸಿಗರೆದುರೇ ಚಾಹ ಪಾನಿಯ ಸೇವಿಸಿದ್ದರ ಕುರಿತು ತೀರ್ವ ಅಸಮಧಾನ ವ್ಯಕ್ತಪಡಿಸಿದ್ದ ಪುರಸಭೆಯ ಮಾಜಿ ಸದಸ್ಯ ಸನಾವುಲ್ಲಾ ಗವಾಯಿ ಅಧಿಕಾರಿಗಳು ಮುಸ್ಲಿಮರ ದಾರ್ಮಿಕ ಭಾವನೆಗಳನ್ನು ಅಗೌರವಿಸಿದ್ದಾರೆ ಎಂದು ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ವಿರೋಧಿಸಿದ ಕೆಲ ಹಿಂದೂ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರನಡೆಯಲು ಯತ್ನಸಿದ್ದು ಅಧಿಕಾರಿಗಳನ್ನು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆಯನ್ನು ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ಅಂಜುಮನ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಸೈಯ್ಯದ್ ಝಮಿರುಲ್ಲಾ ಷರೀಪ್ ಇಸ್ಲಾಮ್ ಧರ್ಮ ಸಹನೆ ಹಾಗೂ ಸ್ವಯಂ ನಿರಂತ್ರಣವನ್ನು ಕಲಿಸುತ್ತದೆ. ಅಲ್ಲದೇ ಕುರಾನ್ ಹೇಳಿದಂತೆ ‘ನಿಮ್ಮ ಧರ್ಮ ನಿಮಗೆ ನಮ್ಮ ಧರ್ಮ ನಮಗೆ’ ಹಾಗಾಗಿ ಇಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಪಾಲಿಸಲು ಬದ್ಧರಾಗಿದ್ದಾರೆ. ಮಾಜಿ ಸದಸ್ಯರ ಮಾತುಗಳಿಂದ ಸಭೆಗೆ ನೋವಾದಲ್ಲಿ ತಾವು ಕ್ಷಮೇ ಯಾಚಿಸುವುದಾಗಿ ತಿಳಿಸಿದ್ದು ಇಸ್ಲಾಮ್ ಉದ್ದಾತ್ತ ಸಂದೇಶಗಳು ಸಾರ್ವತ್ರಿಕವಾಗಿವೆ ಎಂದರು.

ಭಟ್ಕಳ ಪೊಲೀಸ್ ವೃತ್ತಾಧಿಕಾರಿ ಪ್ರಶಾಂತ್ ನಾಯ್ಕ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಿಂದು ಮುಸ್ಲಿಂ ಮುಖಂಡರು, ವಿವಿಧ ಪಕ್ಷದ ನಾಯಕರು ಪತ್ರಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here