ರೋಟರಿ ಡಯಾಲಿಸಿಸ್ ಕೇಂದ್ರ ಬಡವರಿಗೆ ವರದಾನ: ರಾಜೇಶ ನಾಯ್ಕ

0
41
loading...

ಭಟ್ಕಳ : ಭಟ್ಕಳ ಹಾಗೂ ಆಸು ಪಾಸಿನ ಬಡ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ರೋಟರಿ ಸಂಸ್ಥೆಯು ಆರಂಭಿಸಿದ ಡಯಾಲಿಸಿಸ್ ಕೇಂದ್ರವು ಯಶಸ್ವೀಯಾಗಿ ಎರಡು ವರ್ಷ ಪೂರೈಸಿದ್ದು ಅನೇಕ ಬಡವರಿಗೆ ಸಂಜೀವಿನಿಯಾಗಿದೆ.
ಭಟ್ಕಳ ರೋಟರಿ ಕ್ಲಬ್ ತನ್ನ 25ನೇ ವರ್ಷದ ಆಚರಣೆ ಸಂದರ್ಭದಲ್ಲಿ ಭಟ್ಕಳ ಜನತೆಗಾಗಿ ಉತ್ತಮ ಕೊಡುಗೆಯನ್ನು ನೀಡಬೇಕು ಎನ್ನುವ ಯೋಚನೆಯಿಂದ ಆರಂಭಿಸಿದ ರೋಟರಿ ಡಯಾಲಿಸಿಸ್ ಸೆಂಟರ್ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬಡ ರೋಗಿಗಳನ್ನು ಕಾಡುವ ಕಿಡ್ನಿ ವೈಫಲ್ಯಕ್ಕೆ ಭಟ್ಕಳದಿಂದ ಉಡುಪಿ, ಮಣಿಪಾಲ, ಹುಬ್ಬಳ್ಳಿಗೆ ಹೋಗುತ್ತಿರುವ ರೋಗಿಗಳ ಖರ್ಚು ವೆಚ್ಚಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಉಳಿದಿದೆಯಲ್ಲದೇ ಅನೇಕರಿಗೆ ದಾನಿಗಳಿಂದ ಹಣ ಸಂಗ್ರಹಿಸಿ ಉಚಿತವಾಗಿ ಡಯಾಲಿಸಿಸ್ ಮಾಡಿಕೊಡುತ್ತಿರುವುದು ವಿಶೇಷವಾಗಿದೆ.
ಡಯಾಲಿಸಿಸ್ ಕೇಂದ್ರ ಸ್ಥಾಪನೆಯಾದಾಗಿನಿಂದ ಪ್ರತಿ ತಿಂಗಳೂ ಕೂಡಾ ರೋಟರಿ ಸದಸ್ಯರು ರೂ.500, ರೂ.1000ಗಳನ್ನು ತಮ್ಮ ದೇಣಿಗೆಯಾಗಿ ನೀಡುತ್ತಿದ್ದು ಅದನ್ನು ಬಡವರ ಡಯಾಲಿಸಿಸ್‍ಗೆ ಬಳಸಲಾಗುತ್ತಿದೆಯಲ್ಲದೇ ದಾನಿಗಳೂ ಕೂಡಾ ಮುಂದೆ ಬಂದು ದಾನವಾಗಿ ಹಣ ನೀಡಿದ್ದು ಸುಮಾರು ಹತ್ತು ಲಕ್ಷದಷ್ಟು ವಿನಿಯೋಗವಾಗಿದೆ.
ಈ ಸಂದರ್ಭದಲ್ಲಿ ಮಾತನಡಿದ ರಾಜೇಶ ನಾಯಕ ಅವರು ಈಗಾಗಲೇ ಈ ಕೇಂದ್ರದಲ್ಲಿ 2554 ಡಯಾಲಿಸಿಸ್ ಯಶಸ್ವೀಯಾಗಿ ನಡೆಸಲಾಗಿದ್ದು 54 ಜನರನ್ನು ಕೇಂದ್ರಕ್ಕೆ ಡಯಾಲಿಸಿಸ್‍ಗಾಗಿ ಸೇರಿಸಲಾಗಿದೆ ಎಂದರು. ಪ್ರಸ್ತುತ ಡಯಾಲಿಸಿಸ್ ಸೆಂಟರ್‍ನಲ್ಲಿ 20 ಜನರು ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದೂ ತಿಳಿಸಿದರು.
ಎರಡನೇ ವರ್ಷಾಚರಣೆಯ ಸಂದರ್ಭದಲ್ಲಿ ಡಯಾಲಿಸಿಸ್ ಸೆಂಟರಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಹೈದರಾಬಾದಿನ ಸ್ಪರ್ಷ ನೆಫ್ರೋ ಕೇರ್‍ನ ರಾಜೇಶ ಕೃಷ್ಣನ್, ಕೆ.ಎಂ.ಸಿ. ಮಂಗಳೂರಿನ ನೆಫ್ರೋಲಜಿ ತಜ್ಞ ಡಾ. ಮಯೂರ ಪ್ರಭು, ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಶ್ರಮಿಸಿದ್ದ ರೋಟರಿ ಪ್ರಮುಖರಾದ ರಾಜೇಶ ನಾಯಕ, ಅಂದಿನ ಅಧ್ಯಕ್ಷ ಈಶ್ವರ ಎನ್. ನಾಯ್ಕ, ಡಾ. ಗೌರೀಶ ಪಡುಕೋಣೆ, ಅನ್ಸಾರ್ ಕೋಲಾ, ಶಾಕೀರ್ ಹುಸೇನ್, ಎಸ್. ಎಂ. ಖಾನ್, ನಝೀರ್ ಕಾಶಿಮಜಿ, ಡಾ. ಮುಷ್ಪಾಕ್ ಅಹಮ್ಮದ್ ಭಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here