ವನಮಹೋತ್ಸವ ಕಾರ್ಯಕ್ರಮ

0
21
loading...

ಕುಮಟಾ : ಶ್ರೀ ನಂದಿ ಪರಿಸರ ಸಂರಕ್ಷಣಾ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಕಲ್ಲಬ್ಬೆಯ ಶ್ರೀ ನಂದಿಕೇಶ್ವರ ದೇವಾಲಯಲದಲ್ಲಿ ಭಾನುವಾರ ನಡೆಯಿತು.
ಕೊಂಕಣ ಎಜ್ಯುಕೇಶನ ಟ್ರಸ್ಟನ ಗೌರವ ಕಾರ್ಯದರ್ಶಿಗಳು ಹಾಗೂ ಉದ್ಯಮಿ ಮುರಳಿ ವಿ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನು ಕುಲದ ಒಳಿತಿಗಾಗಿ ಪರಿಸರದ ರಕ್ಷಣೆಯ ಕುರಿತು ಇಂದಿನ ಯುವ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದರು.
ಮುಖ್ಯ ಅತಿಥಿಗಳಾಗಿ ವೃಕ್ಷ ಮಿತ್ರ ಪ್ರಶಸ್ತಿ ವಿಜೇತ ಹಾಗೂ ಜನಪ್ರಿಯ ದಂತ ವೈದ್ಯರಾದ ಡಾ. ಸುರೇಶ ಹೆಗಡೆ, ಆರ್. ಎಫ. ಓ ಕಿರಣಬಾಬು, ಕಲ್ಲಬ್ಬೆಯ ನಿವೃತ್ತ ಅರಣ್ಯಾಧಿಕಾರಿ ಲಕ್ಷ್ಮಿ ನಾರಾಯಣ ಹೆಗಡೆ ಹಾಗೂ ಶ್ರೀ ನಂದಿಕೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಎಸ್. ವಿ. ಭಟ್ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಎ.ಸಿ.ಎಫ್ ಎಸ್. ವಿ ನಾಯ್ಕ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಷ್ಣು ಭಟ್ಟ ಪ್ರಾರ್ಥಿಸಿದರು. ಶ್ರೀಪಾದ ಭಟ್ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ನಿರೂಪಿಸಿದರು. ಚಿದಾನಂದ ಹೆಗಡೆ ವಂದಿಸಿದರು. ರಾಘವೇಂದ್ರ ಹೆಗಡೆ ಹಾಗೂ ಇತರೆ ಸಂಘದ ಸದಸ್ಯರೆಲ್ಲ ಸೇರಿ ಕಾರ್ಯಕ್ರಮ ಸಂಘಟಿಸಿದ್ದರು.

loading...

LEAVE A REPLY

Please enter your comment!
Please enter your name here