ಸಸಿ ನೆಟ್ಟ ಮೇಲೆ ಅದನ್ನು ಸಂರಕ್ಷಣೆ ಮಾಡುವುದು ಅವಶ್ಯ: ಶೆಟ್ಟರ

0
189
loading...

ಧಾರವಾಡ : ಯುದ್ದೋಪಾದಿಯಲ್ಲಿ ಸಸಿಗಳನ್ನು ನೆಡುವ ಆಂದೋಲನ ಪ್ರಾರಂಭಿಸಬೇಕು ಆಗ ಮಾತ್ರ ನಿಸರ್ಗದ ಪ್ರಕೋಪವನ್ನು ತಡೆಯಲಿಕ್ಕೆ ಸಾಧ್ಯವೆಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ಭಾರತ ಏಕತಾ ಆಂದೋಲನ ಹಾಗೂ ಬಸವಶಾಂತಿ ಮಿಷನ್ ವತಿಯಿಂದ ಜರುಗಿದ ಸಕಾಲದಲ್ಲಿ ಮಳೆ ಬೆಳೆಗಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಸಸಿ ನೆಡುವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ವರ್ಷ ಮಳೆ ಅತ್ಯುತ್ತಮವಾಗುವ ಸಾಧ್ಯತೆಯಿದೆ ಈ ನಿಟ್ಟಿನಲ್ಲಿ ಸ್ಥಳವಕಾಶ ಇದ್ದಲ್ಲಿ ಸಸಿಗಳನ್ನು ನೆಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಸಸಿ ನೆಟ್ಟ ಮೇಲೆ ಅದನ್ನು ಸಂರಕ್ಷಣೆ ಮಾಡುವ ಹೊಣೆಯನ್ನು ತಾವೇ ಹೊರಬೇಕು ಸಸಿ ಬೆಳಯುವರೆಗೂ ಅದಕ್ಕೆ ಟ್ರೀಗಾರ್ಡ ಬಳಸಿ ಅದನ್ನು ಬೆಳೆಸಬೇಕು ಎಂದರು.
ಶ್ರೀ ನಾಮದೇವಾನಂದ ಭಾರತಿ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿ, ಮಳೆ ಹಾಗೂ ಬೆಳೆಗಾಗಿ ಪೂಜೆ ಪ್ರಾರ್ಥನೆ ಮಾಡಿದಾಗ ಭಗವಂತ ಕೃಪೆ ತೋರುತ್ತಾನೆ ಈ ದಿಸೆಯಲ್ಲಿ ಸರ್ವಧರ್ಮದವರಿಗೂ ಮಳೆ ಬೆಳೆ ಅವಶ್ಯವಾಗಿದೆ. ಪೂಜೆ ಪ್ರಾರ್ಥನೆ ಅವರ ಅವರ ಧರ್ಮಕ್ಕೆ ತಕ್ಕಂತೆ ಇರಬಹದು ಆದರೆ ಎಲ್ಲರಿಗೂ ಮಳೆ ಬೆಳೆ ಬೇಕುು ಈ ನಿಟ್ಟಿನಲ್ಲಿ ಸತ್ಸಂಗದ ವತಿಯಿಂದ ಪ್ರಾರ್ಥನೆ ಏರ್ಪಡಿಸಿರುವದು ಸಂತಸದ ವಿಷಯ ಎಂದರು.
ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ವರ್ಷ ಮಳೆಗಾಗಿ ಪ್ರಾರ್ಥನೆ ಮಾಡುವ ಯೋಜನೆ ಹಮ್ಮಿಕೊಂಡು ಸರ್ವ ಧರ್ಮದ ಮುಖಂಡರನ್ನು ಹಾಗೂ ಧಾರ್ಮಿಕ ಸಂಸ್ಕಾರವಂತರನ್ನು ಕರೆಯಿಸಿ ಅವರಿಂದ ಪ್ರಾರ್ಥನೆ ಮಾಡಿಸುತ್ತೇವೆ. ಒಟ್ಟಾರೆಯಾಗಿ ಮಳೆ ಬೆಳೆ ಚೆನ್ನಾಗಿ ಆಗಬೇಕು ಎಂಬುದು ನಮ್ಮ ಆಶಯ ಎಂದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ರಘು ಲಕ್ಕಣ್ಣವರ, ಸಾಹಿತಿ ರಂಮಾಜನ ದರ್ಗಾ, ಮೋಹನ ನಾಗಮ್ಮನವರ, ಅಶೋಕ ಪಾಲ್, ಡಾ.ಶಂಭುಲಿಂಗ ಹೆಗಡಾಳ, ವಿ.ಜಿ.ಕಮ್ಮಾರ ಉಪಸ್ಥಿತರಿದ್ದರು. ಶ್ರೀಧರ ಕುಲಕರ್ಣಿ ನಿರೂಪಿಸಿದರು. ಪ್ರೇಮಾ ಹೊರಟ್ಟಿ ಸ್ವಾಗತಿಸಿದರು. ಮಾರ್ಕಂಡೇಯ ದೊಡಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here