ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ಉತ್ತಮ ಆಡಳಿತ ನಡೆಸಿದೆ: ನಾರಾಯಣ ಸ್ವಾಮಿ

0
38
loading...

ಶಿಗ್ಗಾವಿ : ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮವಾಗಿ ಆಡಳಿತ ನಡೆಸಿದೆ. ಆದರೆ ಸಾಮಾಜಿಕ ನ್ಯಾಯದಡಿ ದಲಿತರಿಗೆ 2 ವರ್ಷ ಮುಖ್ಯ ಮಂತ್ರಿ ಸ್ಥಾನ ಅವಕಾಶ ಕಲ್ಪಿಸಬೇಕಿತ್ತು ಎಂದು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೆ. ನಾರಾಯಣ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಸುಬದ್ರವಾಗಿದೆ, ವೀರೊಧ ಪಕ್ಷದವರ ಟೀಕೆಗಳನ್ನು ಮಾಡುತ್ತಿದ್ದಾರೆ ಆದರೆ ಜನತೆ ಎಲ್ಲವನ್ನು ತೂಕಮಾಡಿ ನಿರ್ಧಾರ ತಿಳಿಸುತ್ತಾರೆ. ರಾಜ್ಯದಲ್ಲಿ ಅನೂಕುಲಸಿಂಧೂ ರಾಜಕಾರಣ ನಡೆದಿದೆ. ಕಾಂಗ್ರೇಸ್ ಪಕ್ಷ ಲೀಡರಗಳನ್ನು ತಯಾರು ಮಾಡುವ ಯಂತ್ರದಂತಾಗಿದೆ. ಕೇಂದ್ರ ಸರ್ಕಾರ ಹಲವಾರು ತಪ್ಪುಗಳನ್ನು ಮಾಡುತ್ತಿದೆ ಅಭಿವೃದ್ದಿಯ ಹೆಸರಲ್ಲಿ ಜನರಿಗೆ ವಂಚಿಸುತ್ತಿದೆ. ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯದಡಿಯಲ್ಲಿ ಬಂದಿರುವದಿಂದ ದಲಿತರಿಗೆ ಮುಖ್ಯ ಮಂತ್ರಿಸ್ಥಾನ ನೀಡುವ ಭರವಸೆ ಪಕ್ಷದ ಮೇಲಿದೆ ದಲಿತರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶ ಮತ್ತು ಅವರಿಗೆ ಅವಕಾಶ ನೀಡುವ ಉದ್ದೇಶದಿಂದ ಮುಂದಿನ ಅವದಿಯಲ್ಲಿ ದಲಿತರಿಗೆ ಸಿ.ಎಮ್ ಸ್ಥಾನ ಸಿಗುವ ಆಶೆಯನ್ನು ಹೊಂದಿದ್ದೆವೆ, ಹೊರತು ಬೇರೆ ಯಾವುದೆ ಉದ್ದೇಶದಿಂದ ಕೇಳುತ್ತಿಲ್ಲ ದಲಿತರಿಗೆ ಸಿ.ಎಮ್ ಸ್ಥಾನ ನೀಡಿದರೆ ಪಕ್ಷದ ಸಾಮಾಜಿಕ ನ್ಯಾಯದ ಸಿದ್ದಾಂತ ಈಡೆರಿದಂತಾಗುತ್ತದೆ. ಈ ಅವಕಾಶ ಕಾಂಗ್ರೇಸ್ ಪಕ್ಷದಲ್ಲಿ ಮಾತ್ರ ಇದೆ ಎಂಬ ಭರವಸೆ ಇದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಯಾವುದೆ ಅಸಮಾಧಾನವಿಲ್ಲ ಎಂದ ಅವರು, ಕುಡ್ಲಿಗಿ ಡಿ.ವೈ.ಎಸ್.ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣಕ್ಕೆ ಸಂಬಂದಿಸಿದಂತೆ ಅನುಪಮಾ ಶೆಣೈ ಅವರು ದುಡುಕು ನಿರ್ಧಾರ ತೆಗೆದುಕೊಳ್ಳಬಾರದಿತ್ತು ಮತ್ತು ಜಿ.ಪರಮೇಶ್ವರ ಅವರು ಈ ಪ್ರಕರಣವನ್ನು ಸುಕ್ಷ್ಮವಾಗಿ ತೆಗೆದುಕೊಂಡು ಬಗೆಹರಿಸಿಕೊಳ್ಳಬೇಕಿತ್ತು ಶೆಣೈ ಅವರು ರಾಜೀನಾಮೆ ಅಂಗಿಕಾರ ಆಗುವ ಮೊದಲೆ ಸರ್ಕಾರದ ವಿರುದ್ದ ತೊಡೆ ತಟ್ಟುವದು ತಪ್ಪು ಮಾಡಿದಂತೆ ಅನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಅಜ್ಜೀಂಪಿರ್ ಖಾದ್ರಿ ಸೇರಿದಂತೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್.ಎನ್.ವೆಂಕೋಜಿ, ಸವಣೂರ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ನಡುವಿನಮನಿ, ಜನತಾ ಬಜಾರ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್, ಜಿ.ಪಂ ಸದಸ್ಯÀರಾದ ಬಸುವರಾಜ ದೇಸಾಯಿ, ರಮೇಶ ದುಗ್ಗತ್ತಿ, ಎಸ್.ಎಫ್.ಮಣಕಟ್ಟಿ, ಪುರಸಭೆ ಅಧ್ಯಕ್ಷ ಸದಾಶಿವಪ್ಪ ಕಂಕನವಾಡ, ಸದಸ್ಯರಾದ ಶ್ರೀಕಾಂತ ಮಾಡಿಕ್, ಎಮ್.ಎಮ್.ಮಕಾಂದಾರ, ಮುಸ್ತಾಕ ಮುಲ್ಲಾ, ಮಂಜುನಾಥ ತಿಮ್ಮಾಪೂರ, ತಾ.ಪಂ ಸದಸ್ಯ ಶ್ರೀಕಾಂತ.ಎಸ್.ಪೂಜಾರ, ಮುಖಂಡರಾದ ಎಫ್.ಸಿ.ಪಾಟೀಲ್. ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here