ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಅಸ್ತಿತ್ವಕ್ಕೆ

0
21
loading...

ದಾಂಡೇಲಿ : ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ದಾಂಡೇಲಿ ಘಟಕದ ಅಧ್ಯಕ್ಷರಾಗಿ ನಾಗಯ್ಯ ಪೂಜಾರಿ, ಕಾರ್ಯದರ್ಶಿಯಾಗಿ ಇಲಿಯಾಸ್ ಪನಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಶೋಕ ಟಿ. ನಾಯ್ಕ, ಶಾಂತಾ ಹಿರೇಮಠ, ಸಹ ಕಾರ್ಯದರ್ಶಿಯಾಗಿ ನಿತಿನ್ ಟಿ. ಶೈಲಾರ್, ಅಲಿಯಾ ನಾಯ್ಕ, ಸದಸ್ಯರಾಗಿ ಪ್ರಕಾಶ ಶೇಟ್ಟು ಗಾವಡೆ, ಚನ್ನ ಬಸವಣ್ಣಯ್ಯ, ಬಸಪ್ಪ ಮಲ್ಲಪ್ಪ ಉಳ್ಳಾಗಡ್ಡಿ, ಪ್ರಮೀಳಾ ಮನಿಗೋಳ, ಪ್ರಕಶ ಗಡ್ಡದ ಹಾಗೂ ಗೌರವ ಸಲಹೆಗಾರರಾಗಿ ಡಿ. ಸ್ಯಾಮಸನ್, ಉದಯ್ ಎನ್. ನಾಯ್ಕ, ಟಿ.ಎಸ್. ನಾಯ್ಕ ಆಯ್ಕೆಯಾಗಿದ್ಧರೆ.
ಇತ್ತೀಚೆಗೆ ದಾಂಡೇಲಿಯಲ್ಲಿ ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಭೆಯಲ್ಲಿ ಅಂಗವಿಕರ ಸಮಸ್ಯೆಗಳ ಕುರಿತಂತೆ, ಹಾಗೂ ಅಂಗವಿಕಲರ ಬಗ್ಗೆ ಸರಕಾರಗಳ ನಿರ್ಲಕ್ಷ ಧೊರಣೆಯ ಬಗ್ಗೆ ಚರ್ಚೆಯಾಯಿತಲ್ಲದೇ, ಅಂಗವಿಕರಿಗಿರುವ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಒತ್ತಾಯಿಸಿ ಅಗಸ್ಟ್ 4 ರಂದು ತಾಲೂಕು ಕೇಂದ್ರ ಹಳಿಯಾಳದÀಲ್ಲಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲ್ಲಿ ರಾಜ್ಯ ಸಂಘದ ಮುಖಂಡರಾದ ವಿಚಾರವಾದಿ ಜಿ.ಎನ್. ನಾಗರಾಜ ಭಾಗವಹಿಸಲಿದ್ದಾರೆಂದು ಸಂಘದ ಅಧ್ಯಕ್ಷ ನಾಗಯ್ಯ ಪೂಜಾರಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here