ಅಂತರಶಾಲಾ ಆಶುಭಾಷಣ ಸ್ಪರ್ಧೆ

0
209
loading...

ಹುಬ್ಬಳ್ಳಿ : ಇಲ್ಲಿಯ ವಿದ್ಯಾನಗರದಲ್ಲಿ ದಿ. 22 ರಂದು ಕೆ. ಎಲ್. ಇ. ಸಂಸ್ಥೆಯ ಎಚ್. ಎಫ್. ಕಟ್ಟಿಮನಿ ಪ್ರೌಢಶಾಲೆ. ಕೆ. ಎಲ್. ಇ. ಸಂಸ್ಥೆಗೆ 100 ವರ್ಷ ತುಂಬಿದ ಸಂಭ್ರಮದ ನಿಮಿತ್ಯ ಹಾಗೂ ಈ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಎಚ್. ಎಫ್. ಕಟ್ಟಿಮನಿಯವರ 130 ನೆಯ ಜಯಂತಿ ಉತ್ಸವದ ನಿಮಿತ್ಯವಾಗಿ ಅಂತರಶಾಲಾ ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಒಟ್ಟು 12 ಶಾಲೆಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು:-
ಪ್ರಥಮಸ್ಥಾನ: ಕುಮಾರ: ಅಕ್ಷಯ ಟೆಂಬೆ ಎಮ್. ಆರ್. ಸಾಕ್ರೆ ಆಂಗ್ಲ ಮಾಧ್ಯಮಪ್ರೌಡಶಾಲೆ, ದ್ವಿತೀಯಸ್ಥಾ£:À ಕುಮಾರಿ: ವಾಸಂತಿ ಗಿರಿಸಾಗರ ಲ್ಯಾಂಮಿಗ್ಟನ್ ಪ್ರೌಢಶಾಲೆ ಮತ್ತು
ತೃತೀಯ ಸ್ಥಾನ: ಕುಮಾರಿ. ಶ್ವೇತಾ. ಮಂಟಯ್ಯನಮಠ ಎಚ್. ಎಫ. ಕಟ್ಟಿಮನಿ ಪ್ರೌಡಶಾಲೆ ಹುಬ್ಬಳ್ಳಿ ಇವರು ಪಡೆದುಕೊಂಡಿರುತ್ತಾರೆ.
ಈ ಕಾರ್ಯಕ್ರಮದ ನಿರ್ಣಾಯಕರಾಗಿ ಪಿ. ಸಿ. ಜಾಬಿನ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿಯರಾದ ಶ್ರೀಮತಿ. ಭಾಗ್ಯಜ್ಯೋತಿ ಹಿರೇಮಠ ಇವರು ಮಕ್ಕಳ ಭಾಷಣ ಕಲೆ, ವಿಷಯ ಸಂಗ್ರಹದ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಮತ್ತು ಜೆ.ಜಿ.ಟಿ.ಟಿ. ಆಯ್ ಕಾಲೇಜಿನ ಉಪನ್ಯಾಸಕರಾದ ಎನ್. ಎಮ್. ಅಂಗಡಿ ಇವರು ಮಕ್ಕಳಲ್ಲಿರುವ ವಾಕ್ ಚಾತುರ್ಯವನ್ನು ಶ್ಲಾಘಿಸಿದರು . ಹಾಗೂ ಈ ಕಾರ್ಯಕ್ರಮದ ಘನಅಧ್ಯಕ್ಷಸ್ಥಾನವನ್ನು ನಮ್ಮ ಶಾಲೆಯ ಮುಖ್ಯಾಧ್ಯಾಪಕಿಯರಾದ ಶ್ರೀಮತಿ. ಎಸ್. ಎಸ್. ದಳವಾಯಿಯವರು ಅನೇಕ ಶಾಲೆಯಿಂದ ಬಂದ ಮಕ್ಕಳ ಭಾಷಣ ಕಲೆಯ ಪ್ರತಿಭೆಯನ್ನು ಪ್ರೋತ್ಸಾಹಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಸ್ವಾಗತ: ಶ್ರೀಮತಿ ಪಿ. ಎಸ್. ಕಳ್ಳಿಮನಿ, ನಿರೂಪಣೆ: ಶ್ರೀಮತಿ ಎಸ್. ಸಿ. ಸವದತ್ತಿ, ವಂದನಾರ್ಪಣೆ: ಶ್ರೀಮತಿ ಎಸ್. ಎಮ್. ಕಂಬಿ ಗುರುಮಾತೆಯರಿಂದ

loading...

LEAVE A REPLY

Please enter your comment!
Please enter your name here