ಅಪರೂಪದ ಜಟಾಪಾರಾಯಣ

0
31
loading...

ಶಿರಸಿ : ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಅಪರೂಪದ ಜಟಾಪಾರಾಯಣವನ್ನು ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ವೀಕ್ಷಿಸಿದರು.
ಗುರುವಾರ ನಡೆದ ಜಟಾಪಾರಾಯಣವನ್ನು ವೀಕ್ಷಿಸಿದ ಅವರು ಇದರ ಮಹತ್ವದ ಕುರಿತು ಮಾತನಾಡಿ, ವೇದ, ಜಪ, ಮಂತ್ರಗಳ ಶಬ್ದಗಳ ಮೇಲೆ ವಿಶೇಷ ಸಾಹಸ ಮಾಡುವುದು ಜಟಾಪಾರಾಯಣವಾಗಿದೆ. ಈವರೆಗೆ ಘನ ಪಾರಾಯಣ, ಕ್ರಮ ಪಾರಾಯಣಗಳು ನಡೆದಿವೆಯಾದರೂ ಅತೀ ಅಪರೂಪವಾಗಿ ಕೃಷ್ಣ ಯಜುರ್ವೇದ ಜಟಾ ಪಾರಾಯಣ ನಡೆಯುತ್ತಿದೆ ಎಂದರು. ಋಗ್ವೇದದ ಘನ ವಿದ್ವಾಂಸರು ಭಾಗಿಯಾಗಿದ್ದು, ನಿರಂತರವಾಗಿ 14 ದಿನಗಳ ಕಾಲ ನಿತ್ಯ 10 ಗಂಟೆಗಳೆಂತೆ ನಡೆಯುತ್ತದೆ ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮ ಸಂಯೋಜಕ ನಾರಾಯಣ ಭಟ್ಟ ಬಕ್ಕಳ ಇದ್ದರು.

loading...

LEAVE A REPLY

Please enter your comment!
Please enter your name here