ಆ.10 ರಿಂದ ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರಶ್ವರ ಸ್ವಾಮಿ ದೇವಸ್ಥಾದಲ್ಲಿ ಕೋಟಿ ಬಿಲ್ವಾರ್ಚನೆ

0
34
loading...

ಹುಬ್ಬಳ್ಳಿ : ನಗರದ ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರಶ್ವರ ಸ್ವಾಮಿ ದೇವಸ್ಥಾದಲ್ಲಿ ವಿಶ್ವಶಾಂತಿ, ಸಕಲ ಮನಕುಲ ಉದ್ಧಾರಕ್ಕಾಗಿ ಹಾಗೂ ಸಮೃದ್ಧ ಮಳೆಗಾಗಿ ಪ್ರಾರ್ಥಿಸುವ ಸಂಕಲ್ಪದೊಂದಿಗೆ ಶ್ರಾವಣ ಮಾಸದಲ್ಲಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 4 ರವರೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಾದಪದ್ಮಗಳಿಗೆ 3500 ದಂಪತಿಗಳಿಂದ ಕೋಟಿ ಬಿಲ್ವಾರ್ಚನೆ ಹಾಗೂ ಪಾಲ್ಗೋಂಡ ಎಲ್ಲ ಸುಮಂಗಲೆಯರಿಗೆ ಉಡಿ ತುಂಬುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಗೌರವಾಧ್ಯಕ್ಷ ಚಂದ್ರಶೇಖರ ಮಟ್ಟಿ ಹೇಳಿದ್ದಾರೆ. ಇಲ್ಲಿ ಶ್ರೀ ವೀರಭದ್ರಶ್ವೇರ ದೇವಸ್ಥಾನದಲ್ಲಿ ದಿ.26 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.10 ರಂದು ಇಂಚಲದ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಮತ್ತು ಶಿರಹಟ್ಟಿ ಭಾವೈಕ್ಯ ಸಂಸ್ಥಾನಮಠದ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿದಿನ ಪಾಲ್ಗೋಳ್ಳುವ 150 ದಂಪತಿಗಳ ಶುಭ ಹಸ್ತದಿಂದ ವೀರಭದ್ರಸ್ವಾಮಿಗೆ ಬಿಲ್ವಾರ್ಚನೆ ಸಮರ್ಪಣೆ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಹನ್ನೊಂದು ಜನ ಶಾಸ್ತ್ರಿಗಳು ಭಾಗವಹಿಸುವರು. ಬಿಲ್ವಪತ್ರಿ ಅರ್ಪಿಸಲು ಇಚ್ಛಸುವ ಪ್ರತಿ ದಂಪತಿಗೆ 555 ರೂ. ಸೇವಾ ಶುಲ್ಕ ನಿಗದಿ ಮಾಡಲಾಗಿದೆ. ಭಾಗವಹಿಸುವ ದಂಪತಿಗೆ 1200 ರೂ. ಮೌಲ್ಯದ ಸೀರೆ, ಕುಪ್ಪ, ಶಾಲು , ಲುಂಗಿ, ರುದ್ರಾಕ್ಷಿ ಮಾಲೆ ಸೇರಿ ಇತರೆ ಸಾಮಗ್ರಿ ನೀಡಲಾಗುವದು.ಪೂಜಾ ಸೇವೆಯಲ್ಲಿ ಭಾಗವಹಿಸಿದವರಿಗೆ ಪ್ರತಿದಿನ ಕಾರ್ಯಕ್ರಮ ಪೂರ್ವದಲ್ಲಿ ಅಲ್ಪೋಪಹಾರ, ಚಹಾ ಮತ್ತು ನಂತರ ಮಹಾಪ್ರಸಾದ ಹಾಗೂ ಬಾಳೆಹಣ್ಣು ನೀಡಲಾಗುವದು ಎಂದು ತಿಳಿಸಿದರು. ದೇವಸ್ಥಾನದಿಂದ ನೀಡಲಾದ ಸೀರೆ ಮತ್ತು ಲುಂಗಿಯನ್ನು ದಂಪತಿ ನಿಗಿಪಡಿಸಿದ ಪೂಜೆ ದಿನಾಂಕ ಮತ್ತು ಸಮಾರೋಪ ಸಮಾರಂಭಕ್ಕೆ ಧರಿಸಿ ಬರಬೇಕು. 26 ದಿನಗಳವರೆಗೆ ನಿರಂತರ ಪ್ರಸಾದ ಜರುಗುತ್ತದೆ. ಸೇವೆಯಲ್ಲಿ ಭಾಗವಹಿಸುವ ಭಕ್ತರು ಹೆಸರಿನಲ್ಲಿ ಹಾಗೂ ಅವರು ಇಚ್ಛಸುವ ದಿನದಂದು ಪ್ರಸಾದ ನಸೇವೆ ಕಲ್ಪಿಸಲಾಗುವುದು ಹಾಗೂ ಅವರನ್ನು ಅದೇ ದಿನ ಮುಂಜಾನೆ ಸತ್ಕರಿಸುವುದರ ಜೊತೆಗೆ ಉಚಿತ ಪೂಜೆ ಸಲ್ಲಿಸಲು ಅವಕಾಶವಿದೆ. ಕೊನೆಯ ದಿನದ ಕಾರ್ಯಕ್ರಮಕ್ಕೆ ಪ್ರಸಾದ ಸೇವೆ ಸಲ್ಲಿಸುವ ಸದ್ಭಕ್ತರು 1,01,111 ರೂ. ಸಲ್ಲಿಸಿದಲ್ಲಿ ಅವರ ಹೆಸರಿನಲ್ಲಿ ಪ್ರಸಾದ ಸೇವೆ ಸಲ್ಲಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಟ್ರಸ್ಟ್ ಕಮಿಟಿಯಿಂದ ಸತ್ಕರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ಎಸ್.ಎಂ ರುದ್ರಯ್ಯ, ಬಸವರಾಜ ಚಿಕ್ಕಮಠ, ನಾರಾಯಣ ಪ್ರಸಾದ ಪಾಠಕ, ಬಾಬು ಹುಬಳೀಕರ, ಪ್ರಭುದೇವ ಹಿಪ್ಪರಗಿ, ಈರಣ್ಣ ಬಲೂಚಿಗಿ, ಬಸವರಾಜ ಕಲ್ಯಾಣಶೆಟ್ಟರ್, ಶಿವಯೋಗಿ ವಿಭೂತಿಮಠ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here