ಎಲ್ಲರ ಸಹಕಾರದಿಂದ ಕೃಷಿ ಪ್ರಗತಿ: ನದಾಫ

0
30
loading...

ಗೋಕಾಕ: ರಸಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರು, ಕೃಷಿ ಇಲಾಖೆ ಮತ್ತು ರೈತರು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕೃಷಿ ಬೆಳೆಗಳ ಉತ್ಪಾದನೆ ಹೆಚ್ಚುಸುವಲ್ಲಿ ಸಹಕರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್ ನದಾಫ ಹೇಳಿದರು.
ಶುಕ್ರವಾರದಂದು ನಗರದ ತಾಪಂ ಸಭಾ ಭವನದಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ ರಸಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ ಕಳೆದ ವರ್ಷದ ಬರಗಾಲದ ಛಾಯೆಯಿಂದ ರೈತರು ಸಂಕಟದಲ್ಲಿದ್ದಾರೆ. ಈ ವರ್ಷ ದೇವರ ದಯೆಯಿಂದ ಮಳೆ ಚೆನ್ನಾಗಿ ಆಗಿದೆ. ಹೆಚ್ಚಿನ ಬೆಳೆಯನ್ನು ತೆಗೆಯಲು ಎಲ್ಲರೂ ಕೂಡಿಕೊಂಡು ಪ್ರಯತ್ನಿಸೋಣ ಎಂದು ತಿಳಿಸಿದರು.
ರೈತರ ಒಡನಾಡಿಗಳಾದ ತಾವು ರೈತರಿಗಾಗಿ ಪ್ರಧಾನಮಂತ್ರಿ ಫಸಲು ಬೀಮಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಇಲಾಖೆಯೊಂದಿಗೆ ಸಹಕರಿಸಿಬೇಕು. ಮಾರಾಟ ಮಾಡುವ ಕೇಂದ್ರದಲ್ಲಿ ದರಪಟ್ಟಿ, ತಮ್ಮಲ್ಲಿರುವ ದಾಸ್ತನುಗಳನ್ನು ರೈತರಿಗೆ ಕಾಣುವಂತೆ ಹಾಕಬೇಕು. ತಮ್ಮಲ್ಲಿ ಪರಿಕರ ಪಡೆದ ರೈತರಿಗೆ ರಶೀದಿಯನ್ನು ನೀಡಬೇಕು ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ ಅವರು ಮಾತನಾಡಿ ರೈತರು ಉತ್ತಮವಾದ ಬೀಜಗಳು, ಬೆಳೆಗಳಿಗೆ ಬಳಸಬಹುದಾದ ಕೀಟನಾಶಕ ಹಾಗೂ ರಸಗೊಬ್ಬರ ಬಳಕೆಯ ಪ್ರಮಾಣದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ನೀಡಿ ರೈತರ ಆರ್ಥಿಕ ಅಭಿವೃದ್ದಿಯಲ್ಲಿ ಶ್ರಮಿಸಬೇಕು ಎಂದು sಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ತಹಶೀಲದಾರ ಜಿ.ಎಸ್.ಮಹಾಜನ ವಹಿಸಿದ್ದರು.
ಈ ಸಭೆಯಲ್ಲಿ ರಸಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಎ.ಎಸ್.ಅಥಣಿ, ಉಪಾಧ್ಯಕ್ಷ ಎಸ್.ಆರ್.ಹೆಗಡೆ ತಾಲೂಕಿನ ವಿವಿಧ ಗ್ರಾಮಗಳ ಮಾರಾಟಗಾರರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೃಷಿ ಅಧಿಕಾರಿಗಳಾದ ಎಲ್.ಎನ್.ಕೌಜಗಿ ಸ್ವಾಗತಿಸಿ, ನಿರೂಪಿಸಿದರು. ಎಸ್.ಬಿ ಕರಗಣ್ಣಿ ವಂದಿಸಿದರು.
*********
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಲಾಗಿರುವ ಹಿನ್ನಲೆಯಲ್ಲಿ ರಸಗೊಬ್ಬರ ದರದಲ್ಲಿ ಕಡಿಯಾಗಿದ್ದು ತಮ್ಮಲ್ಲಿ ದಾಸ್ತಾನುನಲ್ಲಿ ಸಂಗ್ರಹವಿರುವ ಗೊಬ್ಬರ ಚೀಲಗಳ ಮೇಲೆ ಬರೆದ ಬೆಲೆಗೆ ರೈತರಿಗೆ ನೀಡಿ.
ಎಮ್.ಎಮ್ ನದಾಫ
ಸಹಾಯಕ ಕೃಷಿ ನಿರ್ದೇಶಕರು

loading...

LEAVE A REPLY

Please enter your comment!
Please enter your name here