ಕತ್ತಲೆಯಲ್ಲಿ ಬಸ್ ನಿಲ್ದಾಣ

0
24
loading...

ದಾಂಡೇಲಿ : ಕತ್ತಲೆಯಲ್ಲಿ ಬಸ್ ನಿಲ್ದಾಣ. ಅರ್ರೇ ಇದೆಲ್ಲಿ ಅಂದುಕೊಂಡಿರ, ಹಾಗಾದರೆ ಇಲ್ಲಿ ಸ್ವಲ್ಪ ಕೇಳಿ. ಅಂದ ಹಾಗೆ ಜಿಲ್ಲೆಯ ಮೊದಲ ನಗರ ಸಭೆಯೆಂಬ ಖ್ಯಾತಿ ಹೊಂದಿದ ದಾಂಡೇಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ಕರೆಂಟ್ ಇಲ್ಲದೆ ಕತ್ತಲಲ್ಲೆ ನಿಲ್ದಾಣದ ವ್ಯಾಪರಸ್ಥರು, ಸಾರಿಗೆ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ವಾರದಿಂದ ಬಸ್ ನಿಲ್ದಾಣದ ಯಾವೊಂದು ಬಲ್ಬ್‍ಗಳು ಉರಿಯುತ್ತಿಲ್ಲ. ಬಸ್ ನಿಲ್ದಾಣದ ವ್ಯಾಪಾರಿಗಳು ಕ್ಯಾಂಡಲ್ ಬೆಳಕಲ್ಲೆ ವ್ಯಾಪಾರದಲ್ಲಿ ಮಗ್ನರಾದರೇ, ಇತ್ತ ಟಿ.ಸಿ ಸಾಹೇಬ್ರು ಮೊಬೈಲ್ ಬೆಳಕು ಮತ್ತು ಟಾರ್ಚ್ ಬೆಳಕಿನಲ್ಲೆ ತನ್ನ ಕಾಯಕ ನಿರ್ವಹಿಸುತ್ತಿದ್ದಾರೆ.

ಪತ್ರಿಕೆಗೆ ಬಂದ ಮಾಹಿತಿಯ ಪ್ರಕಾರ ಬಸ್ ನಿಲ್ದಾಣಕ್ಕೆ ಈಗಿರುವ ವಿದ್ಯುತ್ ವ್ಯವಸ್ಥೆಯನ್ನು ನವೀಕರಸಲಾಗುತ್ತಿದ್ದು, ಆ ಕಾರಣಕ್ಕಾಗಿ ಕರೆಂಟ್ ತೆಗೆಯಲಾಗಿದೆ. ಹೊಸದಾಗಿ ವಿದ್ಯುತ್ ವ್ಯವಸ್ಥೆ ಇಂದು ನಾಳೆಯೊಳಗಡೆ ಕರ್ತವ್ಯ ನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

loading...

LEAVE A REPLY

Please enter your comment!
Please enter your name here