ಕರ್ನಾಟಕ ಏಕಿಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದ ವೆಂಕಟರಾಯರು

0
32
loading...

ಧಾರವಾಡ : ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲೂ ಮಹತ್ವದ ಪಾತ್ರವಹಿಸಿದ್ದರು, ಇಂದಿನ ಯುವ ಪೀಳಿಗೆ ಅವರ ಚಿಂತನೆಗಳನ್ನು ಅಭ್ಯಾಸ ಮಾಡಬೇಕು ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಹೇಳಿದರು.
ಆಲೂರ ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ವೆಂಕಟರಾವ ಟ್ರಸ್ಟ ಎರ್ಪಡಿಸಿದ್ದ 136 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕಾಂತರ್ಗತ ಭಾರತಾಂತರ್ಗತದಲ್ಲಿ ವಿಶ್ವವನ್ನು ನೋಡಬೇಕು, ಅರಿಯಬೇಕು ಅನ್ನುವಂಥ ಒಂದು ಅಪರೂಪದ ಬೀಜವನ್ನು ಬಿತ್ತಿದವರು ಆಲೂರ ವೆಂಕಟರಾಯರು. ಸಮಗ್ರ ಕರ್ನಾಟಕವನ್ನು ಒಂದು ಮಾಡುವಲ್ಲಿ ಎಷ್ಟು ಶ್ರಮಿಸಿದರೋ ಅಷ್ಟೇ ಶ್ರಮವನ್ನು ನಮ್ಮ ಕರ್ನಾಟಕ ಐತಿಹಾಸಿಕವಾಗಿ, ಪ್ರಾಕೃತಿಕವಾಗಿ, ಭೌಗೋಲಿಕವಾಗಿ ಅಷ್ಟೆ ಶ್ರೀಮಂತ ಎಂದು ತೂೀರಿಸುವಲ್ಲಿಯೂ ಶ್ರಮಿಸಿದರು. ಕನ್ನಡಿಗರ ಮನಸ್ಸು ಎಷ್ಟು ರೀತಿಯಿಂದ ಭಾಷೆ, ಸಂಸ್ಕøತಿ, ಆರ್ಥಿಕವಾಗಿ ಬಲಗೂಳ್ಳಲು ಸಾಧ್ಯ ಎಂಬುದನ್ನು ಹಲವಾರು ವಿಧಾಯಕ ಕಾರ್ಯಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಕರ್ನಾಟಕ ಏಕಿಕರಣದಲ್ಲಿ ಬಹು ದೂಡ್ಡ ಪಾತ್ರವಹಿಸಿದ್ದ ವೆಂಕಟರಾಯರು ಗ್ರಂಥಾಲಯಗಳ ಬೆಳವಣೆಗೆಗೆ ಪತ್ರಿಕೆಗಳ ಅವಶ್ಯಕತೆ ಮೊದಲಾದವುಗಳನ್ನು ಕುರಿತು ಗಾಢವಾಗಿ ಚಿಂತಿಸಿದ್ದರು. ಶಾಲೆ – ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಅವರ ಜೀವನ ಚರಿತ್ರೆ, ಮಾಡಿದ ಸಾಧನೆಗಳ ಪರಿಚಯ ಲೇಖನವಾಗಿ ಬರಬೇಕು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಬಿ. ಗಾಯಿ ಅಧ್ಯಕ್ಷತೆವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಶ್ರೀನಿವಾಸ ರಿತ್ತಿ, ದುಷ್ಯಂತ ನಾಡಗೌಡ, ರಮಾಕಾಂತ ಜೋಶಿ, ಶ್ರೀನಿವಾಸ ಪಾಡಿಗಾರ, ಶಿವಶಂಕರ ಹಿರೇಮಠ, ರಾಧಿಕಾ ಕಾಖಂಡಕಿ, ಶ್ರೀಕಾಂತ ದೇಸಾಯಿ ಉಪಸ್ಥಿತರಿದ್ದರು. ದೀಪಕ ಆಲೂರ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ವಂದಿಸಿದರು. ಶ್ರೀನಿವಾಸ ವಾಡಪ್ಪಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here