ಕಲಾವಿದನಿಗೆ ಕಲ್ಪನಾಶಕ್ತಿಯೊಂದಿಗೆ ಬುದ್ಧಿಶಕ್ತಿ ಅವಶ್ಯ

0
30
loading...

ಬೆಳಗಾವಿ 24: ಕಲಾವಿದನಿಗೆ ಕಲ್ಪನಾ ಶಕ್ತಿ ಜೊತೆಗೆ ಬುದ್ಧಿಶಕ್ತಿಯೂ ಬೇಕು. ಬುದ್ದಿಶಕ್ತಿ ಹಾಗೂ ಕಲ್ಪನಾಶಕ್ತಿ ಎರಡೂ ಮೈಳಿಸಿದಾಗ ಕಲಾವಿದನಿಂದ ಒಳ್ಳೊಳ್ಳೆ ಕಲಾಕೃತಿಗಳು ಉತ್ಪತ್ತಿಯಾಗಲು ಸಾಧ್ಯ. ಈ ಕಲೆಗೆ ಆಶ್ರಯ ಸಿಗಲು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಮಾಜ ಮಾಡಬೇಕು. ಕಲಾಸಕ್ತರ ಕಲಾಕೃತಿಗಳನ್ನು ಕೊಂಡುಕೊಳ್ಳುವುದರ ಮೂಲಕ ಕಲೆಯನ್ನು ಪೋಷಿಸಬೇಕು ಅಲ್ಲದೇ ಈ ಕಲೆಗಳು ಸಾಮಾನ್ಯ ಜನರಿಗೂ ತಲುಪುವಂತಾಗಬೇಕೆಂದು ಹಿರಿಯ ಚಿತ್ರಕಲಾವಿದ, ಸಾಹಿತಿ ಚಂದ್ರಕಾಂತ ಕುಸನೂರ ಹೇಳಿದರು.
ಅವರು ರವಿವಾರ ನಗರದ ಖಾನಾಪುರ ರಸ್ತೆಯಲ್ಲಿರುವ ಮಹಾವೀರ ಭವನ ಆವರಣದಲ್ಲಿರುವ ಜೈನ ಯುವಕ ಮಂಡಳದ ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರ ಇವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮತಿ ಮಾಧುರಿ ದೊಡಮನಿ ಹಾಗೂ ದಿಲೀಪ ಕಾಳೆಯವರ ಏಕವ್ಯಕ್ತಿ ಚಿತ್ರಪ್ರದರ್ಶ ಕಾರ್ಯಕ್ರದಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಲೆಯಲ್ಲಿ ಏನನ್ನಾದರೂ ಹೊಸತನ್ನು ಕೊಡಬೇಕನ್ನೆವ ಸತತ ಕ್ರಿಯಾಶೀಲರಾಗಿರುವ ಇವರಿಗೆ ಈ ಕ್ಷೇತ್ರದಲಿ ಇನ್ನು ಹೆಚ್ಚು ಹೆಚ್ಚು ಶ್ರೆಯಸ್ಸು ಲಭಿಸುವಂತಾಗಲಿ ಇವರ ಹೆಸರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ತಿಳಿಸಿದರು.
ಎಂ. ಬಿ. ಪಾಟೀಲ ವಿದೇಶಿಗರಿಗೆ ಹೊಲಿಸಿದಾಗ ಇಲ್ಲಿ ಕಲಾವಿದರು ಭಾರತೀಯ ಸಂಸ್ಕøತಿಯನ್ನು ಬಿಂಬಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದ ಅವರು ದಿಲೀಪ ಕಾಳೆ ಹಾಗೂ ಮಾಧುರಿ ದೊಡಮನಿ ದಂಪತಿಗಳು ಒಳ್ಳೆಯ ಕಲಾವಿದರು. ಬೆಳಗಾವಿ, ಕಲಾವಿದರನ್ನು ಪ್ರೋತ್ಸಾಹಿಸುವಂಥ ವಾತಾವರಣ ಹೊಂದಿದೆ. ಇದಕ್ಕೆ ಇಂದು ನೆರೆದಿರುವ ಕಲಾರಸಿಕರೇ ಸಾಕ್ಷೆ. ಅದಕ್ಕೆ ಪೂರಕವೆಂಬಂತೆ ಈ ಕಲಾವಿದ ದಂಪತಿಗಳು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಕಲಾಸೇವೆನ್ನು ಮಾಡತ್ತಲಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು.
ಕಾರ್ಮಿಕ ಅಧಿಕಾರಿಗಳಾದ ದೇವರಾಜ ಎಂ. ಎನ್. ಕಲಾಪ್ರದರ್ಶನವನ್ನು ಉದ್ಘಾಟಿಸಿದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಸದಸ್ಯ ರಾಜು ದೇವಋಷಿ ಮಾತನಾಡಿದದರು.
ಕಲಾವಿದ ದಿಲೀಪ ಕಾಳೆ, ಡಾ. ಕೆ. ಕೆ. ಪಾವಸ್ಕರ, ಮಾಧುರಿ ದೊಡಮನಿ, ಬೆನನ್‍ಸ್ಮಿತ್ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಹ್ಲಾದ ಸಾಬಣ್ಣವರ ಅಲ್ಲದೇ ಸೂರ್ಯಕಾಂತ ಗಣಾಚಾರಿ, ಅಜಿತ ಔರವಾಡಕರ, ಸುಶೀಲ ತರಬರ, ರವಿ ಕುಲಕಣಿ, ಮಹೇಶ ಹೊನ್ನೊಳ್ಳೆ, ಶಿವಾನಂದ ಬನ್ನೂರ, ನಾಗೇಶ ಚಿನಕೋಳ, ಚಂದನಕುಮಾರ, ಸುಜೀತ ಪದಮ್ಮಣ್ಣವರ, ಗುರುಸಿದ್ದಣ್ಣವರ, ನಂದಾ ಬೋಕಡೆ, ಆಶಿಕ ದೇವಟಗಿ, ರಾಜು ಹೊಂಗಲ, ರವಿ ಮುರಗೋಡ, ಸಂತೋಷ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here