ಕಾಂಗ್ರೆಸ್‍ಗೆ ಅಧಿಕಾರ ತಪಿಸಲು ಜೆಡಿಎಸ್‍ಗೆ ಬೆಂಬಲ ನೀಡಿದ ಬಿಜೆಪಿ

0
19
loading...

ಮೋಳೆ 02: ತಮಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಶತೃವಿಗೆ ಅಧಿಕಾರ ಸಿಗಬಾರದು! ಉಗಾರ ಪುರಸಭೆಯಲ್ಲಿ ಬಿಜೆಪಿ ಪಾಲಿಸಿದ ನೀತಿ ಇದು. ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ತಪ್ಪಸಲು ಏಕೈಕ ಉದ್ಧೇಶದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೇರಡನ್ನು ಜೆಡಿಎಸ್‍ಗೆ ಧಾರೆ ಎರೆದಿದೆ. ಇದರಿಂದ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಎರಡು ಸ್ಥಾನಗಳು ಜೆಡಿಎಸ್ ಪಾಲಾಗಿವೆ.
ಉಗಾರ ಅಥಣಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದ್ದು, ಗ್ರಾಮ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿದ್ದು ಶನಿವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ದೀಪಾಲಿ ಸಿಂಗೆ, ಉಪಾಧ್ಯಕ್ಷ ಸ್ಥಾನಕ್ಕೆ ನಂದಿನಿ ಫರಾಕಟ್ಟೆ ಹಾಗೂ ಕಾಂಗ್ರೆಸ್‍ನ ಶಶಿಕಾಂತ ಕಾಂಬಳೆ, ಹಾಗೂ ಮಹಾದೇವಿ ವಡಗಾಂವೆ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್‍ನ ದೀಪಾಲಿ ಸದಾಶಿವ ಸಿಂಗೆ(15)ಮತಗಳನ್ನು ಪಡೆದು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಂದಿನಿ ಸುಜಯ ಫರಾಕಟ್ಟೆ(15) ಮತಗಳನ್ನು ಪಡೆದು ಆಯ್ಕೆಗೊಂಡರು. ಕಾಂಗ್ರಸ್ ನ ತಲಾ 9 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ಎಂದು ತಹಶೀಲ್ದಾರ ಡಿ. ಮಹಾತ್ ಉಪತಹಶೀಲ್ದಾರ ರಾಜು ಬುರ್ಲಿ, ಮುಖ್ಯಾಧಿಕಾರಿ ಎಂ.ಎ.ರಾಜಾಪೂರೆ ಘೋಷಿಸಿದರು.
ಉಗಾರ ಪುರಸಭೆಗೆ ಒಟ್ಟು 23 ಸದಸ್ಯರ ಬಲವಿದ್ದು ಇದರಲ್ಲಿ ಕಾಂಗ್ರೆಸ್‍ನ 9 ಬಿಜೆಪಿಯ 8 ಜೆಡಿಎಎಸ್‍ನ 6 ಸ್ಥಾನಗಳನ್ನು ಗಳಿಸಿದ್ದಾರೆ. ಜೆಡಿಎಸ್‍ನ ಕೇವಲ 6 ಸ್ಥಾನಗಳಿದ್ದು ಸರಳ ಬಹುಮತಕ್ಕೆ 7 ಸದಸ್ಯರ ಕೊರತೆ ಇತ್ತು. ಬಿಜೆಪಿಯ 8 ಸದಸ್ಯರ ಹಾಗೂ ಸ್ಥಳಿಯ ಶಾಸಕ ರಾಜು ಕಾಗೆಯವರ ಬೆಂಬಲದೊಂದಿಗೆ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡು, ಜೆಡಿಎಸ್ ಗೆಲುವು ಸಾಧಿಸಿದೆ.
ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮುಗಿಲು ಮುಟ್ಟಿತ್ತು. ಪುರಸಭೆಯ ಮುಂದೆ ನೆರೆದಿದ್ದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮ-ತಮ್ಮ ಪಕ್ಷಗಳ ಮುಖಂಡರ ಜೈಘೋóಗಳನ್ನು ಹಾಕಿ ಸಂಭ್ರಮಿಸಿದರು.
ಪುರಸಭೆಗೆ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರನ್ನು ಶಾಸಕ ರಾಜು ಕಾಗೆ, ಜೆಡಿಎಸ್ ಮುಖಂಡ ಶ್ರೀನಿವಾಸ ಶ್ರೀಮಂತ ಪಾಟೀಲ, ,ಶಿವಗೌಡ ಕಾಗೆ, ಶಂಕರ ವಾಘಮೋಡೆ, ತಾನಾಜಿ ಕಾಟಕರ, ಅಸ್ಲಂ ನಾಲಬಂದ, ಯೋಗೇಶ ಕುಂಬಾರ, ಸಂಜಯ ಪಾಟೀಲ, ದಾದಾ ಪಾಟೀಲ, ವಿನಾಯಕ ಪಾಟೀಲ, ನಾನಾ ದೇಸಾಯಿ, ಸುಜಯ ಫರಾಕಟ್ಟೆ, ವಿನಾಯಕ ಶಿಂಧೆ, ಸೇರಿದಂತೆ ಅನೇಕರು ಅಭಿನಂದಿಸಿದರು.

loading...

LEAVE A REPLY

Please enter your comment!
Please enter your name here