ಕಿಡಿಗೇಡಿಗಳ ಅಟ್ಟಹಾಸ: ಕೊಕ್ತಿಯ ನಾಗಬನದಲ್ಲಿ ದನದ ಮಾಂಸ ಚೀಲ ಇಟ್ಟು ಪರಾರಿ

0
29
loading...

ಭಟ್ಕಳ : ಭಟ್ಕಳದಲ್ಲಿ ಮತ್ತೆ ಕೋಮುಸೌಹಾರ್ಧತೆಗೆ ಧಕ್ಕೆ ತರುವ ಕೆಲಸ ಕೆಲವು ಕಿಡಿಗೇಡಿಗಳು ಪ್ರಯತ್ನಿಸಿದ್ದು ಶನಿವಾರ ರಾತ್ರಿ ಕೋಕ್ತಿಯ ನಾಗಬನದಲ್ಲಿ ದನ ಮಾಂಸದ ಚಿಲವನ್ನಿರಿಸಿ ಪರಾರಿಯಾಗಿದ್ದಾರೆ.
ತಾಲೂಕಿನ ಕೋಗ್ತಿಯಲ್ಲಿರುವ ನಾಗಬನವೊಂದಕ್ಕೆ ಶನಿವಾರ ರಾತ್ರಿ ಕಿಡಿಗೇಡಿಗಳು ದನದ ಮಾಂಸ ತುಂಬಿದ ಚೀಲವನ್ನು ಇಟ್ಟು ಹೋಗಿದ್ದು, ಮತ್ತೊಮ್ಮೆ ಭಟ್ಕಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆ ಐದಾರು ಪ್ರಕರಣಗಳಲ್ಲಿನ ಸಾಮ್ಯತೆಯನ್ನು ನೋಡಿದರೆ ಶಾಂತಿ ಕದಡುವ ದುರುದ್ಧೇಶದಿಂದಲೇ ಈ ಎಲ್ಲಾ ಕೃತ್ಯ ಮಾಡುತ್ತಿರುವುದು ಕಂಡು ಬರುತ್ತದೆ. ಭಟ್ಕಳದ ರಾಜಾಂಗಣ ನಾಗಬನ, ಹನುಮಾನನಗರದ ನಾಗಬನ, ಈಗ ಕೋಗ್ತಿ ನಾಗಬನ ಹೀಗೇ ಕಿಡಿಗೇಡಿಗಳ ಕುಕೃತ್ಯದಿಂದ ಭಟ್ಕಳದ ಜನತೆಯ ನೆಮ್ಮದಿ ಹಾಳಾಗುತ್ತಿದೆ. ಪದೇ ಪದೇ ಮರುಕಳಿಸುತ್ತಿರುವ ಇಂತಹ ಘಟನೆಗಳಿಂದಾಗಿ ಹಿಂದೂಗಳಲ್ಲಿ ಆಕ್ರೋಶ ಮಡುಗಟ್ಟಿದೆ.
ರವಿವಾರ ಬೆಳಿಗ್ಗೆ ಕೋಗ್ತಿಯ ನಾಗಬನದಲ್ಲಿ ದನದ ಮಾಂಸ ಪತ್ತೆಯಾದ ಕೂಡಲೇ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಪೊಲೀಸ್ ಇಲಾಖೆ ಹಿಂದುಗಳನ್ನು ಹಾಗೂ ಹಿಂದೂಗಳ ಶೃದ್ದಾ ಕೇಂದ್ರಗಳನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂದೂ ಕೂಡಾ ಆರೋಪಿಸಿದರು. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕೆಲಕಾಲ ಸ್ಥಳದಲ್ಲಿ ಭಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸ್ ಇಲಾಖೆಯ ವೈಫಲ್ಯವೇ…?
ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆಗಲೇ ಈ ಹಿಂದಿನ ಎಲ್ಲಾ ಪ್ರಕರಣಗಳನ್ನು ಬೇಧಿಸಿದ್ದರೆ ಇಂದು ಮತ್ತೆ ಮತ್ತೆ ಇಂತಹ ಕೆಲಸಗಳು ಆಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಕಿಡಿಗೇಡಿಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಕೊಲೆ, ಸುಲಿಗೆ, ದರೋಡೆಗಳಂತಹ ದೊಡ್ಡ ದೊಡ್ಡ ಪ್ರಕರಣಗಳನ್ನು ಸಲೀಸಾಗಿ ಬೇಧಿಸುವ ಭಟ್ಕಳ ಪೊಲೀಸರು ಮನಸ್ಸು ಮಾಡಿದ್ದರೆ ಈ ಪ್ರಕರಣವನ್ನು ಎಂದೋ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಬಹುದಿತ್ತು. ಆದರೆ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ಆರೋಪಿಗಳಿಗೆ ಇನ್ನಷ್ಟು ಇಂತಹ ಕೆಲಸ ಮಾಡು ಕುಮ್ಮಕ್ಕು ನೀಡಿದಂತಾಗಿದೆ ಎನ್ನುವುದು ಹಿಂದೂ ಸಂಘಟನೆಗಳ ಮುಖಂಡರ ಆರೋಪವಾಗಿದೆ.
ಭಟ್ಕಳದ ಕೋಗ್ತಿಯ ನಾಗಬನದಲ್ಲಿ ದನದ ಮಾಂಸ ಹಾಕಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಿಂದೂ ಸಂಘಟನೆಗಳ ಮುಖಂಡರು ಘಟನಾ ಸ್ಥಳದಿಂದ ಭಟ್ಕಳ ನಗರ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಠಾಣೆಯ ಎದುರು ಜಮಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ಕೃಷ್ಣಾ ನಾಯ್ಕ ಭಟ್ಕಳದಲ್ಲಿ ಪದೇ ಪದೇ ಹಿಂದೂಗಳ ತಾಳ್ಮೆಯನ್ನು ಕೆಣಕುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ನಾವು ಸಿಡಿದೆದ್ದರೆ ಭಟ್ಕಳ ಭಟ್ಕಳವಾಗಿ ಉಳಿಯುವುದಿಲ್ಲ. ನಮ್ಮ ತಾಳ್ಮೆಯನ್ನು ಹೇಡಿತನ ಎಂದು ತಿಳಿಯಬೇಡಿ. ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳ ಪತ್ತೆ ಹಚ್ಚಿ ಅವರನ್ನು ಭಟ್ಕಳದಿಂದ ಗಡೀಪಾರು ಮಾಡಬೇಕು. ಮುಂದೆ ಯಾವುದಾದರೂ ಇಂತಹ ಘಟನೆ ನಡೆದಿದ್ದೇ ಆದಲ್ಲಿ ನಾವು ಸುಮ್ಮನೇ ಕೂರುವುದಿಲ್ಲ. ಪೊಲೀಸ್ ಇಲಾಖೆಯಲ್ಲೆ ಕೆಲವರುಯ ಅಕ್ರಮ ಗೋಸಾಗಾಟಕ್ಕೆ ಸಾಥ್ ನೀಡಿ ಯಥೇಚ್ಛ ಹಣ ಗಳಿಸುತ್ತಿದ್ದಾರೆ. ಅವರ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಹೇಳಲೂ ಕೂಡಾ ಹಿಂಜರಿಯುವುದಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಮನವಿ ಹಾಗೂ ದೂರನ್ನು ಸ್ವೀಕರಿಸಿದ ಡಿವೈಎಸ್‍ಪಿ ಅನೂಪ್ ಶೆಟ್ಟಿ ಕಿಡಿಗೇಡಿಗಳು ಯಾರೇ ಇರಲಿ ಕೂಡಲೇ ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು. ಕಾರವಾರ ಡಿವೈಎಸ್‍ಪಿ ಪ್ರಮೋದ ರಾವ ಕೂಡಾ ಉಪಸ್ಥಿತರಿದ್ದರು.
ಕೋಗ್ತಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here