ಕ್ರೀಡೆ ಇಲ್ಲದವನ ಜೀವನ ಕೀಟತಿಂದ ಹಣ್ಣಿನಂತೆ

0
17
loading...

ವಿಶ್ವದಲ್ಲಿಯೇ ದೇಶದ ಸಂಸ್ಕøತಿ ಪ್ರಸಿದ್ಧ: ವಂಟಗೂಡಿ
ಹಾರೂಗೇರಿ: ಭಾರತ ದೇಶ ಸಂಗೀತ, ಸಾಹಿತ್ಯದ ತವರೂರು, ವಿಶ್ವದಲ್ಲಯೇ ದೇಶದ ಸಂಸ್ಕøತಿ ಪಸಿದ್ದಿ ಪಡೆದಿದೆ, ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಸಂಸ್ಕøತಿಯನ್ನು ಮೈಗೂಡಿಸಕೊಂಡು ಭವ್ಯ ಭಾರತ ಬೆಳಗುವ ಒಳ್ಳೆಯ ಸತ್ಫ್ರಜೆಗಳಾಗಬೇಕು ಎಂದು ಹಾರೂಗೇರಿಯ ಸಿದ್ಧೇಶ್ವರ ಕಲಾಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಸ್ ವಂಟಗೂಡಿ ಹೇಳಿದರು.
ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ರಿವರ್ ಸಂಸ್ಥೆಯ, ಕುಮಾರ ಕಾನಡೆ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಸನ್ 2016-17ನೇ ಸಾಲಿನ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಹಾಗೂ ಬೌದ್ದಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. “ಕ್ರೀಡೆ ಇಲ್ಲದವನ ಜೀವನ ಕೀಟತಿಂದ ಹಣ್ಣು ಇದ್ದಂತೆ”. ಎಲ್ಲ ಸಾಹಿತ್ಯಗಳಲ್ಲಿ ಅತೀ ಶ್ರೇಷ್ಠ ಸುಂದರ,ಸರಳ, ಸಾಹಿತ್ಯವೆಂದರೆ ಜನಪದ ಸಾಹಿತ್ಯವೆಂದು ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಟಿ.ಎಸ್ ವಂಟಗೂಡಿ ಕರೆ ನೀಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಸಂಸ್ಥಾಪಕ ಕುಮಾರ ಕಾನಡೆ. ಪ್ರಾಚಾರ್ಯ ಎಸ್.ಎಮ್ ಕಾಂಬಳೆ. ಕನ್ನಡ ಉಪನ್ಯಾಸಕಿ ಪ್ರೋ.ಎಸ್.ಎಸ್ ಮಗದುಮ್, ಪ್ರೋ.ಸಿ.ಆರ್ ಪಾಟೀಲ, ಪ್ರೋ.ಎಚ್.ಎಸ್ ಕುರಣಿ, ಪ್ರೋ.ಆರ್.ಆರ್ ಮಗದುಮ್, ಪ್ರೋ.ಎನ್.ಟಿ ಬಿರಡಿ, ಪ್ರೋ.ಬಿ.ಎ ಬಂಡೆ, ವಿದ್ಯಾರ್ಥಿ ಪ್ರತಿನಿಧಿ ನಾಯಕ ಕಾಂಬಳೆ, ಶೃತಿ ಸಲಗರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಚಾರ್ಯ ಎಸ್.ಎಮ್ ಕಾಂಬಳೆ ಸ್ವಾಗತಿಸಿ ಪರಿಚಯಿಸಿದರು, ಪ್ರೋ.ಆರ್.ಆರ್ ಮಗದುಮ್ ನಿರೂಪಿಸಿದರು, ಪ್ರೋ.ಎನ್.ಟಿ ಬಿರಡಿ ವಂದಿಸಿದರು.

loading...

LEAVE A REPLY

Please enter your comment!
Please enter your name here