ಗರ್ಲ ಗ್ರಾ ಪಂಗೆ : ಮಾಜಿ ಸಚಿವ ಭೇಟಿ

0
21
loading...

ಖಾನಾಪುರ 16: ಸಮೀಪದ ಗರ್ಲಗುಂಜಿ ಗ್ರಾಮ ಪಂಚಾಯ್ತಿಗೆ ಶನಿವಾರ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಆಕಸ್ಮಿಕ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮದ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ್ದ ಅವರು, ಪಂಚಾಯ್ತಿಗೆ ತೆರಳಿ ಪಂಚಾಯ್ತಿಯ ಕಾರ್ಯವೈಖರಿ, ಕುಡಿಯುವ ನೀರು ಮತ್ತು ಸಂಪರ್ಕ ರಸ್ತೆ ಮತ್ತಿತರ ವಿವರಗಳನ್ನು ಪಿಡಿಒ ಜೋತಿಬಾ ಕಾಮಕರ ಹಾಗೂ ಗ್ರಾಪಂ ಸಿಬ್ಬಂದಿಯಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಅಂಗಡಿ, ಯುವ ಕಾಂಗ್ರೆಸ್ ಮುಖಂಡ ಇರ್ಫಾನ ತಾಳಿಕೋಟಿ, ಸಂತೋಷ ಹಂಜಿ ಸೇರಿದಂತೆ ಗರ್ಲಗುಂಜಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥರಿದ್ದರು.

loading...

LEAVE A REPLY

Please enter your comment!
Please enter your name here