ಗುರುವಿನ ನಾಮಸ್ಮರಣೆಯಿಂದ ಮನ ಸ್ವಚ್ಛ

0
14
loading...

ಬೆಳಗಾವಿ 18: ಗುರುವಿನ ನಾಮಸ್ಮರಣೆಯಿಂದ ಮನಸಿನಲ್ಲಿರುವ ಎಲ್ಲ ಕಲ್ಮಷಗಳು ದೂರವಾಗಿ ಮನಸ್ಸು ಸ್ವಚ್ಚಚಾಗುತ್ತದೆ ಎಂದು ಶ್ರೀ ಶಿವಶಕ್ತಿ ವಿರಕ್ತಮಠ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಬೈಲಹೊಂಗಲ ತಾಲೂಕಿನ ತಿಗಡಿಯ ಗ್ರಾಮದ ಶ್ರೀ ಶಿವಶಕ್ತಿ ವಿರಕ್ತಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಲಾಗಿದ್ದ ವಾಸುದೇವಾನಂದ ಸರಸ್ವತಿ (ಟಿಂಬೆ) ಮಹಾರಾಜರ ಗದುಗೆಗೆ ರುದ್ರಾಭಿಷೇಕ ಕಾರ್ಯಕ್ರಮ ನೆರವೆರಿಸಿ ಮಾತನಾಡಿದರು.
ಇಂದಿನ ಸಮಾಜದ ಯುವಕರಲ್ಲಿ ಅತೀಯಾದ ಆಸೆ. ಹಣದ ವ್ಯಾಮೋಹದಿಂದ ಸಮಾಜದ ಸ್ವಾಸ್ಥೆ ಹದಗೇಡುತ್ತಿದೆ ಜೊತಗೆ ಸ್ವಾರ್ಥ ಮನೋಭಾವದಿಂದಾಗಿ ನೆರೆ ಹೊರೆಯ ಸಂಬಂಧಗಳನ್ನು ಕಡಿದುಕೊಳ್ಳುವಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ನಂತರ ನ್ಯಾಯವಾದಿ ಶ್ರೀಕರ ಕುಲಕರ್ಣಿ ಮಾತನಾಡಿ, ಪಾಶ್ಚೀಮಾತ್ಯ ಉಡುಪು, ಸಂಸ್ಕøತಿಯ ಅನುಕರಣೆಯಿಂದಾಗಿ ಹಲವು ಶತಮಾನಗಳ ಇತಿಹಾಸ ಹೊಂದಿದ ಭಾರತೀತ ಸಂಸ್ಕøತಿ ಅವನತ ಅಂಚಿನತ್ತ ಸಾಗುತ್ತಿದೆ. ಆದ್ದರಿಂದ ಪಾಶ್ಚೀಮಾತ್ಯ ಸಂಸ್ಕøತಿಯನ್ನು ಕಡೆಗಣಿಸಿ ದೇಶಿಯ ಸಂಸ್ಕøತಿ ಅನುಕರಣೆ ಮಾಡಿ ಮುಂದಿನ ಪೀಳಿಗೆ ದೇಶದ ಮೇಲಿನ ಗೌರವ ಹೆಚ್ಚಾಗುವಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಬಾಬು ಪಾಟೀಲ, ಈರಯ್ಯಾ ಅಡ್ಲಿಮಠ, ಗುರುಶಾಂತ ಟೆಂಗಿನಮಠ, ಜಿತೇಂದ್ರ ಮೇಲಿನಮನಿ, ಪ್ರವೀಣ ಪೂಜಾರ ಸೇರಿದಂತೆ ಭಕ್ತಾಧಿಗಳು ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾದರು.

loading...

LEAVE A REPLY

Please enter your comment!
Please enter your name here