ಜು.13 ರಂದು ಆಷಾಢ ದಿಂಡಿ ಪಾದಯಾತ್ರೆ

0
16
loading...

ಗೋಕಾಕ: ಜುಲೈ 13 ರಂದು sಸುಕ್ಷೇತ್ರ ಪಂಡರಪೂರದಲ್ಲಿ ಜರುಗುವ ಆಷಾಢವಾರಿ ನಿಮಿತ್ಯವಾಗಿ ಕಳೆದ 159ನೇ ವರ್ಷಗಳ ಪರಂಪರೆಯನ್ನು ಹೊಂದಿರುವ ಶ್ರೀ ಹ.ಭ.ಪ. ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ ಆಷಾಢ ದಿಂಡಿ ಪಾದಯಾತ್ರೆಯು ಶನಿವಾರದಂದು ನಗರದ ಹೊಸಪೇಟ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಿಂದ ಚಾಲನೆ ನೀಡಲಾಯಿತು.
ಆಷಾಢ ದಿಂಡಿ ಪಾದಯಾತ್ರೆಯು ಶ್ರೀ ಕ್ಷೇತ್ರ ಪಂಡರಪೂರಕ್ಕೆ ಹೋಗುವ ಕರ್ನಾಟಕದ ಅತಿ ದೊಡ್ಡ ದಿಂಡಿಯಾತ್ರೆ ಅಂತಾ ಹೆಗ್ಗಳಿಕೆಯನ್ನು ಪಡೆದಿದೆ. ಈ ಪಾದಯಾತ್ರೆಯಲ್ಲಿ ಬೆಳಗಾವಿ, ಖಾನಾಪೂರ, ಸವದತ್ತಿ, ಬೈಲಹೊಂಗಲ, ಹುಕ್ಕೇರಿ, ರಾಯಬಾಗ ತಾಲೂಕಿನಿಂದ ವಿವಿಧ ಗ್ರಾಮಗಳ ಹರಿ ಭಕ್ತರನ್ನು ಭವ್ಯವಾಗಿ ಸ್ವಾಗತಿಸಿ, ನಗರದ ಹೊಸಪೇಟ(ಗೌಳಿ) ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರÀದಲ್ಲಿ ಆರತಿ ಪೂಜೆಯೊಂದಿಗೆ ದಿಂಡಿಯಾತ್ರೆಗೆ ಚಾಲನೆ ನೀಡಿ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಸಾವಿರಾರು ಭಕ್ತಾಧಿಗಳು ಸಂಗನಕೇರಿ ಗ್ರಾಮದ ಮುಖಾಂತರ ಕಲ್ಲೋಳಿ ಪಟ್ಟಣ ತಲುಪಿ ಅಲ್ಲಿಯೇ ವಾಸ್ತವ್ಯವನ್ನು ಮಾಡಿ, ಜುಲೈ 3 ರಂದು ನಾಗನೂರ ಮುಗಳಖೋಡ, ಜುಲೈ 4 ರಂದು ಯಬ್ರಟ್ಟಿ ಸಂಕ್ರಟ್ಟಿ, ದರೂರು. ಜುಲೈ 5 ರಂದು ಹಳ್ಯಾಳ, ಅಥಣಿ, ಜು.6 ರಂದು ಭರಮನಕೂಡಿ ತೋಟ, ಬಾಳಿಗೇರಿ, ಜು.7ರಂದು ಗುಗವಾಡ, ಮಲಾಬಾದ, ವಜ್ರವಾಡ, ಜು.8ರಂದು ಬಿಳ್ಳೂರು ದೇವನಾಳ ಜು.9 ರಂದು ಪಟ್ಟಣಶೆಟ್ಟಿ, ಪರಾಳ, ತಾಡಮಾಳ, ಜತ್ತ, ವಾಯುಪಳ, ಜು 10 ರಂದು ಪಾರೇ ಘೇರಡಿ, ಜು. 11 ರಂದು ಶಿರಸಿ, ಲಕ್ಷ್ಮೀದಹಿವಾಡಿ, ಜು 12 ರಂದು (ಮಹಾನದಿ ಸ್ನಾನ) ಕಾಶಿಗಾಂವ, ಜು 13 ರಂದು ಶ್ರೀ ಕ್ಷೇತ್ರ ಪಂಡರಪೂರ ತಲುಪಲಿದೆ.

loading...

LEAVE A REPLY

Please enter your comment!
Please enter your name here