ಜು15.ರಿಂದ ಮೂರು ದಿನಗಳ `ಯಕ್ಷೋತ್ಸವ’ ಕಾರ್ಯಕ್ರಮ

0
27
loading...

ಶಿರಸಿ : ಯಕ್ಷಗಾನ ಕಲೆಯ ಉಳಿವಿಗೆ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಸ್ವರ್ಣವಲ್ಲಿಯ ಯಕ್ಷ ಶಾಲ್ಮಲಾ ಸಂಘಟನೆಯು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ಅಂಗವಾಗಿ ಜುಲೈ 15ರಿಂದ ಮೂರು ದಿನಗಳ `ಯಕ್ಷೋತ್ಸವ’ ಕಾರ್ಯಕ್ರಮವನ್ನು ಸ್ವರ್ಣವಲ್ಲೀಯಲ್ಲಿ ಸಂಘಟಿಸಿದೆ.
ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ತಾಳಮದ್ದಳೆ ಸ್ಪರ್ಧೆಯಾದ ಯಕ್ಷೋತ್ಸವ ಕಾರ್ಯಕ್ರಮದ ಕುರಿತು ಗುರುವಾರ ಸ್ವರ್ಣವಲ್ಲೀ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಮಕ್ಕಳಲ್ಲಿ ಯಕ್ಷಗಾನ ಕಲೆಯ ಅಭಿರುಚಿ ಬೆಳೆಸುವ ಸಲುವಾಗಿ ಮಕ್ಕಳಿಗಾಗಿಯೇ ವಿಶೇಷವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಧ ಗಂಟೆಯ ಅವಧಿಯಲ್ಲಿ ಕಾರ್ಯಕ್ರಮ ನೀಡಬೇಕಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ಯಕ್ಷಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ, ಯಕ್ಷಗಾನ ಬಯಲಾಟ ಅಕಾಡೆಮಿ, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ. ಜುಲೈ 15ರಂದು ಬೆಳಿಗ್ಗೆ 10.30 ಗಂಟೆಗೆ ಯಕ್ಷೋತ್ಸವಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡುವರು. ನಂತರ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮಕ್ಕಳಿಂದ ತಾಳಮದ್ದಳೆ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಯಕ್ಷಕಲಾವಿದರಿಂದ ವಿಶ್ವಾಮಿತ್ರ ಮೇನಕೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಭಾಗವತರಾಗಿ ಅನಂತ ದಂತಳಿಕೆ, ಮದ್ದಳೆಯಲ್ಲಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ಬಿ.ಎಸ್.ಗೌಡ, ತಮ್ಮಣ್ಣ ಗಾಂವಕರ, ಸದಾಶಿವ ಭಟ್ಟ, ವಿಘ್ನೇಶ್ವರ ಹಾವಗೋಡಿ, ವಿನಾಯಕ ಭಟ್ಟ, ಅನಂತ ಕುಣಬಿ, ಶ್ರೀಧರ ಚಪ್ಪರಮನೆ ಭಾಗವಹಿಸುವರು ಎಂದು ತಿಳಿಸಿದರು.
ಜುಲೈ 16ರಂದು ಬೆಳಿಗ್ಗೆ 10 ಗಂಟೆಯಿಂದ ತಾಳಮದ್ದಳೆ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ಬಾಳೆಕೊಪ್ಪದ ಕದಂಬೇಶ್ವರ ಚಿಣ್ಣರ ಯಕ್ಷಕಲಾ ಬಳಗದ ಕಲಾವಿದರಿಂದ ಕಂಸವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸುವರು. ಶಾಸಕ ವೈ.ಎಸ್.ವಿ.ದತ್ತಾ, ಯಕ್ಷಗಾನ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ಟ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಪಾಲ್ಗೊಳ್ಳುವರು. ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಯಕ್ಷ ಶಾಲ್ಮಲಾ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಾದ ತಿಮ್ಮಣ್ಣ ಯಾಜಿ ಮಣ್ಣಿಗೆ ಹಾಗೂ ಎಂ.ಕೆ.ರಮೇಶ ಆಚಾರ್ಯ ಅವರಿಗೆ ಸನ್ಮಾನ ನಡೆಯಲಿದೆ. ಸಂಜೆ 6 ಗಂಟೆಯಿಂದ ಸುಭದ್ರಾ ರಾಯಭಾರ ತಾಳಮದ್ದಳೆ ಆಯೋಜಿಸಲಾಗಿದ್ದು, ಭಾಗವತರಾಗಿ ಗೋಪಾಲಕೃಷ್ಣ ಭಾಗವತ, ಮದ್ದಳೆಯಲ್ಲಿ ಶರತ್ ಜಾನಕೈ, ಅರ್ಥಧಾರಿಗಳಾಗಿ ಎಂ.ಎ.ಹೆಗಡೆ, ವಿ.ಉಮಾಕಾಂತ ಭಟ್ಟ, ಎಂ.ಕೆ.ರಮೇಶ ಆಚಾರ್ಯ, ಸುಬ್ರಾಯ ಹೆಗಡೆ, ರವಿಶಂಕರ ಹೆಗಡೆ ಭಾಗವಹಿಸುವರು ಎಂದು ಹೇಳಿದರು.
ಜುಲೈ 17ರಂದು ಬೆಳಿಗ್ಗೆ 10ರಿಂದ ತಾಳಮದ್ದಳೆ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ವಜ್ರಳ್ಳಿ ಸರ್ವೋದಯ ಯಕ್ಷಗಾನ ಕಲಾ ಬಳಗದ ಕಲಾವಿದರಿಂದ ಮಾಗದವಧೆ ಯಕ್ಷಗಾನ ಪ್ರದರ್ಶನಗೊಳ್ಳುವುದು. ಸಂಜೆ 5ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಯಕ್ಷಗಾನ ಕಲಾವಿದ ಬಳಕೂರು ಕೃಷ್ಣ ಯಾಜಿ ಅವರಿಗೆ ರಜತೋತ್ಸವ ವರ್ಷದ ಸನ್ಮಾನ ನಡೆಯುವುದು. ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ, ಕೆನರಾ ಬ್ಯಾಂಕ್ ನಿವೃತ್ತ ಮುಖ್ಯ ಮಹಾಪ್ರಬಂಧಕ ಎಸ್.ಎಸ್.ಭಟ್ಟ, ಕರ್ನಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಮಂಜಗುಣಿ ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ ಭಟ್ಟ ಉಪಸ್ಥಿತರಿರುವರು. ಸಂಜೆ 6.30ರಿಂದ ಭೀಷ್ಮ ಪರ್ವ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಭಾಗವತರಾಗಿ ಸರ್ವೇಶ್ವರ ಹೆಗಡೆ, ಮದ್ದಳೆಯಲ್ಲಿ ನರಸಿಂಹ ಭಟ್ಟ, ಚಂಡೆಯಲ್ಲಿ ಗಣೇಶ ಗಾಂವಕರ, ಪಾತ್ರಧಾರಿಗಳಾಗಿ ಕೃಷ್ಣ ಯಾಜಿ, ಸುಜಯೀಂದ್ರ ಹಂದೆ, ಸುಬ್ರಹ್ಮಣ್ಯ ಯಲಗುಪ್ಪ, ಗಣಪತಿ ಭಟ್ಟ, ಸಂತೋಷ ಹೆಗಡೆ, ಅಭಿಷೇಕ ಅಡಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇಳೆ ಯಕ್ಷ ಶಾಲ್ಮಲಾ ಗೌರವಾಧ್ಯಕ್ಷ ಹೊಸ್ತೋಟ ಮಂಜುನಾಥ ಭಾಗವತ ಇದ್ದರು.
ಯಕ್ಷಗಾನಕ್ಕೆ ಮುಡಿಪು…..
ಯಕ್ಷ ಶಾಲ್ಮಲಾ ಸಂಘಟನೆಯು 19 ವರ್ಷಗಳಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಾದ ಹಾಗೂ ಯಕ್ಷøಷಿ ಹೊಸ್ತೋಟ ಮಂಜುನಾಥ ಭಾಗವತ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಯಕ್ಷಗಾನ ಪ್ರಸಂಗಗಳ ಮುದ್ರಣ, ತರಬೇತಿ ಶಿಬಿರಗಳು, ಸತತವಾಗಿ 12 ವರ್ಷ ರಾಜ್ಯಮಟ್ಟದ ಕಾರ್ಯಾಗಾರ, ಪರಿಸರ ಯಕ್ಷಗಾನ ಸ್ಪರ್ಧೆ, ರಾಷ್ಟ್ರೀಯ ಯಕ್ಷಗಾನ ಸಮ್ಮೇಳನ ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡುತ್ತಿದೆ.
-ನಾಗರಾಜ ಜೋಶಿ- ಯಕ್ಷ ಶಾಲ್ಮಲಾ ಕಾರ್ಯದರ್ಶಿ

loading...

LEAVE A REPLY

Please enter your comment!
Please enter your name here