ಡೊನೆಶನ್ ಹಾವಳಿ ನಿಯಂತ್ರಿಸಿ- ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಿ

0
39
loading...

ದಾಂಡೇಲಿ : ಖಾಸಗಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಡೊನೆಶನ್ ಹಾವಳಿಯನ್ನು ತಡೆಗಟ್ಟುವಂತೆ ಹಾಗೂ ಸರಕಾರ ಈ ಉದ್ದೇಶಕ್ಕಾಗಿಯೇ ನಿರ್ದೇಶಿಸಿರುವ ರೆಗ್ಯುಲೇಟಿಂಗ್ ಪ್ರಾಧಿಕಾರವನ್ನು ತಕ್ಷಣ ರಚಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಪ್.ಐ), ಭಾತರ ವಿದ್ಯಾರ್ಥಿ ಪೆಡರೇಷನ್ (ಎಸ್.ಎಪ್.ಐ) ಹಾಗೂ ಜನವಾದಿ ಮಹಿಳಾ ಸಂಘಟನೆ (ಜೆ.ಎಮ್.ಎಸ್.) ಇವುಗಳ ಜಂಟಿಯಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಒತ್ತಾಯಿಸಿವೆ.
ದಿನಾಂಕ : 26-05-2003 ರಂದು ಸುತ್ತೋಲೆ ಸಂಖ್ಯೆ ಸಿ7-(7) ಪ್ರಾ. ಶಿ. ಆ. ದಾಖಲಾತಿ 01/2003-04 ರಾಜ್ಯದಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶಾಲೆಗಳಲ್ಲಿ ವಿಧಿಸುವ ಶುಲ್ಕವನ್ನು ನಿಯಂತ್ರಿಸುವ ಬಗ್ಗೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಡೋನೇಷನ್ ಹಾವಳಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೋರಿ ಶಿಕ್ಷಣ ರೆಗ್ಯುಲೇಟರ್ ಪ್ರಾಧಿಕಾರ ರಚನೆ ಮಾಡುವಂತೆ ಆದೇಶಿಸಿದೆ. ಜಿಲ್ಲೆಯ ಮತ್ತು ದಾಂಡೇಲಿ ನಗರದಲ್ಲಿ ಇನ್ನುವರೆಗೂ ಕೂಡಾ ಪ್ರಾಧಿಕಾರ ರಚನೆ ಆಗಿರುವುದಿಲ್ಲ. ಈ ಪ್ರಾಧಿಕಾರದಲ್ಲಿ ಜಿಲ್ಲಾ ಅಧಿಕಾರಿಗಳನ್ನು ಇದರ ಅಧ್ಯಕ್ಷರಾಗಿ ಮತು ಇನ್ನಿತರ ಅಧಿಕಾರಿ ಒಳಗೊಂಡು ಸಮಿತಿ ರಚಿಸಲು ಸ್ಪಷ್ಟ ನಿರ್ದೇಶನ ನೀಡಿದೆ. ಅದು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಸಮಗ್ರ ಮಾಹಿತಿ ಜಿಲ್ಲೆಯ ಜನತೆಗೆ ಹಾಗೂ ದಾಂಡೇಲಿ ಜನತೆಗೆ ಇರುವುದಿಲ್ಲ. ಹಾಗಾಗಿ ಇದರಲ್ಲಿರುವ ಮಾನದಂಡನೆಗಳನ್ನು ಯಾವುದೇ ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿಲ್ಲ ಜೊತೆಗೆ ಉಲ್ಲಂಘಿಸುತ್ತಿವೆ. ಹಾಗಾಗಿ ಕೂಡಲೇ ಈ ರೆಗ್ಯುಲೇಟಿಂಗ್ ಪ್ರಾಧಿಕಾರ ಜಿಲ್ಲೆಯಲ್ಲಿ ಮತ್ತು ದಾಂಡೇಲಿಯಲ್ಲಿ ರಚನೆಯಾಗಬೇಕು.
ಡೋನೇಶನ್ ನಿಯಂತ್ರಿಸಲು ಇತ್ತೀಚೆಗೆ ಉಚ್ಛ ನ್ಯಾಯಾಲಯ ಪಾಲಕರ ಪರವಾಗಿ ತೀರ್ಪು ನೀಡಿ ಆದೇಶಿಸಿದೆ. ಈ ಆದೇಶದಲ್ಲಿರುವಂತಹ ಅಂಶಗಳು & ಸರಕಾರ 2003ರಲ್ಲಿ ಹೊರಡಿಸುವ ಸುತ್ತೋಲೆ ಅನುಗುಣವಾಗಿ ಜಿಲ್ಲೆಯ ಹಾಗೂ ನಗರದ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿ ಮಾಡಲು ಕೂಡಲೇ ಸಮಿತಿ ರಚನೆಯಾಗಬೇಕು. ಈ ಕುರಿತಂತೆ ಈಗಾಗಲೇ ಸಿ.ಪಿ.ಐ.ಎಮ್. ಪಕ್ಷ ದಾಂಡೇಲಿಯಲ್ಲಿ ರಾಜ್ಯದಲ್ಲಿ ಎಸ್.ಎಫ್.ಐ. ಮತ್ತು ಡಿ.ವೈ.ಎಫ್.ಐ. ಸಂಘಟನೆಗಳು ಇದರ ಜಾರಿಗಾಗಿ ಹೋರಾಟ ನಡೆಸಲೂ ಕರೆ ಕೂಡಾ ನೀಡಿದೆ ಎಂದು ಡಿ.ವೈ.ಎಪ್.ಐ.ನ ಜಿಲ್ಲಾ ಕಾರ್ಯದರ್ಶಿ, ದಾಂಡೇಲಿ ನಗರಸಭಾ ಸದಸ್ಯ ಡಿ. ಸ್ಯಾಮಸನ್, ದಾಂಢೇಲಿ ಅಧ್ಯಕ್ಷ ವೈ. ಪ್ರಭುದಾಸ, ಇಮ್ರಾನ್ ಖಾನ್, ರಾಘವೇಂದ್ರ ಭಜಂತ್ರಿ, ಎಸ್..ಎಪ್.ಐ.ನ ಸುನೀಲ ಜಾನಾ, ಕಾಂತರಾಜ ಜಾನಾ, ಜನವಾದಿ ಸಂಘಟನೆಯ ರತ್ನದೀಪಾ ಎನ್.ಎಮ್, ರೇಣುಕಾ ಉಪ್ಪಾರ್ ಮುಂತಾದವರು ಮನವಿಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here