ತಮ್ಮ ಆತ್ಮ ರಕ್ಷಣೆಗೆ ಕರಾಟೆ ಅವಶ್ಯಕ

0
10
loading...

ರಾಯಬಾಗ 13: ಕರಾಟೆ ಕ್ರೀಡೆ ಪ್ರತಿಯೋಬ್ಬ ವಿದ್ಯಾರ್ಥಿಗಳು ಕಲಿಯಬೇಕು. ಇದು ತಮ್ಮ ಆತ್ಮ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕರಾಟೆ ಬ್ಲಾಕ್ ಬೆಲ್ಟ್ ಸೆಕೆಂಡ್ ಡೌನ ತರಬೇತುದಾರ ಜಯದೀಪ ದೇಶಾಯಿ ಹೇಳಿದರು.
ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಇಲಾಖಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಕ್ರೀಡಾಕೂಟದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ. ಇದು ಸಮ್ರದಾಯಕ ಹಾಗೂ ಜವಾಬ್ದಾರಿಯುತ ಆಟವಾಗಿದ್ದರಿಂದ ಜಾಗರೂಕತೆಯಿಂದ ಆಡಬೇಕು ಎಂದರು.
ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಡಿ. ಎಸ್. ಡಿಗ್ರಜ ಮಾರ್ಗದರ್ಶನದಲ್ಲಿ ಕ್ರೀಡೆಗಳು ನಡದವು. ನಿರ್ಣಾಯಕರಾಗಿ ಎಮ್. ಡಿ. ಹುಲ್ಲೆನ್ನವರ, ರಾಘವೇಂದ್ರ ಆರ್. ಜೆ, ಜಿ. ಎಮ್. ಬೆಳವಿಕರ ಕಾರ್ಯನಿರ್ವಹಿಸಿದರು. ಸ್ವೇತಾ ಪಿ. ರಾಜೀವ, ಆರ್. ಟಿ. ಆರಬಳ್ಳಿ, ಯು. ಡಿ. ಉಪಾಧ್ಯ, ತಾನಾಜಿ ಸಾನೆ ಮತ್ತು ಗೋಳಸಂಗಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here