ನಿಸರ್ಗದ ಮಡಿಲಲ್ಲಿ ಕಂಚಿ ಕಲ್ಲು ಗುಡ್ಡ ಒಂದು ಸುಂದರ ತಾಣ

0
33
loading...

ಜೋಯಿಡಾ : ತಾಲೂಕಿನ ಅನೇಕ ಪ್ರೇಕ್ಷಣಿಯ ನಿಸರ್ಗ ತಾಣಗಳಲ್ಲಿ ಕಂಚಿ ಕಲ್ಲು ಗುಡ್ಡ ಕೂಡ ಒಂದು. ಕೊಡಸಳ್ಳಿ ಹಿನ್ನಿರಿನ ಪ್ರದೇಶದಲ್ಲಿನ ಕಾನೆರಿ-ಕಾಳಿ ನದಿಗಳ ಸುಂದರ ಸಂಗಮ ಸ್ಥಾನ, ನಿತ್ಯ ಹರಿದ್ವರ್ಣದ ಬೀಡು, ಒಮ್ಮೆ ನೋಡಿದರೆ ಇನ್ನೋಮ್ಮೆ ನೋಡಬೇಕೆನಿಸುವ ಈ ಸುಂದರ ತಾಣ ಗುಂದ ಅರಣ್ಯ ವಲಯದ ವನ್ಯಜೀವಿ ಪ್ರದೇಶದಲ್ಲಿ ಬರುವ ಯರಮುಖ ಶೇವಾಳಿ ಗ್ರಾಮದ ನಡುವೆ ಬೆಸೆದುಕೊಂಡಿದೆ.
ಕೊಡಸಳ್ಳಿ ಹಿನ್ನೀರಿನ ಪ್ರದೇಶ ಸಾಕಷ್ಟು ವಿಶಾಲವಾಗಿದ್ದರೂ ನಿರೀಕ್ಷಿಸಿದ ಮಟ್ಟದಲ್ಲಿ ಹಿನ್ನೀರು ಪ್ರದೇಶದ ಅಭಿವೃದ್ದಿಯಾಗಿಲ್ಲ. ಆದರೂ ಕೆಲವು ಸ್ಥಳಗಳಲ್ಲಿ ಅರಣ್ಯ ಇಲಾಖೆ ಕಚ್ಚಾ ರಸ್ತೆ ನಿರ್ಮಿಸಿ ನೋಡಲು ಅವಕಾಶ ಕಲ್ಪಿಸಿ ಕೊಟ್ಟಿದೆ , ಅಂಥ ಸ್ಥಳಗಳಲ್ಲಿ ಒಂದಾದ ಸ್ಥಳವೇ ಈ ಕಂಚಿ ಕಲ್ಲು ಗುಡ್ಡ.
ಎತ್ತರದ ಗುಡ್ಡದ ತುದಿಯಲ್ಲಿರುವ ವಿಶಾಲವಾದ ಕಲ್ಲಿನ ಮೆಲೆ ನಿಂತು ಸೈಹ್ಯಾದ್ರಿಯ ಪರ್ವತಗಳ ಸಾಲಿನ ಅಂಚಿನಲ್ಲಿ ಹಸಿರು ಸೀರೆ ಉಟ್ಟಿ ಬಳಕುತ್ತಾ ಸಾಗುವ ಕಾಳಿಯ ಹರಿವಿನ ದೃಶ್ಯ, ವನ್ಯಜೀವಿ ಧಾಮಗಳ ವೈಭವದ ನೋಟವನ್ನು ಒಮ್ಮೆ ಕಣ್ಣಾರೆ ಕಂಡರೆ ಮನಸ್ಸು ಮುದಗೊಳ್ಳದೆ ಇರಲಾರದು. ಸುತ್ತಲ ಸಮುದ್ರದ ತೊರಯಂತೆ ಕಾಣಿವ ಹಚ್ಚ ಹಸಿರಿನ ಪರ್ವತಗಳ ಸಾಲು, ಶಿಖರಗಳ ಸಾಲಿನ ಮಧ್ಯೆ ಪಾತಾಳಲೋಕವನ್ನೇ ಕಂಡಂತ ಅನುಭವವನ್ನು ಉಂಟುಮಾಡುವ ಕಾಳಿಕಣಿವೆಯ ಭಯಾನಕ ಕಂದಕಗಳು. ಕಾಡಿನ ಮಧ್ಯೆ ಸಾಗುತ್ತಿದ್ದಂತೆ ಕೇಳುವ ವನ್ಯ ಜೀವಿಗಳ ಕೂಗು, ಹಕ್ಕಿಗಳ ಚಿಲಿಪಿಲಿ ನಾದ, ಎಲ್ಲವೂ ಮೇಳೈಸಿ ಪ್ರವಾಸಿಗರಿಗೆ ಹೊಸ ಲೋಕವೇ ಸೃಷ್ಟಿಗೊಂಡ ಅನುಭವ ಉಂಟಾಗುತ್ತಿದೆ.
ತಾಲೂಕಿನಲ್ಲಿ ಸುಪಾ ಡ್ಯಾಂ ನಿರ್ಮಾಣದ ನಂತರ ಹಿನ್ನೀರಿನ ಪ್ರದೇಶಗಳಲ್ಲಿ ಸಾಕಷ್ಟು ಪ್ರವಾಸಿಗರಿಗಾಗಿ ರೆಸಾರ್ಟಗಳು ,ಹೊಮ್ ಸ್ಟೇಗಳು ನಿರ್ಮಾಣಗೊಂಡು ಪ್ರವಾಸಿಗರಿಗೆ ವಿವಿಧ ಆಕರ್ಷಣೆಗಳನ್ನು ನೀಡುತ್ತಿವೆ. ಆದರೆ ಕೊಡಸಳ್ಳಿಯ ಈ ಕಂಚಿಕಲ್ಲು ಗುಡ್ಡದ ಹಿನ್ನಿರಿನ ಪ್ರದೇಶ ಮಾತ್ರ ಅಷ್ಟೊಂದು ಅಭಿವೃದ್ದಿ ಕಂಡಿಲ್ಲ. ಅರಣ್ಯ ಇಲಾಖೆ ರಸ್ತೆ ಅಭಿವೃದ್ದಿ ಪಡಿಸಿದೆ, ಕುಳಿತುಕೊಳ್ಳು ಆಸನ ವ್ಯವಸ್ಥೆ ಮಾಡಿಸಿದೆ, ಆದರೆ ಬಂದು ಹೋಗುವ ಪ್ರವಾಸಿಗರು ಮಾತ್ರ ಅಗತ್ಯ ತಿಂಡಿ ತಿಸಿಸುಗಳನ್ನು ತಾವೇ ಕಟ್ಟಿಕೊಂಡೆ ಬರಬೇಕಿದೆ.
ಇದು ಎಲ್ಲಿದೆ.:- ಕೊಡಸಳ್ಳಿ ಡ್ಯಾಂ ನೀರಿನ ಸುಮಾರು 10 ಕಿ ಮೀ ಹಿನ್ನೀರಿನ ಈ ಸ್ಥಳದಿಂದ ಸುತ್ತೆಲ್ಲ ಕಾಣುವ ಪರಿಸರ ನೋಡುವವರ ಮನಸ್ಸಿಗೆ ಆನಂದ ತರುವಂತಿದೆ. ಕಾನೇರಿ ನದಿ ಕಾಳಿನದಿಯನ್ನು ಕೂಡುವ ಈ ಸಂಗಮ ಸ್ಥಳದಿಂದ ಸುಮಾರು ಸಾವಿರ ಮೀಟರ ಎತ್ತರದಲ್ಲಿ ಗುಡ್ಡದ ಮೇಲೆ ಈ ಕಂಚಿ ಕಲ್ಲು ಗುಡ್ಡ ಇದೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಕುಳಿತು ಕೊಳ್ಳಲು ಬೆಂಚಿನ ವ್ಯವಸ್ಥೆ ನೆರಳಿನಾಶ್ರಯವನ್ನು ಅರಣ್ಯ ಇಲಾಖೆ ಮಾಡಿದೆ.
ಹೇಗೆ ಹೋಗುವುದು:- ಗುಂದ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಇಲ್ಲವೇ ಹೊಮ್ ಸ್ಟೇ ಗಳ ಸಹಕಾರದಿಂದ ಕಂಚಿ ಕಲ್ಲಗೆ ಹೋಗಬಹುದು . ಗುಂದದಿಂದ ಕೇವಲ 10 ಕಿ.ಮೀ.ಅಂತರದೋಳಗೆ ಈ ತಾಣ ಇದ್ದು ಗುಂದದಲ್ಲಿ ತಂಗಲು ಅಮರಾ ಹೊಮ್ ಸ್ಟೇ ಇದೆ.

loading...

LEAVE A REPLY

Please enter your comment!
Please enter your name here