ನೀರು ಹಂಚಿಕೆಯಲ್ಲಿ ತಾರತಮ್ಯ ಪ್ರತಿಭಟನೆಯ ಎಚ್ಚರಿಕೆ

0
20
loading...

ಕನ್ನಡ ರಕ್ಷಣಾ ಸಮಿತಿ ಕಾರ್ಯಕರ್ತರಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ
ಹಾರೂಗೇರಿ 04: ಪಟ್ಟಣದ ವಾರ್ಡ ನಂಬರ 2ರಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದ್ದು, ಪುರಸಭೆ ವತಿಯಿಂದ ಪೂರೈಸುತ್ತಿರುವ ಟ್ಯಾಂಕರಗಳ ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಾರೆ ಕೂಡಲೇ ಅಧಿಕಾರಿಗಳು ಎಚ್ಚೇತ್ತು ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಕರಸ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ್ಯ ಮಹಾದೇವ ಯಲ್ಪಾರಟ್ಟಿ ಮಾತನಾಡಿ ಪುರಸಭೆಯಿಂದ ಪೂರೈಸುತ್ತಿರುವ ನೀರು ಸಮರ್ಪಕವಾಗಿ ಜನರಿಗೆ ಮುಟ್ಟುತ್ತಿಲ್ಲಾ, ಟ್ಯಾಂಕರಗಳ ಚಾಲಕರು ಕೇವಲ ಅರ್ಧಟ್ಯಾಂಕರ ನೀರು ತಂದು ತಮಗೆ ಪರಿಚಯವಿರುವ ಮನೆಯವರ ಮುಂದೆ ನಿಲ್ಲಿಸಿ ನೀರು ಪೂರೈಸುತ್ತಾರೆ, ಈ ಕುರಿತು ಅವರನ್ನು ಕೇಳಿದರೆ ನಾವು ನಮಗೆ ಎಲ್ಲಿ ಮನಸ್ಸು ಬರುತ್ತೋ ಅಲ್ಲಿ ನೀರು ಹಾಕುತ್ತೇವೆ ನೀವು ಯಾರಿಗೆ ಹೇಳತ್ತಿರಿ ಹೇಳ್ರಿ ಎಂದು ಸೊಕ್ಕಿನಿಂದ ಮಾತನಾಡುತ್ತಾರೆ. ಅಧಿಕಾರಿಗಳು ಸರಿಯಾಗಿ ನೀರು ಮುಟ್ಟುವಂತೆ ಮಾಡಬೇಕು ಇಲ್ಲದಿದ್ದರೆ ಪುರಸಭೆ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸಾರ್ವಜನಿಕರಿಗೆ ಎನಾದರೂ ತೊಂದರೆಯಾದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕು, ಜನರ ಸಮಸ್ಯೆ ಪರಿಹಾರಕ್ಕಾಗಿ ಯಾವುದೇ ತಾರತಮ್ಯವಿಲ್ಲದೇ ಜನರಿಗೆ ಸರಕಾರದಿಂದ ಬರುವ ಪ್ರತಿಯೊಂದು ಯೋಜನೆಗಳನ್ನು ಸಮರ್ಪಕವಾಗಿ ಮುಟ್ಟಿಸುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜು ಹಳದಮನಿ, ಚಂದ್ರವ್ವ ತೇರದಾಳ, ಮಂಜುಳಾ ಹಳದಮನಿ, ಕಸ್ತೂರಿ ನಾಗನೂರ, ಮಂಜುಳಾ ಕೆಳಗಡೆ, ಗಂಗಪ್ಪಾ ಕೆಳಗಡೆ, ಲಕ್ಷ್ಮೀಬಾಯಿ ಕಂಟಿಕಾರ, ಶ್ರೀದೇವಿ ಕಂಟಿಕಾರ, ಸುಮಿತ್ರಾ ಮಾದರ, ರಾಜೇಂದ್ರ ತೇರದಾಳ, ಆಯುಷಾ ಖಣದಾಳ, ಹಸೀಮ ಬಸರಗಿ, ಪೈಗಂಬರ ಬಸರಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here