ನೂತನ ಪಿಕೆಪಿಎಸ್ ಕಟ್ಟಕ್ಕೆ ಭೂಮಿ ಪೂಜೆ

0
23
loading...

ಯಮಕನಮರಡಿ 01:- ಹುಕ್ಕೇರಿ ತಾಲೂಕಿನ ಕುರಣಿವಾಡಿ ಗ್ರಾಮದ ಕೃಷಿ ಪತ್ತಿನ ಸಹಕಾರಿಯ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ನಿರಂತರ ಜ್ಯೋತಿ ವಿದ್ಯುತ ಸರಬರಾಜದ ಉದ್ಘಾಟನೆ ಕಾರ್ಯಕ್ರಮವು ದಿ. 30 ರಂದು ಮಾಜಿ ಚಿಕ್ಕೋಡಿ ಸಂಸದ ಹಾಗೂ ಬೆಳಗಾವಿ ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷರು ಆದ ರಮೇಶ ಕತ್ತಿ ಹಾಗೂ ಯಮಕನಮರಡಿ ಮತಕ್ಷೇತ್ರದ ಮಾಜಿ ಸಚಿವ ಸತೀಶ ಜಾರಕಿಹೊಳಿಯವರು ಉಪಸ್ಥಿತದ್ದು, ಕಟ್ಟಡಕ್ಕೆ ಚಾಲನೆ ನೀಡಿದರು.
ಸಚಿವರು ಸಂಸದರು ಮಾತನಾಡುತ್ತಾ ಸರ್ಕಾರದ ಯೋಜನೆಗಳನ್ನು ಪಕ್ಷಬೇದ ಮರೆತು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ನೂತನ ಕಟ್ಟಡದ ಅಂದಾಜು ವೆಚ್ಚ 25 ಲಕ್ಷ ರೂ.ಗಳಾಗಿದ್ದು, ಗ್ರಾಮಸ್ಥರು ಹಾಗೂ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿ ಮೇಲಿಂದ ಮೇಲೆ ನೂತನ ಕಟ್ಟಡದ ಕಾಮಗಾರಿ ಗುಣಮಟ್ಟವನ್ನು ನೀರೀಕ್ಷಿಸುತ್ತಿರಬೇಕು. ಯಾವುದೇ ತರಹದ ಕಳಪೆ ಕಾವiಗಾರಿಯಾಗದಂತೆ ನಿಗಾವಹಿಸಬೇಕು.
ಸದರ ಸಂಸ್ಥೆಯು ತನ್ನದೇ ಆದ ಸ್ವಂತ ಕಟ್ಟಡ ಹೊಂದುತ್ತಿರುವದೊಂದು ಸುಧೈವದ ಸಂಗತಿಯಾಗಿದೆ. ಈಗಾಗಲೇ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಅಲ್ಲದೆ ಬಡ್ಡಿ ರಹಿತ ಸಾಲಗಳನ್ನು ನೀಡುತ್ತಿದ್ದು, ದೇಶದ ಬೆನ್ನುಲುಬಾಗಿರುವ ರೈತ ಅಬಿವೃದ್ದಿ ಹೊಂದಿದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಸಂಸದ ರಮೇಶ ಕತ್ತಿ ಹಾಗೂ ಸತೀಶ ಜಾರಕಿಹೊಳಿಯವರು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಉಪಾಧ್ಯಕ್ಷ ರಾಜೇಂದ್ರ ತುಬಚಿ, ಹೆಬ್ಬಾಳ ಜಿ.ಪಂ. ಸದಸ್ಯ ಗಂಗಾಧರಸ್ವಾಮಿ ತವಗಮಠ, ಹಾಗೂ ಗ್ರಾಮದ ಹಿರಿಯರು ಮತ್ತು ಆಯಾ ಪಕ್ಷಗಳ ಅಬಿಮಾನಿಗಳು ಉಪಸ್ಥಿತರಿದ್ದರು. ಸಂಸ್ಥೆಯ ವತಿಯಿಂದ ಸಂಸದರಿಗೂ ಶಾಸಕರಿಗೂ ಜಿ.ಪಂ. ಸದಸ್ಯರಿಗೂ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಸಂಚಾಲಕರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಪಾರ ರೈತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here