ಪರಿಸರ ರಕ್ಷಣೆ, ಪೋಷಣೆಯ ಹವ್ಯಾಸ ಬೆಳೆಸಬೇಕು

0
44
loading...

ಧಾರವಾಡ : ಮಕ್ಕಳು ಹುಟ್ಟುಹಬ್ಬದ ನೆಪದಲ್ಲಿ ಕೇಕ್ ಕತ್ತರಿಸುವ ಪ್ರವೃತ್ತಿ ಕೈಬಿಟ್ಟು, ಪ್ರತಿವರ್ಷ ತಮ್ಮ ಜನ್ಮದಿನವನ್ನು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಮರ-ಗಿಡಗಳ ಮಹತ್ವ ನಮ್ಮ ಹಿರಿಯರಿಗೆ ಗೊತ್ತಿದ್ದುದರಿಂದಲೇ ಹಿಂದೆ ಅರಣ್ಯ ಸಂಪತ್ತು ಹೆಚ್ಚಾಗಿತ್ತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವಿ. ಶ್ರೀಶಾನಂದ ಹೇಳಿದರು.
ಮನಗುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಬೆಳೆಯುವ ಸಿರಿಗೆ ಮೊಳಕೆಯಲ್ಲಿಯೇ ಸಂಸ್ಕಾರ, ಪೋಷಣೆ ನೀಡುವ ಹಾಗೆ ಎಳೆಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಶ್ರಮದಾನ, ಪರಿಸರ ರಕ್ಷಣೆ, ಗಿಡ, ಮರ, ಪಕ್ಷಿ-ಪ್ರಾಣಿಗಳ ಪೋಷಣೆಯ ಹವ್ಯಾಸ ಬೆಳೆಸಬೇಕು. ಮಳೆ-ಬೆಳೆ ಸುಭೀಕ್ಷವಾಗಿತ್ತು. ಬದಲಾದ ನಗರೀಕರಣದಿಂದಾಗಿ ಮಳೆ ಅಭಾವ ಎದುರಾಗಿದೆ. ದವಸ-ಧಾನ್ಯ, ನೀರು ಪಶು-ಪಕ್ಷಿಗಳು ಸೇರಿ ಎಲ್ಲ ಜೀವಿಗಳು ಸಂಕಷ್ಟದಲ್ಲಿವೆ. ಅರಣ್ಯ ಬೆಳೆಸುವುದೊಂದೇ ನಮ್ಮ ಮುಂದಿರುವ ಪರಿಹಾರವಾಗಿದೆ ಎಂದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮಹಳ್ಳಿನಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿ, ಮಳೆಗೆ ಮರಗಳೇ ಆದಾರ, ಪ್ರತಿಯೊಬ್ಬರೂ ಸಾಲು ಮರದ ತಿಮ್ಮಕ್ಕನಂತಾಗಬೇಕು ಪರಿಸರ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ ಎಂದರು.
ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಗೋಡಬೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ ಮೀನಾ, ಅಪರ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಉಪಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ತಾಸಗಾಂವಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಬಿ.ಎಸ್. ಸಂಗಟಿ, ಪ್ರಫುಲ್ಲಾ ಎಸ್. ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಭಾವನಾ ಬೇಲೂರ, ತಾಲೂಕ ಪಂಚಾಯತ್ ಸದಸ್ಯ ಫಕ್ಕೀರಪ್ಪ ಬುಡ್ಡೀಕಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಬೆಟಗೇರಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್. ಹೆಗಡೆ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here