ಬದುಕು ಮನುಷ್ಯನಿಗೆ ಎಲ್ಲಾ ಪಾಠ ಕಲಿಸುತ್ತದೆ: ಡಾ. ಮೈತ್ರೇಯಿಣಿ

0
24
loading...

ಗೋಕಾಕ 26: ಮನುಷ್ಯನ ಮಾತು ಮನರಂಜನೆ ಅಲ್ಲ, ಅದರಿಂದ ಬದುಕು ಗಟ್ಟಿಗೊಳ್ಳಬಹುದು. ಆ ಬದುಕು ಮನುಷ್ಯನಿಗೆ ಎಲ್ಲವನ್ನು ಕಲಿಸುತ್ತದೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತಭಂಢಾರದಲ್ಲಿ ಭಾವ ಸಂಗಮದ 151 ನೇ ಮಾಸಿಕ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ “ಪ್ಲಸ್ಸು–ಮೈನಸ್ಸು” ಎಂಬ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಅಶೋಕ ಪೂಜಾರಿ ಉದ್ಘಾಟಿಸಿ ಮಾತನಾಡಿ, ಮಾನವೀಯತೆಯ ಸಂಪತ್ತು ಕ್ರೋಢೀಕರಿಸುವಲ್ಲಿ ಕಲೆ, ಸಂಗೀತ, ಸಾಹಿತ್ಯ ಹಾಗೂ ಸಂಸ್ಕøತಿಗಳು ನಮಗೆ ಅವಶ್ಯವಾಗಿವೆ ಎಂದರು.
ಭಾವ ಸಂಗಮದ ಮಹಾಂತೇಶ ತಾಂವಶಿ ಅಧ್ಯಕ್ಷ ವಹಿಸಿದ್ದರು. ವೇದಿಕೆ ಮೇಲೆ ನರೇಂದ್ರ ಪುರಂದರೆ, ಸುರೇಶ ಸೊಲ್ಲಾಪೂರಮಠ, ಸೋಮಶೇಖರ ಮಗದುಮ್ಮ, ಈಶ್ವರಚಂದ್ರ ಬೆಟಗೇರಿ ಮುಂತಾದವರು ಭಾಗವಹಿಸಿದ್ದರು.
ವಿದ್ಯಾ ಮಗದುಮ್ಮ ಪ್ರಾರ್ಥಿಸಿದರು. ಚುಟುಕು ಕವಿ ಟಿ.ಸಿ.ಮೊಹರೆ ಸ್ವಾಗತಿಸಿದರು. ಪ್ರಾಚಾರ್ಯ ಜಯಾನಂದ ಮಾದರ ನಿರೂಪಿಸಿದರು.
******

loading...

LEAVE A REPLY

Please enter your comment!
Please enter your name here