ಬಾಗೇವಾಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ

0
23
loading...

ನಿಪ್ಪಾಣಿ 02: ಕಳೆದ ಮೇ ತಿಂಗಳಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಕಾಂ. 6ನೇ ಸೆಮಿಸ್ಟರನಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ.ಆಯ್. ಬಾಗೇವಾಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳಲ್ಲಿ ಶೇ. 93.9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅವರಲ್ಲಿ 71 ವಿದ್ಯಾರ್ಥಿಗಳು ಉನ್ನತ ಶ್ರೇಣೀಯಲ್ಲಿ, 7 ವಿದ್ಯಾರ್ಥಿಗಳು ಪ್ರಥಮ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀದೇವಿ ಮುಂಡೆ ಶೆ. 95.57 ಅಂಕಗಳೊಂದಿಗೆ ಮಹಾವಿದ್ಯಾಲಯಕ್ಕೆ ಪ್ರಥಮಸ್ಥಾನ ಮತ್ತು ಇನ್‍ಕಮ್ ಟ್ಯಾಕ್ಸ ಮತ್ತು ಡೈರೆಕ್ಟ ಟ್ಯಾಕ್ಸ ವಿಷಯದಲ್ಲಿ ಶೇ. 100ಕ್ಕೆ 100 ಅಂಕ ಪಡೆದಿದ್ದಾಳೆ. ಪಲ್ಲವಿ ಅಂಕಲಿ ಶೇ. 94.14 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಜೊತೆಗೆ ಇನ್‍ಕಮ್ ಟ್ಯಾಕ್ಸ ಮತ್ತು ಕಾಸ್ಟಿಂಗ ವಿಷಯದಲ್ಲಿ ಶೇ. 100ಕ್ಕೆ 100 ಅಂಕ ಗಳಿಸಿದ್ದಾಳೆ. ಸಂದ್ಯಾರಾಣಿ ದೊಡ್ಡಣ್ಣವರ ಶೇ. 91.85 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಶೃತಿ ಮಾಳಿ ಹಾಗು ರೋಹಿತ ಮಡಿವಾಳ ಇನ್‍ಕಮ್ ಟ್ಯಾಕ್ಸ ವಿಷಯದಲ್ಲಿ ಶೇ. 100ಕ್ಕೆ 100 ಅಂಕ, ಪಡೆದಿದ್ದಾರೆ.
ಈ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಕೆ.ಎಲ್.ಇ.ಸಂಸ್ಥೆಯ ಉಪಕಾರ್ಯಾಧ್ಯಕ್ಷ ಅಶೋಕಣ್ಣ ಬಾಗೇವಾಡಿ, ಪ್ರಾ. ಡಾ. ಎಂ.ಬಿ.ಕೋಥಳೆ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ.

loading...

LEAVE A REPLY

Please enter your comment!
Please enter your name here