ಬಿಜೆಪಿ ಪಕ್ಷದ ಮುಖಂಡರ ನಿರ್ಣಯ ಗೌರವಸಿ: ದೇಸಾಯಿ

0
18
loading...

ಖಾನಾಪುರ 23: ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಸಂಜಯ ಕುಬಲ ಅವರ ಹೆಸರು ಅಂತಿಮಗೊಂಡಿದೆ ಎಂಬ ವದಂತಿ ಹರಡಿದ ಪರಿಣಾಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕುಬಲ ಅವರಿಗೆ ಶುಭ ಹಾರೈಸಿದ್ದರು.
ಶನಿವಾರದ ದಿನಪತ್ರಿಕೆಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಠ್ಠಲ ಪಾಟೀಲ ಅವರ ಹೆಸರು ಘೋಷಣೆಯಾದ ಸುದ್ದಿ ಪ್ರಕಟಗೊಂಡಿದ್ದು, ಪಕ್ಷದ ವರಿಷ್ಠರ ಈ ನಡೆಯಿಂದ ಸಂಜಯ ಕುಬಲ ಮತ್ತು ಅವರ ಬೆಂಬಲಿಗರಿಗೆ ಅಸಮಾಧಾನ ಉಂಟಾಗಿದೆ. ಆದರೆ ಬಿಜೆಪಿ ಪಕ್ಷದ ಮುಖಂಡರ ನಿರ್ಣಯವನ್ನು ಗೌರವಿಸಿ ಪಕ್ಷದಲ್ಲಿ ಬಿರುಕು ಪ್ರದರ್ಶಿಸದೇ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯತ್ತ ಗಮನಹರಿಸಬೇಕು ಎಂದು ಮಾಜಿ ಜಿಪಂ ಸದಸ್ಯ ಬಾಬುರಾವ ದೇಸಾಯಿ ಕರೆ ನೀಡಿದರು.
ಪಟ್ಟಣದಲ್ಲಿ ಶನಿವಾರ ಜರುಗಿದ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವೂ ಸೇರಿದಂತೆ ಒಟ್ಟು 24 ಆಕಾಂಕ್ಷಿಗಳು ಹೆಸರು ನೀಡಿದ್ದು, ಕಳೆದ ತಿಂಗಳು ಜರುಗಿದ ಪಟ್ಟಣದಲ್ಲಿ ಧನಂಜಯ ಜಾಧವ ಅವರ ನೇತೃತ್ವದಲ್ಲಿ ಜರುಗಿದ ಪಕ್ಷದ ಮುಖಂಡರ ಸಭೆಯಲ್ಲಿ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆಯನ್ನು ಜಿಲ್ಲಾ ಮಟ್ಟದ ಸಮಿತಿಯ ವಿವೇಚನೆಗೆ ಬಿಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಜಿಲ್ಲಾ ಸಮಿತಿ ನೀಡಿದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗುವ ಮೂಲಕ ಪಕ್ಷದ ತತ್ವ ಸಿದ್ಧಾಂತಗಳನ್ನು ಗೌರವಿಸಬೇಕು ಎಂದರು.
ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂಜಯ ಕುಬಲ ಮಾತನಾಡಿ, ಕಳೆದ ಎರಡು ದಶಕಗಳಿಂದ ಪಕ್ಷದಲ್ಲಿದ್ದು ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡದೇ ನಿನ್ನೆ ಮೊನ್ನೆ ಪಕ್ಷಕ್ಕೆ ಕಾಲಿಟ್ಟ ಬೇರೊಬ್ಬರನ್ನು ಘೋಷಿಸುವ ಮೂಲಕ ತಮಗೆ ಅನ್ಯಾಯವೆಸಗಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಮುಖಂಡರನ್ನು ದೂರಿ ಮೊದಲು ತಮ್ಮ ಹೆಸರು ಬಹಿರಂಗಪಡಿಸಿ ನಂತರ ಬೇರೊಬ್ಬರ ಹೆಸರು ಬಿಡುಗಡೆ ಮಾಡಿರುವ ಪಕ್ಷದ ಜಿಲ್ಲಾಧ್ಯಕ್ಷರು ಈ ಬದಲಾವಣೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಪ್ರಹ್ಲಾದ ರೇಮಾಣಿ, ಪ್ರಮೋದ ಕೊಚೇರಿ, ಬಸವರಾಜ ಬೇಕಣಿ, ವಸಂತ ದೇಸಾಯಿ, ಕಿರಣ ಯಳ್ಳೂರಕರ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here